ಹೊಸ ಜೋಡಿ ಪ್ರಚಾರದ ಮೋಡಿ

7

ಹೊಸ ಜೋಡಿ ಪ್ರಚಾರದ ಮೋಡಿ

Published:
Updated:
ಹೊಸ ಜೋಡಿ ಪ್ರಚಾರದ ಮೋಡಿ

ಇತ್ತೀಚೆಗಷ್ಟೆ ದಾಂಪತ್ಯಕ್ಕೆ ಕಾಲಿಟ್ಟಿರುವ ನವಜೋಡಿ ಹೊಸ ಸಿನಿಮಾವೊಂದರ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ. ಜೆನಿಲಿಯಾ ಮತ್ತು ರಿತೇಶ್ ದೇಶ್‌ಮುಖ್ ಜೊತೆಯಾಗಿ ನಟಿಸಿರುವ `ತೇರೆನಾಲ್ ಲವ್ ಹೋ ಗಯಾ~ ಚಿತ್ರದ ಪ್ರಚಾರದಲ್ಲಿ ಅಭಿಮಾನಿಗಳ ಮುಂದೆ ಮತ್ತೆ ಜತೆಯಾಗಿ ಕಾಣಿಸಿಕೊಂಡಿದ್ದಾರೆ.ಮದುವೆಯಾದಾಗಿನಿಂದ ನಮಗೆಂದೇ ಸಮಯ ಬಿಡುವು ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಈ ಸಿನಿಮಾ ಪ್ರಚಾರದಲ್ಲಿ ಒಟ್ಟಿಗೆ ಪಾಲ್ಗೊಳ್ಳುತ್ತಿರುವುದು ಇಬ್ಬರೂ ಜೊತೆಗಿರಲು ಒಳ್ಳೆ ಅವಕಾಶ ನೀಡಿದೆ ಎಂದು `ಡ್ಯಾನ್ಸ್ ಇಂಡಿಯಾ ಡ್ಯಾನ್ಸ್~ ಕಾರ್ಯಕ್ರಮದ ವೇದಿಕೆಯಲ್ಲಿ ಖುಷಿಯಿಂದ ಹೇಳಿದರು ರಿತೇಶ್. ಮನದೀಪ್ ಕುಮಾರ್ ನಿರ್ದೇಶಿಸಿದ, ಟಿಪ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನಿರ್ಮಿಸುತ್ತಿರುವ `ತೇರೆನಾಲ್ ಲವ್ ಹೋ ಗಯಾ~ ಸಿನಿಮಾ ಇಂದು (ಶುಕ್ರವಾರ) ಬಿಡುಗಡೆಯಾಗಲಿದ್ದು, ಪ್ರಚಾರ ಕಾರ್ಯ ಜೋರಾಗಿ ನಡೆದಿದೆ. 8 ವರ್ಷದ ದೀರ್ಘ ಅಂತರದ ನಂತರ ಇದೀಗ ಒಟ್ಟಿಗೆ ಮತ್ತೆ ಚಿತ್ರ ಮಾಡಿರುವುದು ತುಂಬಾ ಸಂತೋಷ ನೀಡಿದೆ. ಈ ಅಪೂರ್ವ ಅವಕಾಶ ನೀಡಿರುವುದಕ್ಕೆ ನಿರ್ದೇಶಕರಿಗೆ ಮತ್ತು ನಿರ್ಮಾಪಕರಿಗೆ ಧನ್ಯವಾದಗಳು ಎಂದರು.2003ರಲ್ಲಿ `ತುಝೆ ಮೇರಿ ಕಸಂ~ ಚಿತ್ರದ ಮೂಲಕ ಪರಿಚಿತಗೊಂಡು 2004ರಲ್ಲಿ `ಮಸ್ತಿ~ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ಈ ಜೋಡಿ ಫೆಬ್ರುವರಿ 3ಕ್ಕೆ ದಾಂಪತ್ಯಕ್ಕೆ ಕಾಲಿಟ್ಟಿತ್ತು. ಆನಂತರ ರಿತೇಶ್ `ಕ್ಯಾ ಕೂಲ್ ಹೈ ಹಂ~, `ಅಪ್ನಾ ಸಪ್ನಾ ಮನಿ ಮನಿ~, `ಮಾಲಾ ಮಾಲ್ ವೀಕ್ಲಿ~, `ಧಮಾಲ್~, `ಹೇ ಬೇಬಿ~, `ಹೌಸ್ ಫುಲ್~ ಮುಂತಾದ ಹಾಸ್ಯ ಪ್ರಧಾನ ಚಿತ್ರಗಳಲ್ಲಿ ಕಾಣಿಸಿಕೊಂಡಿತ್ತು. `ಜಾನೆ ತು ಯಾ ಜಾನೆ ನಾ~, `ಲೈಫ್ ಪಾರ್ಟ್‌ನರ್~, `ಫೋರ್ಸ್~ ಮುಂತಾದ ಚಿತ್ರಗಳಲ್ಲಿ ಜೆನಿಲಿಯಾ ನಟಿಸಿದ್ದರು.`ತೇರೆನಾಲ್ ಲವ್ ಹೋ ಗಯಾ~ ಚಿತ್ರದ ಹೊರತಾಗಿ ರಿತೇಶ್ `ಹೌಸ್‌ಫುಲ್ 2~ನಲ್ಲಿ ಕಾಣಿಸಿಕೊಳ್ಳಲಿರುವುದು ಹೊಸ ಸುದ್ದಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry