ಹೊಸ ನಾಟಕ ‘ಮೆಕ್ಕಾ ದಾರಿ’ ಇಂದು

7

ಹೊಸ ನಾಟಕ ‘ಮೆಕ್ಕಾ ದಾರಿ’ ಇಂದು

Published:
Updated:
ಹೊಸ ನಾಟಕ ‘ಮೆಕ್ಕಾ ದಾರಿ’ ಇಂದು

ಮೆ ಕ್ಕಾ ದಾರಿ ನಾಟಕದ ವಸ್ತು ನೈಜಘಟನೆಯನ್ನು ಆಧರಿಸಿದೆ. ಇದು ನಡೆದಿರುವುದು ದಕ್ಷಿಣ ಆಫ್ರಿಕದಲ್ಲಿ. ಅಲ್ಲಿನ ಗ್ರಾಮೀಣ  ಪ್ರದೇಶವೊಂದರಲ್ಲಿ ಬದುಕಿದ್ದ ಒಬ್ಬ ಮಹಾನ್ ಕಲಾವಿದೆ ಹೆಲೆನ್. ಈಕೆ ಸೃಷ್ಟಿಸಿದ ಶಿಲ್ಪಗಳು, ಈಕೆ ಬದುಕಿದ್ದ ಮನೆ, ಎಲ್ಲವನ್ನೂ ಅಲ್ಲಿನ ಸರ್ಕಾರವು ದಕ್ಷಿಣ ಆಫ್ರಿಕಾದ ಪ್ರಸಿದ್ಧ ಕಲಾವಸ್ತು ಸಂಗ್ರಹಾಲಯವನ್ನಾಗಿ ಮಾಡಿದೆ.ಹೆಲೆನ್, ಹಳ್ಳಿಗಾಡಿನ ಒಂಟಿ ಮುದುಕಿ. ಆಕೆ ವಿಧವೆ. ಅದ್ಭುತ ಕಲಾವಿದೆ. ಒಂಟಿತನವನ್ನು ಸಹಿಸಲಾರದೆ ಕಲಾಸೃಷ್ಟಿಯಲ್ಲಿ ತನ್ನ ಬಿಡುಗಡೆಯ ಹಾದಿಯನ್ನು ಕಂಡುಕೊಳ್ಳುತ್ತಾರೆ. ಹಳೆಯ ಕಬ್ಬಿಣ, ಗಾಜಿನ ಚೂರು, ಒಡೆದ ಪಿಂಗಾಣಿ ಚೂರು, ಸಿಮೆಂಟು ಮರಳು ಇತ್ಯಾದಿ ಮರುಬಳಕೆ ಸಾಮಗ್ರಿಗಳನ್ನೇ ಬಳಸಿ ಆಕೆ ಅಸಾಧಾರಣ ಹಾಗೂ ಜಾನಪದ ಮಾದರಿಯ ಶಿಲ್ಪಗಳನ್ನು ತನ್ನ ಸುತ್ತಲೂ ಸೃಷ್ಟಿಸಿಕೊಂಡು ಅವುಗಳ ನಡುವೆ ಬದುಕುತ್ತಿರುತ್ತಾಳೆ.ಹೆಲೆನ್ನಳ ದುರಂತವೆಂದರೆ, ಇವಳ ಮೆಕ್ಕಾ, ಗೂಬೆ, ಒಂಟೆ, ಬೆಳಕು ಇತ್ಯಾದಿ ಕಲಾಕೃತಿಗಳಾಗಿ ಕಾಣುವ ಬದಲು ಕ್ರೈಸ್ತವಿರೋಧಿ ಪಾಖಂಡಿತನದ ಅಭಿವ್ಯಕ್ತಿಯಾಗಿ ಕಾಣಿಸುತ್ತದೆ. ಹೆಲೆನ್ ಒಬ್ಬ ಧರ್ಮಭ್ರಷ್ಟಳಾದವಳಂತೆ ಕಾಣುತ್ತಾಳೆ. ಊರ ಹುಡುಗರು ರಾತ್ರಿ ಹೊತ್ತು ಅವಳ ಮನೆಯ ಮೇಲೆ ಕಲ್ಲು ತೂರತೊಡಗುತ್ತಾರೆ. ಅವಳ ಅಸಾಧಾರಣ ಕಲಾಸೃಷ್ಟಿ ಅವಳಿಗೇ ಮುಳುವಾಗತೊಡಗುತ್ತದೆ. ಇದು ನಾಟಕದ ಹಿನ್ನೆಲೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry