ಮಂಗಳವಾರ, ಅಕ್ಟೋಬರ್ 22, 2019
22 °C

ಹೊಸ ಪಂಥಕ್ಕೆ ದಲೈಲಾಮಾ ಇಂಬು?

Published:
Updated:

ಬೀಜಿಂಗ್ (ಪಿಟಿಐ): ಟಿಬೆಟನ್ ಬೌದ್ಧ ಸನ್ಯಾಸಿಗಳ ಆತ್ಮಾಹುತಿ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಚೀನಾ ತೀವ್ರ ಅಸಹನೆ ವ್ಯಕ್ತಪಡಿಸಿದೆ.ತಮ್ಮ ಸ್ವಾಯತ್ತತೆಗಾಗಿ ಹೋರಾಟ ನಡೆಸುತ್ತಿರುವ ಟಿಬೆಟನ್ ಬೌದ್ಧರು, ಆತ್ಮಾಹುತಿ ಪ್ರಕರಣಗಳಲ್ಲಿ ಹೆಚ್ಚಾಗಿ ಭಾಗಿಯಾಗುತ್ತಿದ್ದಾರೆ. ಇದನ್ನು ನೋಡಿದರೆ ದಲೈಲಾಮಾ ತಮ್ಮ ರಾಜಕೀಯ ಲಾಭಕ್ಕಾಗಿ ಆತ್ಮಾಹುತಿ ಪಡೆಯನ್ನು ಒಳಗೊಂಡ ಹೊಸ ಪಂಥವೊಂದನ್ನೇ ಬೆಳೆಸುತ್ತಿರುವಂತೆ ಕಂಡುಬರುತ್ತಿದೆ ಎಂದು ಸರ್ಕಾರಿ ಸ್ವಾಮ್ಯದ `ಗ್ಲೋಬಲ್ ಟೈಮ್ಸ~ ವರದಿ ಮಾಡಿದೆ.ಟಿಬೆಟ್ ಸ್ವಾತಂತ್ರ್ಯದ ಹೋರಾಟದಲ್ಲಿ ಕೆಲವು ತಿಂಗಳಿನಿಂದೀಚೆಗೆ ಟಿಬೆಟ್‌ನಲ್ಲಿ ಇಬ್ಬರು ಸನ್ಯಾಸಿನಿಯರೂ ಸೇರಿದಂತೆ ಒಟ್ಟು 15 ಬೌದ್ಧ ಬಿಕ್ಕುಗಳು ಆತ್ಮಾಹುತಿ ಮಾಡಿಕೊಂಡಿದ್ದಾರೆ.

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)