ಹೊಸ ಪಂಪ್‌ಗಳ ಅಳವಡಿಕೆ ಹಿನ್ನೆಲೆ: ಜಾಕ್‌ವೆಲ್‌ಗೆ ವಿಶ್ರಾಂತಿ:ಬಾರದ ನೀರು; ಜನರಿಗೆ ಗೋಳು

7

ಹೊಸ ಪಂಪ್‌ಗಳ ಅಳವಡಿಕೆ ಹಿನ್ನೆಲೆ: ಜಾಕ್‌ವೆಲ್‌ಗೆ ವಿಶ್ರಾಂತಿ:ಬಾರದ ನೀರು; ಜನರಿಗೆ ಗೋಳು

Published:
Updated:

ಹುಬ್ಬಳ್ಳಿ: ಅಮ್ಮಿನಭಾವಿ ಜಾಕ್‌ವೆಲ್‌ನಲ್ಲಿ ಹೊಸ ಪಂಪ್‌ಗಳನ್ನು ಅಳವಡಿಸುವ ಕಾರ್ಯಾಚರಣೆ ಕೈಗೊಂಡಿದ್ದರಿಂದ ಅವಳಿನಗರಕ್ಕೆ ಬುಧವಾರ ಮಲಪ್ರಭಾ ನೀರು ಪೂರೈಕೆಯಾಗಿಲ್ಲ. ಹೀಗಾಗಿ ಹುಬ್ಬಳ್ಳಿ ಮತ್ತು ಧಾರವಾಡಗಳಲ್ಲಿ ಸರದಿಯಂತೆ ಬುಧವಾರ ಪೂರೈಕೆಯಾಗಬೇಕಿದ್ದ ಪ್ರದೇಶಗಳಲ್ಲಿ ಗುರುವಾರ ನೀರು ಸರಬರಾಜು ಮಾಡಲಾಗುವುದು ಎಂದು ಜಲ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.ಅಮ್ಮಿನಭಾವಿ ಜಾಕ್‌ವೆಲ್‌ನಲ್ಲಿ ಹೊಸ ಪಂಪ್‌ಗಳಿಗೆ ಸಂಪರ್ಕ ಕಲ್ಪಿಸುವ ಕಾಮಗಾರಿ ನಡೆಯಬೇಕಿದ್ದರಿಂದ ಪೂರ್ವಾನುಮತಿ ಪಡೆದು ಬುಧವಾರ ನೀರು ಪಂಪ್ ಮಾಡುವ ಪ್ರಕ್ರಿಯೆ ನಿಲ್ಲಿಸಲಾಗಿತ್ತು. ಹೊಸ ಪಂಪ್‌ಗಳ ಅಳವಡಿಕೆಯಿಂದ ನಗರಕ್ಕೆ ನೀರು ಪೂರೈಸುವ ವ್ಯವಸ್ಥೆ ಇನ್ನಷ್ಟು ಸುಧಾರಣೆ ಆಗಲಿದೆ ಎಂದು ಕಾರ್ಯಾಚರಣೆ ಉಸ್ತುವಾರಿ ವಹಿಸಿಕೊಂಡಿದ್ದ ಜಲ ಮಂಡಳಿ ಕಾರ್ಯನಿರ್ವಾಹಕ ಎಂಜಿನಿಯರ್ ಕೃಷ್ಣಮೂರ್ತಿ `ಪ್ರಜಾವಾಣಿ~ಗೆ ತಿಳಿಸಿದರು.`ಇನ್ನೂ ಮೂರು ಹೊಸ ಪಂಪ್‌ಗಳನ್ನು ಅಳವಡಿಸ ಬೇಕಿದ್ದು, ಇಷ್ಟರಲ್ಲಿಯೇ ಇನ್ನೊಂದು ಬಾರಿ ಜಾಕ್‌ವೆಲ್ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕಾ ಗುತ್ತದೆ~ ಎಂದು ಅವರು ಮಾಹಿತಿ ನೀಡಿದರು. `ಮಲಪ್ರಭಾ ಹಾಗೂ ನೀರಸಾಗರ ಎರಡೂ ಜಲಾಶಯಗಳಲ್ಲಿ ಅಗತ್ಯವಾದ ನೀರಿನ ಸಂಗ್ರ ಹವಿದ್ದು, ಮಳೆಗಾಲದವರೆಗೆ ಯಾವುದೇ ತೊಂದರೆ ಇಲ್ಲ~ ಎಂದು ಅವರು ಭರವಸೆ ವ್ಯಕ್ತಪಡಿಸಿದರು.`ಬೆಳಿಗ್ಗೆ 8ರಿಂದಲೇ ಕಾರ್ಯಾಚರಣೆ ಆರಂಭಿಸಲಾ ಗಿದ್ದು, ಪಂಪ್‌ಗಳಿಗೆ ಸಂಪರ್ಕ ಕಲ್ಪಿಸುವ ಕಾರ್ಯ ಮಧ್ಯರಾತ್ರಿ ವೇಳೆಗೆ  ಪೂರ್ಣಗೊಳ್ಳಲಿದೆ. ಗುರುವಾರ ಬೆಳಗಿನಿಂದ ನೀರು ಸರಬರಾಜು ಕ್ರಿಯೆ ಎಂದಿನಂತೆ ಪುನರಾರಂಭವಾಗಲಿದೆ~ ಎಂದು ಅವರು ವಿವರಿಸಿದರು. ತಾಂತ್ರಿಕ ಸಿಬ್ಬಂದಿ ರಾತ್ರಿಯಾದರೂ ಬಿಡದೆ ಕಾರ್ಯಾಚರಣೆಯನ್ನು ಮುಂದುವರಿಸಿತ್ತು.`ಈ ಮಧ್ಯೆ 10 ಕೆ.ವಿ. ಸಾಮರ್ಥ್ಯದ ಟ್ರಾನ್ಸ್‌ಫಾರ್ಮರ್ ಸೌಲಭ್ಯವನ್ನೂ ಈ ಜಾಕ್‌ವೆಲ್ ಕೇಂದ್ರಕ್ಕೆ ಒದಗಿಸಲಾಗಿದ್ದು, ಅದಕ್ಕೂ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗಿದೆ~ ಜಲ ಮಂಡಳಿಯ ಇನ್ನೊಬ್ಬ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಬಿ. ಸಿದ್ದನಾಯಕ ಹೇಳಿದರು.`ಪ್ರತಿದಿನ ಮಲಪ್ರಭಾ ಜಲಾಶಯದಿಂದ 140 ಎಂಎಲ್‌ಡಿ ನೀರು ಅವಳಿನಗರಕ್ಕೆ ಪೂರೈಕೆಯಾಗುತ್ತದೆ. ಬುಧವಾರ ಇಷ್ಟೊಂದು ಪ್ರಮಾಣದ ನೀರಿನ ಕೊರತೆ ಉಂಟಾಗಿದೆ. ಮೂರು ದಿನಕ್ಕೊಮ್ಮೆ ನೀರು ಪೂರೈಸುವ ಸರದಿ ಇದರಿಂದ ವ್ಯತ್ಯಾಸವಾಗಿದ್ದು, ವಾರದ ಅವಧಿಯಲ್ಲಿ ಎಲ್ಲವನ್ನೂ ಸರಿದೂಗಿಸಲಾ ಗುವುದು~ ಎಂದು ಅವರು ತಿಳಿಸಿದರು.ಸರದಿಯಂತೆ ನೀರು ಬಾರದ್ದರಿಂದ ಕಂಗಾಲಾದ ಜನ ಜಲ ಮಂಡಳಿ ಕಚೇರಿಗೆ ದೂರವಾಣಿ ಕರೆ ಮಾಡಿ `ನೀರು ಏಕೆ ಬಿಡುತ್ತಿಲ್ಲ~ ಎಂದು ಆತಂಕದಿಂದ ವಿಚಾರಿ ಸಿದರು. ಅಧಿಕಾರಿಗಳು ಸಾರ್ವಜನಿಕರನ್ನು ಸಮಾಧಾನ ಮಾಡುವಷ್ಟರಲ್ಲಿ ಸುಸ್ತು ಹೊಡೆದರು. ಈ ಮಧ್ಯೆ ಅಮ್ಮಿನಭಾವಿಯಲ್ಲಿ ಪೈಪ್ ಒಡೆದಿದ್ದರಿಂದ ನೀರು ಪೂರೈಕೆಯಾಗಿಲ್ಲ ಎಂಬ ವದಂತಿಯೂ ಹಬ್ಬಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry