ಹೊಸ ಪವರ್‌ಪ್ಲೇ ಆಟ

7

ಹೊಸ ಪವರ್‌ಪ್ಲೇ ಆಟ

Published:
Updated:

ಹೈದರಾಬಾದ್: ಏಕದಿನ ಕ್ರಿಕೆಟ್‌ನಲ್ಲಿ ಹೊಸ ಪವರ್‌ಪ್ಲೇ ನಿಯಮಾಳಿಯನ್ನು ಭಾರತ ಮತ್ತು ಇಂಗ್ಲೆಂಡ್ ತಂಡಗಳು  ಹೈದರಾಬಾದಿನ ರಾಜೀವಗಾಂಧಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯುವ ಏಕದಿನ ಪಂದ್ಯದಲ್ಲಿ ಪಾಲಿಸಲಿವೆ.

ಅಕ್ಟೋಬರ್ 1ರಿಂದ ಜಾರಿಯಾಗಿರುವ ಈ ಹೊಸ ನಿಯಮದ ಪ್ರಕಾರ ಇನಿಂಗ್ಸ್‌ನ ಮೊದಲ ಹತ್ತು ಓವರುಗಳಲ್ಲಿ ಪವರ್‌ಪ್ಲೇ ಕಡ್ಡಾಯ. ಈ ಅವಧಿಯಲ್ಲಿ 30 ಯಾರ್ಡ್ ವೃತ್ತದ ಹೊರಗೆ ಇಬ್ಬರು ಫೀಲ್ಡರ್‌ಗಳು ಇರಲು ಮಾತ್ರ ಅವಕಾಶ. ಕ್ಯಾಚಿಂಗ್ ಪೊಸಿಷನ್‌ನಲ್ಲಿ ಇಬ್ಬರು ಫೀಲ್ಡರ್‌ಗಳು ಇರಲೇಬೇಕು.

ಬ್ಯಾಟಿಂಗ್ ಪವರ್‌ಪ್ಲೇ ಐದು ಓವರುಗಳು ಮತ್ತು ಬೌಲಿಂಗ್ ಪವರಪ್ಲೇಗೆ 5 ಓವರುಗಳು ಇರುತ್ತವೆ. ಈ ಸಂದರ್ಭದಲ್ಲಿ ಮೂವರು ಫೀಲ್ಡರುಗಳು 30 ಯಾರ್ಡ್ ವೃತ್ತದ ಹೊರಗೆ ಇರಬೇಕು. ಕ್ಯಾಚಿಂಗ್ ಪೊಸಿಷನ್ ಫೀಲ್ಡರ್ ಕಡ್ಡಾಯವಿಲ್ಲ. ಉಭಯ ತಂಡಗಳೂ 16ರಿಂದ40 ಓವರ್‌ಗಳ ಒಳಗೆ ತಮ್ಮತಮ್ಮ ಪವರ್‌ಪ್ಲೇ ತೆಗೆದುಕೊಳ್ಳಬೇಕು. ಮೊದಲ ಹತ್ತು ಓವರ್‌ಗಳ ಕಡ್ಡಾಯದ ಪವರ್‌ಪ್ಲೇ ಬೆನ್ನಹಿಂದೆಯೇ ಈ ಅವಕಾಶವನ್ನು ತೆಗೆದುಕೊಳ್ಳುವಂತಿಲ್ಲ. ಬ್ಯಾಟಿಂಗ್ ಮಾಡುವ ತಂಡವು 15ರಿಂದ 36ನೇ ಓವರ್ ಒಳಗೆ ಪವರ್‌ಪ್ಲೇ ತೆಗೆದುಕೊಳ್ಳಬೇಕು. ಕೊನೆಯ ಓವರುಗಳಲ್ಲಿ ತೆಗೆದುಕೊಳ್ಳುವಂತಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry