`ಹೊಸ ಬಗೆಯ ಪ್ರಚಾರ ಅಗತ್ಯ'

7

`ಹೊಸ ಬಗೆಯ ಪ್ರಚಾರ ಅಗತ್ಯ'

Published:
Updated:
`ಹೊಸ ಬಗೆಯ ಪ್ರಚಾರ ಅಗತ್ಯ'

ಬಾಲಿವುಡ್ ಸಿನಿಮಾಗಳಿಗೆ ಮಾರುಕಟ್ಟೆ ಒದಗಿಸುವ ಕುರಿತು ಸಾಕಷ್ಟು ಯೋಜನೆ ರೂಪಿಸುವ ಅಗತ್ಯವಿದೆ. ಚಿತ್ರಗಳನ್ನು ಯಾವಾಗ ಬಿಡುಗಡೆ ಮಾಡಬೇಕು. ತಯಾರಾದ ಪ್ರತಿಯೊಂದು ಚಿತ್ರಕ್ಕೂ ತಮ್ಮ ಪ್ರೇಕ್ಷಕರು ಯಾರು ಎಂಬುದರ ಅರಿವಿರಬೇಕು. ಅಮೆರಿಕದಲ್ಲಿ ಬಿಡುಗಡೆ ಮಾಡುವಾಗ ಯಾವ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಆಯಾಯ ಚಿತ್ರಗಳ ಪ್ರೇಕ್ಷಕರಿಗೆ ತಕ್ಕಂತೆ ಚಿತ್ರಗಳ ಬಿಡುಗಡೆ ಕುರಿತು ಚಿಂತಿಸಬೇಕು.ಹೀಗೆಂದವರು ಬಾಲಿವುಡ್ ಹಾಗೂ ಹಾಲಿವುಡ್‌ನಲ್ಲಿ ತಮ್ಮದೇ ನಟನಾ ಛಾಪು ಮೂಡಿಸಿರುವ ನಟ ಇರ್ಫಾನ್ ಖಾನ್. `ನಮ್ಮ ಬಳಿ ಒಂದು ಸಿದ್ಧ ಸೂತ್ರವಿದೆ. ಅದೇ ಸೂತ್ರವನ್ನು ಎಲ್ಲಾ ಸಿನಿಮಾಗಳಿಗೂ ಬಳಸುತ್ತಿದ್ದೇವೆ. ಪ್ರತಿಯೊಂದು ಸಿನಿಮಾಗಳಿಗೂ ಒಂದೇ ರೀತಿಯ ದರ ನಿಗದಿಪಡಿಸಲಾಗಿದೆ. ಜತೆಗೆ ಒಂದೇ ಬಗೆಯಲ್ಲಿ ಸಿನಿಮಾ ಪ್ರಚಾರವನ್ನೂ ನಡೆಸಲಾಗುತ್ತಿದೆ. ಹೀಗಾಗಿ ನೂರು ಕೋಟಿ ಸಿನಿಮಾ ಹಾಗೂ ಐದು ಕೋಟಿ ಸಿನಿಮಾಗಳಿಗೆ ಯಾವ ಬಗೆಯ ವ್ಯತ್ಯಾಸಗಳೂ ಕಾಣಿಸುತ್ತಿಲ್ಲ. ಈ ವ್ಯವಸ್ಥೆ ಬದಲಾಗಬೇಕಿದೆ' ಎಂದು ಇರ್ಫಾನ್ ಅಭಿಪ್ರಾಯಪಟ್ಟಿದ್ದಾರೆ.ಈ ನಿಟ್ಟಿನಲ್ಲಿ ಹಾಲಿವುಡ್ ಸಿನಿಮಾಗಳು ಭಿನ್ನ. ಅವುಗಳ ವಸ್ತು ಅವುಗಳ ಅಡಿಯಲ್ಲೇ ಹುದುಗಿರುತ್ತವೆ. ಒಂದು ರೀತಿಯಲ್ಲಿ ಶೇಕ್‌ಸ್ಪಿಯರ್ ನಾಟಕಗಳಂತೆ. ಮೇಲ್ನೋಟಕ್ಕೆ ಶೇಕ್‌ಸ್ಪಿಯರ್ ನಾಟಕವನ್ನೇ ಬರೆದಿದ್ದರೂ ಆತ ಹೇಳಬೇಕಾದ ಸಂದೇಶವನ್ನು ಅದರಲ್ಲೆಲ್ಲೋ ಹುದುಗಿಸಿಟ್ಟಿರುತ್ತಾರೆ. ಅದರಂತೆ ಒಬ್ಬ ಬುದ್ಧಿವಂತನಿಗೆ `ಸ್ಲಮ್ ಡಾಗ್ ಮಿಲೇನಿಯರ್' ಚಿತ್ರವನ್ನು ತೋರಿಸಿದರೆ ಆತ ಅದನ್ನು ಅರ್ಥ ಮಾಡಿಕೊಳ್ಳುವ ರೀತಿಯೇ ಬೇರೆಯಾಗಿರುತ್ತದೆ. ಅದರಂತೆ ಒಬ್ಬ ಹುಡುಗ `ಲೈಫ್ ಆಫ್ ಪೀ' ಚಿತ್ರವನ್ನು ಅರ್ಥ ಮಾಡಿಕೊಳ್ಳುವ ರೀತಿಯೇ ಬೇರೆಯಾಗಿರುತ್ತದೆ. ಇದನ್ನು ಅರ್ಥ ಮಾಡಿಕೊಂಡು ಸಿನಿಮಾಗಳಿಗೆ ಮಾರುಕಟ್ಟೆ ಒದಗಿಸಬೇಕಿದೆ' ಎಂಬುದು ಇರ್ಫಾನ್ ಸಲಹೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry