ಹೊಸ ಬಸ್ ಸೇವೆಗೆ ಸಚಿವರಿಂದ ಚಾಲನೆ

7

ಹೊಸ ಬಸ್ ಸೇವೆಗೆ ಸಚಿವರಿಂದ ಚಾಲನೆ

Published:
Updated:

ಮಹದೇವಪುರ: ವರ್ತೂರಿನಿಂದ ಹೊಸಕೋಟೆ ಮತ್ತು ನರಸಾಪುರ ಮಾರ್ಗವಾಗಿ ಕೋಲಾರಕ್ಕೆ ಸಂಚರಿಸುವ ನೂತನ ಬಸ್ ಸೇವೆಗೆ ಜವಳಿ ಸಚಿವ ವರ್ತೂರು ಪ್ರಕಾಶ್ ಶುಕ್ರವಾರ ಚಾಲನೆ ನೀಡಿದರು.`ವರ್ತೂರು ಗ್ರಾಮದಿಂದ ತಿರುಪತಿಗೆ ನೂತನ ಬಸ್ ಸೇವೆ ಶೀಘ್ರವೇ ಆರಂಭಿಸಲಾಗುತ್ತದೆ. ಈ ಕುರಿತು ಸಾರಿಗೆ ಇಲಾಖೆಗೆ ಈಗಾಗಲೇ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ವರ್ತೂರು ಗ್ರಾಮದ ಮುಖ್ಯರಸ್ತೆಗಳನ್ನು ವಿಸ್ತರಿಸಿದರೆ ಮಾತ್ರ ಊರು ಇನ್ನಷ್ಟು ಅಭಿವೃದ್ಧಿಗೊಳ್ಳುತ್ತದೆ. ಈ ಕಾರ್ಯಕ್ಕೆ ಸ್ಥಳೀಯ ಶಾಸಕರ ಸಹಕಾರ ಅತ್ಯಗತ್ಯ. ರಸ್ತೆ ವಿಸ್ತರಣೆ ಕಾರ್ಯ ಶೀಘ್ರವೇ ಆಗಲಿದೆ. ಅಲ್ಲದೆ ವರ್ತೂರಿನಲ್ಲಿ ಪ್ರತಿ ವಾರ ನಡೆಯಲಿರುವ ಸಂತೆಯನ್ನು ಬೇರೆ ಕಡೆ ಸ್ಥಳಾಂತರಿಸಲಾಗುವುದು. ಹೊಸ ಬಿಎಂಟಿಸಿ ಬಸ್ ಡಿಪೋವನ್ನು ಸ್ಥಾಪಿಸಲಾಗುವುದು~ ಎಂದು ಅವರು ತಿಳಿಸಿದರು.ಈ ಸಂದರ್ಭದಲ್ಲಿ ಶಾಸಕ ಅರವಿಂದ ಲಿಂಬಾವಳಿ, ಬಿಬಿಎಂಪಿ ಸದಸ್ಯರಾದ ಎಸ್.ಉದಯಕುಮಾರ್, ಎನ್.ಆರ್.ಶ್ರೀಧರ್ ರೆಡ್ಡಿ, ತಾಲ್ಲೂಕು ಪಂಚಾಯಿತಿ ಾಜಿ ಅಧ್ಯಕ್ಷ ಆರ್.ರಾಮಕೃಷ್ಣಪ್ಪ, ವರ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಸತೀಶಕುಮಾರ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry