ಬುಧವಾರ, ನವೆಂಬರ್ 20, 2019
21 °C

ಹೊಸ ಬ್ಯಾಂಕ್ ಕುರಿತ ಪ್ರಶ್ನೆಗಳಿಗೆ ಮಾಸಾಂತ್ಯ ಉತ್ತರ: ಆರ್‌ಬಿಐ

Published:
Updated:

ನವದೆಹಲಿ (ಪಿಟಿಐ): ಬ್ಯಾಂಕ್ ಸ್ಥಾಪನೆಗೆ ಆಸಕ್ತಿ ತೋರಿರುವ ಸಂಸ್ಥೆಗಳು ಹೊಸ ಬ್ಯಾಂಕ್ ಅನುಮತಿಗೆ ಸಂಬಂಧಿಸಿದ ಮಾರ್ಗಸೂಚಿ ಕುರಿತು ಮುಂದಿಟ್ಟಿರುವ ಪ್ರಶ್ನೆ ಮತ್ತು ಸಂದೇಹಗಳಿಗೆ ಈ ಮಾಸಾಂತ್ಯ ಅಥವಾ ಮೇ ಮೊದಲ ವಾರದಲ್ಲಿ ಸ್ಪಷ್ಟೀಕರಣವನ್ನು ಅಂತರ್ಜಾಲದಲ್ಲಿಯೇ ಪ್ರಕಟಿಸುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್‌ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.ಟಾಟಾ ಸಮೂಹ, ಬಿರ್ಲಾ, ರಿಲಯನ್ಸ್, ಎಲ್ ಅಂಡ್ ಟಿ, ವಿಡಿಯೊಕಾನ್ ಸೇರಿದಂತೆ ಹಲವು ಸಂಸ್ಥೆಗಳು ಬ್ಯಾಂಕ್ ಸ್ಥಾಪನೆಗೆ ಆಸಕ್ತಿ ತೋರಿವೆ. ಆರ್‌ಬಿಐ 4ರಿಂದ 5 ಸಂಸ್ಥೆಗಷ್ಟೇ ಅನುಮತಿ ನೀಡುವ ಸಾಧ್ಯತೆ ಇದೆ.

ಪ್ರತಿಕ್ರಿಯಿಸಿ (+)