ಹೊಸ ಭತ್ತ ತಳಿ ಇಳುವರಿ: ಚೀನಾ ವಿಶ್ವ ದಾಖಲೆ

ಗುರುವಾರ , ಮೇ 23, 2019
29 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಹೊಸ ಭತ್ತ ತಳಿ ಇಳುವರಿ: ಚೀನಾ ವಿಶ್ವ ದಾಖಲೆ

Published:
Updated:

ಬೀಜಿಂಗ್ (ಪಿಟಿಐ): ಚೀನಾದ ವಿಜ್ಞಾನಿಗಳು ಇತ್ತೀಚೆಗೆ ಅಭಿವೃದ್ಧಿ ಪಡಿಸಿರುವ ಮಿಶ್ರ ಭತ್ತ ತಳಿಯೊಂದು (ಹೈಬ್ರಿಡ್) ಇಳುವರಿಯಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದೆ.`ಡಿಎಚ್2525~ ಹೆಸರಿನ ಈ ಮಿಶ್ರ ತಳಿ ಭತ್ತವನ್ನು  ಚೀನಾದ ಹುನಾನ್ ಪ್ರಾಂತ್ಯದ ಲಾಂಗೊಯ್ ಎಂಬಲ್ಲಿ ಪ್ರಾಯೋಗಿಕವಾಗಿ ಬಿತ್ತಲಾಗಿತ್ತು. ಇದು  ಪ್ರತಿ 0.067 ಹೆಕ್ಟರ್ ಪ್ರದೇಶಕ್ಕೆ  926.6 ಕೆ.ಜಿಯಂತೆ ಇಳುವರಿ ನೀಡಿದ್ದು, ವಿಜ್ಞಾನಿಗಳಲ್ಲಿ ಆಶ್ಚರ್ಯ ಮೂಡಿಸಿದೆ ಎಂದು ಅಲ್ಲಿನ ಕೃಷಿ ಸಚಿವಾಲಯದ ಪ್ರಕಟಣೆ ತಿಳಿಸಿದೆ.ಚೀನಾದ ಕೃಷಿ ಸಚಿವಾಲಯದ ನೇತೃತ್ವದಲ್ಲಿ ತಜ್ಞರ ತಂಡವೊಂದು ಭತ್ತದ ತಳಿ ಬಿತ್ತಲಾಗಿದ್ದ ಸ್ಥಳಕ್ಕೆ ಭೇಟಿ ನೀಡಿ ಹೊಸ ದಾಖಲೆ  ದೃಢಪಡಿಸಿದೆ. ಆದರೆ, ಈ ದಾಖಲೆಯನ್ನು ಚೀನಾದ ಕೃಷಿ ಸಚಿವಾಲಯ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ.  ಹೊಸ ತಳಿಯಿಂದ ಪ್ರತಿ ಹೆಕ್ಟರ್‌ಗೆ 900 ಕೆ.ಜಿ ಇಳುವರಿ ಗುರಿ ಇಟ್ಟುಕೊಳ್ಳಲಾಗಿತ್ತು. ಈ ಗುರಿಯನ್ನು ಮೀರಿದ ಇಳುವರಿ ದಾಖಲಾಗಿದೆ.  ಆದರೆ, ಮುಂದಿನ ಎರಡು ಇಳುವರಿ ವರ್ಷದಲ್ಲಿ ತಲಾ 7 ಹೆಕ್ಟರ್ ಪ್ರದೇಶದಲ್ಲಿ ಹೊಸ ತಳಿಯನ್ನು ಬಿತ್ತಿ, ಇಳುವರಿ ಫಲಿತಾಂಶ ಖಾತರಿಗೊಳಿಸದ ನಂತರವೇ ಇದನ್ನು ಅಧಿಕೃತವಾಗಿ ಪ್ರಕಟಿಸಲು ಸಾಧ್ಯ ಎಂದು ವಿಜ್ಞಾನಿಯೊಬ್ಬರು ಹೇಳಿದ್ದಾರೆ. `ಡಿಎಚ್2525~ ತಳಿಯನ್ನು ಚೀನಾದ `ಹೈಬ್ರಿಡ್ ತಳಿಯ ಪಿತಾಮಹ ಯಾನ್ ಲಾಂಗ್‌ಪಿಂಗ್ ಅಭಿವೃದ್ಧಿಪಡಿಸಿದ್ದಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry