ಹೊಸ `ಮರ್ಡರ್' ಕಾಮಾತೀತ!

7

ಹೊಸ `ಮರ್ಡರ್' ಕಾಮಾತೀತ!

Published:
Updated:
ಹೊಸ `ಮರ್ಡರ್' ಕಾಮಾತೀತ!

`ಮರ್ಡರ್' ಚಿತ್ರದಲ್ಲಿನ ಹಸಿಬಿಸಿ ದೃಶ್ಯಗಳಲ್ಲಿ ಮೈಚಳಿ ಬಿಟ್ಟು ನಟಿಸಿದ್ದ ಮಲ್ಲಿಕಾ ಶೆರಾವತ್ ದಿನಬೆಳಗಾಗುವುದರೊಳಗೆ ಜನಪ್ರಿಯರಾದರು. `ಮರ್ಡರ್' ಚಿತ್ರದ ಯಶಸ್ಸಿನಿಂದ ಅದರ ಸರಣಿ ಚಿತ್ರಗಳು ತಯಾರಾದವು. ಈಗ `ಮರ್ಡರ್ 3' ತೆರೆಗೆ ಬರಲು ಸಿದ್ಧವಾಗಿದೆ. ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯವರು ಯಾವುದೇ ಕತ್ತರಿ ಪ್ರಯೋಗ ಮಾಡಲು ಸೂಚಿಸದೆ `ಯು/ಎ' ಸರ್ಟಿಫಿಕೇಟ್ ನೀಡಿರುವುದು ನಿರ್ದೇಶಕ ವಿಶೇಷ್ ಭಟ್ ಖುಷಿಯನ್ನು ಇಮ್ಮಡಿಗೊಳಿಸಿದೆ.`ಮರ್ಡರ್' ಹಾಗೂ `ಮರ್ಡರ್ 2' ಚಿತ್ರಗಳಲ್ಲಿ ಅತಿ ಎನಿಸುವಷ್ಟು ರಸವತ್ತಾದ ಸನ್ನಿವೇಶಗಳಿದ್ದವು. ಹಾಗಾಗಿ ಆ ಚಿತ್ರಗಳಿಗೆ `ಎ' ಸರ್ಟಿಫಿಕೇಟ್ ದೊರೆತಿತ್ತು. ಆದರೆ, `ಮರ್ಡರ್ 3' ಚಿತ್ರದಲ್ಲಿ  ಶೃಂಗಾರವನ್ನು ವಿಜೃಂಭಿಸುವ ದೃಶ್ಯಗಳು ಇಲ್ಲದೇ ಇರುವುದರಿಂದ ಚಿತ್ರಕ್ಕೆ `ಯು/ಎ' ಸರ್ಟಿಫಿಕೇಟ್ ಸಿಕ್ಕಿದೆ ಅಂತ ನಿರ್ದೇಶಕರು ಹೇಳಿಕೊಂಡಿದ್ದಾರೆ. “ನನಗೆ ತುಂಬಾ ಖುಷಿಯಾಗಿದೆ. ಸೆನ್ಸಾರ್ ಮಂಡಳಿ `ಮರ್ಡರ್ 3' ಚಿತ್ರವನ್ನು ವೀಕ್ಷಿಸಿ ಯಾವುದೇ ಬದಲಾವಣೆ ಸೂಚಿಸದೇ ಯು/ಎ ಸರ್ಟಿಫಿಕೇಟ್ ನೀಡಿದೆ. ನಾನು ಈ ಚಿತ್ರದಲ್ಲಿನ ಯಾವುದೇ ಒಂದು ಸಣ್ಣ ಸನ್ನಿವೇಶವನ್ನು ಬದಲಾಯಿಸಿಲ್ಲ” ಎಂದಿದ್ದಾರೆ ಮುಖೇಶ್ ಭಟ್ ಮಗ ವಿಶೇಷ್ ಭಟ್.`ಮರ್ಡರ್', `ಮರ್ಡರ್ 2' ಚಿತ್ರಗಳನ್ನು ಕುಟುಂಬ ಸಮೇತರಾಗಿ ಕುಳಿತು ಟೀವಿಯಲ್ಲಿ ವೀಕ್ಷಿಸುವುದು ಕಷ್ಟ ಎಂಬ ವಾದವನ್ನು ಸೆನ್ಸಾರ್ ಮಂಡಳಿ ಮುಂದಿಟ್ಟಿತ್ತು. `ಹಿಂದಿನ ಮರ್ಡರ್ ಸರಣಿ ಚಿತ್ರಗಳಲ್ಲಿ ಕಾಮವನ್ನು ಅತಿಯಾಗಿ ವಿಜೃಂಭಿಸಿದ್ದರಿಂದ ಸೆನ್ಸಾರ್ ಮಂಡಳಿಯಿಂದ ತೊಂದರೆ ಎದುರಿಸಬೇಕಾಯಿತು. ಆದರೆ, ಈ ಚಿತ್ರದಲ್ಲಿ ಅಂತಹ ಉದ್ರೇಕಿಸುವ ಸನ್ನಿವೇಶಗಳಿಲ್ಲ' ಎಂದಿದ್ದಾರೆ ವಿಶೇಷ್ ಭಟ್.ರಣ್‌ದೀಪ್ ಹೂಡಾ, ಅದಿತಿ ರಾವ್, ಸಾರಾ ಲಾರೆನ್ ತಾರಾಗಣವಿರುವ `ಮರ್ಡರ್ 3' ಚಿತ್ರವು `ಪ್ರೇಮಿಗಳ ದಿನ'ದ ಮರುದಿನ (ಫೆ.15) ತೆರೆಗೆ ಬರಲಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry