ಭಾನುವಾರ, ಜೂನ್ 20, 2021
25 °C
ಐದನೇಯ ಲೋಕಸಭಾ ಚುನಾವಣೆ-- – 1965

ಹೊಸ ಮುಖಗಳ ದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಎರಡನೇ ಚುನಾವಣೆ ನಡೆದಿದ್ದು, 1967ರಲ್ಲಿ. ಅಖಿಲ ಭಾರತ ಮಟ್ಟದಲ್ಲಿ ಇದು ನಾಲ್ಕನೇ ಸಾರ್ವತ್ರಿಕ ಚುನಾವಣೆ ಎಂಬುದು ವಿಶೇಷ.ಮತ್ತೆ ಕಾಂಗ್ರೆಸ್‌ನಿಂದ ಅಂಬೇಡ್ಕರ್‌ ವಾದಿಯಾಗಿದ್ದ ಎಸ್.ಎಂ. ಸಿದ್ದಯ್ಯ ಅವರೇ ಅಖಾಡಕ್ಕೆ ಇಳಿದರು. 1962ರ ಚುನಾವಣೆಯನ್ನು ಹೋಲಿಕೆ ಮಾಡಿದರೆ ಈ ಚುನಾವಣೆಯಲ್ಲಿ ಉಮೇದುವಾದಿಕೆ ಸಲ್ಲಿಸುವ ಅಭ್ಯರ್ಥಿಗಳ ಸಂಖ್ಯೆ ದ್ವಿಗುಣಗೊಂಡಿತ್ತು. ಒಟ್ಟು 8 ಅಭ್ಯರ್ಥಿಗಳು ಕಣದಲ್ಲಿ ಇದ್ದರು. ಹೊಸಬರು ಅದೃಷ್ಟ ಪರೀಕ್ಷೆಗೆ ಇಳಿದಿದ್ದರು.ಕ್ಷೇತ್ರದಲ್ಲಿ ಒಟ್ಟು 4,54,447 ಮತದಾರರು ಇದ್ದರು. ಈ ಪೈಕಿ 3,11,090 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದ ಹಿನ್ನೆಲೆಯಲ್ಲಿ ಶೇ 68.45ರಷ್ಟು ಮತದಾನವಾಗಿತ್ತು.ಚಲಾವಣೆಗೊಂಡಿದ್ದ ಮತಗಳಲ್ಲಿ 2,92,289 ಮತಗಳು ಮಾತ್ರವೇ ಊರ್ಜಿತಗೊಂಡಿದ್ದವು. 18,801 ಮತಗಳು ಅಸಿಂಧುಗೊಂಡಿದ್ದವು. ಈ ಮತಗಳ ಪ್ರಮಾಣ ಶೇ 6.04ರಷ್ಟಿತ್ತು.ಪುನಃ ಅದೃಷ್ಟ ಪರೀಕ್ಷೆಗೆ ಧುಮುಕಿದ್ದ ಎಸ್‌.ಎಂ. ಸಿದ್ದಯ್ಯ ಒಟ್ಟು 1,08,831 ಮತ ಪಡೆಯುವ ಮೂಲಕ ಗೆಲುವಿನ ನಾಗಾಲೋಟವನ್ನು ಮುಂದುವರಿ ಸಿದರು. ಚಲಾವಣೆ ಗೊಂಡಿದ್ದ ಮತಗಳಲ್ಲಿ ಶೇ 37.23ರಷ್ಟು ಮತ ಪಡೆದು ಜಯಭೇರಿ ಬಾರಿಸಿದರು. ಅವರ ಪ್ರತಿಸ್ಪರ್ಧಿಯಾಗಿದ್ದ ಎನ್‌.ಸಿ.ಬಿ. ರಂಗಯ್ಯ(ಎಸ್‌ಡಬ್ಯುಎ) 79,854 ಮತ ಪಡೆದರು.ಈ ಚುನಾವಣೆಯಲ್ಲಿ ಆರು ಮಂದಿ ಪಕ್ಷೇತರರು ಸ್ಪರ್ಧಿಸಿದ್ದರು. ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದ ಎಂ. ಪುಟ್ಟದೇವಯ್ಯ– 51,450, ಚಿಕ್ಕದೊಡ್ಡಯ್ಯ– 25,374, ಎಂ. ಬಸವಯ್ಯ– 13,853, ಮಾದಯ್ಯ– 7,357, ಕಪನಯ್ಯ– 3,301, ವಿ. ರೋಸಯ್ಯ 2,269 ಮತ ಪಡೆದರು.ಸಿದ್ದಯ್ಯ ಅವರ ಗೆಲುವಿನಿಂದ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಿಡಿತ ಮತ್ತಷ್ಟು ಬಲಗೊಂಡಿತು. ಹೊಸ ಮುಖಗಳು ಸಿದ್ದಯ್ಯ ಅವರ ರಾಜಕೀಯ ತಂತ್ರಗಾರಿಕೆ ಮುಂದೆ ಸೋಲು ಅನುಭವಿಸುವಂತಾಯಿತು.ಚಾಮರಾಜನಗರ ಲೋಕಸಭಾ  ಕ್ಷೇತ್ರ

ಅಭ್ಯರ್ಥಿ ಹೆಸರು                       ಪಕ್ಷ                               ಪಡೆದ ಮತಗಳು

ಎಸ್‌.ಎಂ. ಸಿದ್ದಯ್ಯ                 ಕಾಂಗ್ರೆಸ್                            1,08,831 (ವಿಜೇತ)

ಎನ್‌.ಸಿ.ಬಿ. ರಂಗಯ್ಯ              ಎಸ್‌ಡಬ್ಲ್ಯಎ                          79,854 

ಎಂ. ಪುಟ್ಟದೇವಯ್ಯ                 ಪಕ್ಷೇತರ                             51,450

ಚಿಕ್ಕದೊಡ್ಡಯ್ಯ                        ಪಕ್ಷೇತರ                             25,374

ಎಂ. ಬಸವಯ್ಯ                       ಪಕ್ಷೇತರ                            13,853

ಮಾದಯ್ಯ                             ಪಕ್ಷೇತರ                             7,357

ಕಪನಯ್ಯ                              ಪಕ್ಷೇತರ                              3,301

ವಿ. ರೋಸಯ್ಯ                        ಪಕ್ಷೇತರ                              2,269

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.