ಭಾನುವಾರ, ಆಗಸ್ಟ್ 18, 2019
22 °C

ಹೊಸ ರಾಜ್ಯಗಳ ಬೇಡಿಕೆ: ಸ್ಪಷ್ಟ ನಿಲುವು ಪ್ರಕಟಿಸಲು ಕೇಂದ್ರಕ್ಕೆ ಸಿಪಿಎಂ ಒತ್ತಾಯ

Published:
Updated:

ಹೈದರಾಬಾದ್ (ಪಿಟಿಐ): ಕಾಂಗ್ರೆಸ್‌ನಿಂದ ತೆಲಂಗಾಣ ರಚನೆ ಘೋಷಣೆ ಹೊರಬಿದ್ದ ನಂತರ ದೇಶದಲ್ಲಿ 28 ಹೊಸ ರಾಜ್ಯಗಳ ರಚನೆಗೆ ಬೇಡಿಕೆ ಹೆಚ್ಚಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ಈ ಬಗ್ಗೆ ಸ್ಪಷ್ಟ ನಿಲುವು ಪ್ರಕಟಿಸಬೇಕು ಎಂದು ಸಿಪಿಎಂ ಒತ್ತಾಯಿಸಿದೆ.ಶನಿವಾರ ನಡೆದ ಆಂಧ್ರಪ್ರದೇಶದ ಸಿಪಿಎಂ ಕಾರ್ಯಕಾರಿ ಸಮಿತಿ ಸಭೆಯ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ಪಾಲಿಟ್ ಬ್ಯೂರೊ ಸದಸ್ಯ ಸೀತಾರಾಂ ಯೆಚೂರಿ ಈ ಒತ್ತಾಯ ಮಾಡಿದ್ದಾರೆ.

ಖಚಿತ ಭರವಸೆಗೆ ತೃಣಮೂಲ ಕಾಂಗ್ರೆಸ್ ಆಗ್ರಹ

ನವದೆಹಲಿ (ಪಿಟಿಐ): ತೆಲಂಗಾಣ ರಚನೆಯನ್ನು ಚುನಾವಣಾ ತಂತ್ರ ಎಂದಿರುವ ತೃಣಮೂಲ ಕಾಂಗ್ರೆಸ್ ಪಕ್ಷ (ಟಿಎಂಸಿ), `ಮತ್ತೆ ಹೊಸ ರಾಜ್ಯ ರಚನೆಗೆ ಕೈಹಾಕುವುದಿಲ್ಲ' ಎಂಬ ಖಚಿತ ಭರವಸೆಯನ್ನು ಸಂಸತ್ತಿನಲ್ಲಿ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ನಿರ್ಧರಿಸಿದೆ.`ತೆಲಂಗಾಣ ರಚನೆ ಘೋಷಣೆ ನಂತರ ಇಡೀ ದೇಶವು ವ್ಯತಿರಿಕ್ತ ಪರಿಣಾಮ ಎದುರಿಸುತ್ತಿದೆ. ಆದ್ದರಿಂದ ಗೃಹ ಸಚಿವರು ಮತ್ತೆ ಹೊಸ ರಾಜ್ಯಗಳನ್ನು ರಚಿಸುವುದಿಲ್ಲ ಎಂಬ ಖಚಿತ ಭರವಸೆಯನ್ನು ಅಧಿವೇಶನದಲ್ಲಿ ನೀಡಬೇಕೆಂಬ ಪಕ್ಷದ ನಿಲುವನ್ನು ಸ್ಪೀಕರ್ ಮೀರಾ ಕುಮಾರ್ ಅವರಿಗೆ ಸ್ಪಷ್ಟವಾಗಿ ತಿಳಿಸಿದೆವು' ಎಂದು ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಹೇಳಿದರು.

Post Comments (+)