ಭಾನುವಾರ, ಆಗಸ್ಟ್ 25, 2019
20 °C
ಬಾಲಕಿ ಅಪಹರಣ-24 ಗಂಟೆ ನಂತರ ಬಿಡುಗಡೆ * ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿ

ಹೊಸ ವರಸೆಯ ಅಪರಾಧ-ಆತಂಕ

Published:
Updated:

ದೊಡ್ಡಬಳ್ಳಾಪುರ: ನಗರದ ಕುಚ್ಚಪ್ಪನ ಪೇಟೆಯಲ್ಲಿ 13 ವರ್ಷದ ಬಾಲಕಿಯನ್ನು ಅಪಹರಿಸಿ ಒಂದು ದಿನದ ನಂತರ ಅಪಹರಣ ನಡೆಸಿದ ಸ್ಥಳದಲ್ಲೇ ಬಿಟ್ಟು ಹೋಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.`ಬಾಲಕಿಯು ಮಂಗಳವಾರ ಸಂಜೆ 6 ಗಂಟೆ ಸಮಯದಲ್ಲಿ ತನ್ನ ಮನೆ ಸಮೀದಲ್ಲೇ ಇರುವ ದಿನಸಿ ಅಂಗಡಿಯಲ್ಲಿ ಕಡಲೆ ಬೀಜ ತರಲು ಸೈಕಲ್‌ನಲ್ಲಿ ಹೋಗ್ದ್ದಿದಳು. 7 ಗಂಟೆಯಾದರೂ ಹಿಂದಿರುಗಿ ಮನೆಗೆ ಬರಲಿಲ್ಲ. ಆಗ ಗಾಬರಿಗೊಂಡ ಪೋಷಕರು ತಕ್ಷಣವೇ ಸಂಬಂಧಿಗಳ ಮನೆಗಳಲ್ಲಿ ಹುಡುಕಾಟ ನಡೆಸಿದ್ದಾರೆ.ಬುಧವಾರ ಬೆಳಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಬಾಲಕಿ ಅಪಹರಣವಾಗಿದ್ದಾಳೆ ಎಂದು ದೂರನ್ನೂ ಸಲ್ಲಿಸಿದ್ದಾರೆ. ಇಷ್ಟರಲ್ಲಾಗಲೇ ನಗರ ಪೊಲೀಸರು ಮೂರು ತಂಡಗಳನ್ನು ಮಾಡಿಕೊಂಡು ಬಾಲಕಿಗಾಗಿ ಹುಡುಕಾಟ ಪ್ರಾರಂಭಿಸ್ದ್ದಿದರು. ಆದರೆ ಅಪಹರಣಕಾರರ ಬಗ್ಗೆ ಪೊಲೀಸರಿಗೆ ಯಾವುದೇ ಮಾಹಿತಿ ದೊರೆಯಲಿಲ್ಲ. ರಾತ್ರಿ 10 ಗಂಟೆ ವೇಳೆಗೆ ಬಾಲಕಿ ಸುರಕ್ಷಿತವಾಗಿ ಮನೆಗೆ ಮರಳಿ ಬಂದಿದ್ದಾಳೆ' ಎಂದು ಪೊಲೀಸರು ಮಾಹಿತಿ ನೀಡಿದರು.`ಬಾಲಕಿ ಮಾನಸಿಕವಾಗಿ ಘಾಸಿಗೊಂಡಿರುವುದರಿಂದ ಅಪಹರಣಕಾರನ ಬಗ್ಗೆ ಸ್ಪಷ್ಟ ಮಾಹಿತಿ ಪಡೆಯಲು ಸಾಧ್ಯವಾಗುತ್ತಿಲ್ಲ. ಆದರೆ ಆಕೆ ನೀಡಿರುವ ಕನಿಷ್ಠ ಹಾಗೂ ಬೆಂಗಳೂರು ಪೊಲೀಸರು ನೀಡಿರುವ ಹೆಚ್ಚಿನ ಮಾಹಿತಿ ಆಧರಿಸಿ ಶಂಕಿತ ಆರೋಪಿಯ ರೇಖಾಚಿತ್ರ ಬಿಡುಗಡೆ ಮಾಡಲಾಗಿದೆ. ಬಸ್, ರೈಲು ನಿಲ್ದಾಣ ಸೇರಿದಂತೆ ಜನಸಂದಣಿ ಪ್ರದೇಶದಲ್ಲಿ ಅಂಟಿಸಲಾಗಿದೆ' ಎಂದು ಸರ್ಕಲ್ ಇನ್‌ಸ್ಪೆಕ್ಟರ್ ಶಿವಾರೆಡ್ಡಿ `ಪ್ರಜಾವಾಣಿ'ಗೆ ತಿಳಿಸಿದರು.ಪೋಷಕರು ತಮ್ಮ  ಮಕ್ಕಳ ಅಪಹರಣ ನಡೆದ ತಕ್ಷಣ ಪೊಲೀಸರಿಗೆ ದೂರು ನೀಡಿ ಸೂಕ್ತ ಸಹಕಾರ ನೀಡಬೇಕು. ಸಾರ್ವಜನಿಕರು ದೂರವಾಣಿ ಸಂಖ್ಯೆ-9480802437, 9480802455,080-27655241,080-27622015,080- 27622025 ಸಂಪರ್ಕಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.     `ಒಬ್ಬನದೇ ಕೃತ್ಯ'

`ಅಪಹರಣಕಾರರಿಂದ ಯಾವುದೇ ರೀತಿಯ ದೂರವಾಣಿ ಕರೆಗಳು ಬಂದಿಲ್ಲ ಹಾಗೂ ಒತ್ತೆ ಹಣಕ್ಕೂ ಬೇಡಿಕೆ ಬಂದಿಲ್ಲ. ಹೀಗಾಗಿ ಇದು ಹೊಸ ಬಗೆಯ ಅಪರಾಧ ಕೃತ್ಯವಾಗಿದೆ. 10ರಿಂದ 16 ವರ್ಷದ ಒಳಗಿನ ಹೆಣ್ಣು ಮಕ್ಕಳನ್ನು ಮಾತ್ರ ಅಪಹರಿಸಿ ಅವರ ಮೈ ಮೇಲೆ ಇರುವ ಚಿನ್ನಾಭರಣ ದೋಚಿ ಒಂದು ಅಥವಾ ಎರಡು ದಿನಗಳ ನಂತರ ಮತ್ತೆ ಅದೇ ಸ್ಥಳದಲ್ಲಿ ಬಿಟ್ಟು ಹೋಗುತ್ತಿರುವ ಪ್ರಕರಣದ ಸಾಲಿಗೆ ಇದೂ ಸೇರಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ' ಎಂದು ಅವರು ಹೇಳಿದರು.`ಇದೇ ರೀತಿಯ ಬಾಲಕಿಯರ ಅಪಹರಣ ಕೃತ್ಯಗಳು ಬೆಂಗಳೂರು ನಗರ, ಗ್ರಾಮಾಂತರ ವಿಭಾಗ, ಬಾಗೇಪಲ್ಲಿ, ಚಿಕ್ಕಬಳ್ಳಾಪುರದಲ್ಲಿ ನಡೆದಿವೆ. ಅಪಹರಣಕಾರ ಸಂಜೆ ವೇಳೆ ಒಬ್ಬನೇ ಬೈಕ್‌ನಲ್ಲಿ ಒಂಟಿಯಾಗಿ ಓಡಾಡುತ್ತಾನೆ.10ರಿಂದ 16 ವರ್ಷದ ಹೆಣ್ಣು ಮಕ್ಕಳನ್ನೇ ಗುರಿಯಾಗಿಸಿ ಅವರನ್ನು ನಂಬಿಸಿ ತನ್ನ ಜೊತೆ ಕರೆದೊಯ್ಯುತ್ತಾನೆ.  ಐದಾರು ಗಂಟೆ ಅಥವಾ ಇಡೀ ರಾತ್ರಿ ಇಲ್ಲವೇ ಎರಡು ದಿನಗಳ ಕಾಲ ತನ್ನ ಜೊತೆಯಲ್ಲಿ ಇಟ್ಟುಕೊಂಡು ಅಪಹರಣ ಮಾಡಿದ ಸ್ಥಳದಲ್ಲಿಯೇ ಮತ್ತೆ ತಂದು ಬಿಡುತ್ತಾನೆ.ಬಾಲಕಿಯರ ಮೈಮೇಲಿನ ಚಿನ್ನಾಭರಣವನ್ನೂ ದೋಚುತ್ತಿದ್ದಾನೆ' ಎಂದು ಶಿವಾರೆಡ್ಡಿ ವಿವರಿಸಿದ್ದಾರೆ.

Post Comments (+)