ಹೊಸ ವರ್ಷ ಸ್ವಾಗತಕ್ಕೆ ಕುಂದಾನಗರಿ ಸಜ್ಜು

7

ಹೊಸ ವರ್ಷ ಸ್ವಾಗತಕ್ಕೆ ಕುಂದಾನಗರಿ ಸಜ್ಜು

Published:
Updated:
ಹೊಸ ವರ್ಷ ಸ್ವಾಗತಕ್ಕೆ ಕುಂದಾನಗರಿ ಸಜ್ಜು

ಬೆಳಗಾವಿ: ಹೊಸ ವರ್ಷದ ಸ್ವಾಗತಕ್ಕೆ ಕುಂದಾನಗರಿ ಸಜ್ಜಾಗಿದೆ. ಹಿಂದಿನ ವರ್ಷದ ಕಹಿ ನೆನಪುಗಳನ್ನು ಮರೆತು, ಸಿಹಿ ನೆನಪುಗಳೊಂದಿಗೆ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಜನರು ಸಜ್ಜಾಗಿದ್ದಾರೆ. ಹೊಸ ವರ್ಷಾಚರಣೆಯನ್ನು ಅದ್ದೂರಿಯಾಗಿ ನಡೆಸಲು ನಗರದ ಬಹುತೇಕ ಪ್ರದೇಶಗಳಲ್ಲಿ ತಯಾರಿ ಮಾಡಲಾಗಿದೆ.

ನಗರದ ಕ್ಲಬ್‌, ಹೊಟೇಲ್‌, ರೆಸ್ಟೋರಂಟ್‌ ಹಾಗೂ ರೆಸಾರ್ಟ್‌ಗಳಲ್ಲಿ ಹೊಸ ವರ್ಷಾಚರಣೆಗೆ ಭರ್ಜರಿ ತಯಾರಿ ಮಾಡಲಾಗಿದೆ.ಯುವಕರು, ವಿದ್ಯಾರ್ಥಿಗಳು ಹೊಸ ವರ್ಷಾಚರಣೆಗೆ ಕಾತರರಾಗಿದ್ದಾರೆ. ನಗರದ ಗಲ್ಲಿ ಗಲ್ಲಿಗಳಲ್ಲಿ ಹೊಸ ವರ್ಷಾಚರಣೆಗೆ ಸಿದ್ಧತೆ ಮಾಡಲಾಗಿದೆ.

ನಗರದ ಅನೇಕ ಕಡೆಗಳಲ್ಲಿ ಹಳೆಯ ವರ್ಷದ ಪ್ರತೀಕವಾಗಿ ಮನುಷ್ಯ ಆಕೃತಿಯ (ಓಲ್ಡ್‌ ಮ್ಯಾನ್‌) ಪ್ರತಿಕೃತಿ ಮಾಡಲಾಗಿದೆ. ಡಿ. 31 ರ ಮಧ್ಯರಾತ್ರಿ 12ಕ್ಕೆ ಈ ಪ್ರತಿಕೃತಿ ದಹಿಸಿ ಹೊಸ ವರ್ಷವನ್ನು ಬರಮಾಡಿಕೊಳ್ಳ­ಲಾ­ಗುತ್ತದೆ. ಈ ಸಂಪ್ರದಾಯ ಮೊದಲಿನಿಂದಲೂ ಜಾರಿಯಲ್ಲಿದೆ.ನಗರದ ಬಹುತೇಕ ಪ್ರದೇಶಗಳ ಮೂಲೆ ಮೂಲೆಗಳಲ್ಲಿ ಓಲ್ಡ್‌ ಮ್ಯಾನ್‌ ಪ್ರತಿಕೃತಿ ಕಂಡುಬರುತ್ತವೆ. ಕ್ಯಾಂಪ್‌ ಪ್ರದೇಶದಲ್ಲಿ ನಾಲ್ಕೈದು ದಶಕ­ಗಳಿಂದಲೂ ವಿಭಿನ್ನವಾದ ಅತಿ ಎತ್ತರದ ಓಲ್ಡ್‌ ಮ್ಯಾನ್‌ ಪ್ರತಿಕೃತಿ ನಿರ್ಮಿಸ­ಲಾಗುತ್ತ ಬರಲಾಗಿದೆ. ವಿವಿಧ ಸಂಘ–ಸಂಸ್ಥೆಗಳು ಮಕ್ಕಳು, ಮಹಿಳೆಯರಿಗಾಗಿ ಸಂಗೀತ ಸೇರಿದಂತೆ ಮನರಂಜನೆ ಕಾರ್ಯಕ್ರಮಗಳನ್ನು ಆಯೋಜಿಸಿವೆ.ಯುವಕ– ಯುವತಿಯರು ಹೊಸ ವರ್ಷಾಚರಣೆಗೆ ಪ್ರತಿಷ್ಠಿತ ಹೊಟೇಲ್‌­ಗಳತ್ತ ಮುಖ ಮಾಡಿದ್ದಾರೆ. ಹೊಸ ವರ್ಷದ ಸ್ವಾಗತಕ್ಕಾಗಿ ಹೊಟೇಲ್‌ಗಳಲ್ಲಿ ತರಹೇವಾರಿ ಭೋಜನ, ಮದ್ಯ ಹಾಗೂ ಅಬ್ಬರದ ಸಂಗೀತ ಕಾರ್ಯಕ್ರಮ ಸಜ್ಜಾಗಿದೆ. ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡ­ಲಾಗಿದೆ. ನಗರದ ಆಯಕಟ್ಟಿನ ಜಾಗೆ­ಯಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry