ಬುಧವಾರ, ಜೂನ್ 16, 2021
21 °C

ಹೊಸ ವೈದ್ಯರಿಗೆ ಹಳ್ಳಿ ಸೇವೆ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವೈದ್ಯಕೀಯ ಕೋರ್ಸ್ ಪೂರೈಸಿದ ನಂತರ ಗ್ರಾಮೀಣ ಪ್ರದೇಶದಲ್ಲಿ ಒಂದು ವರ್ಷ ಸೇವೆ ಸಲ್ಲಿಸುವುದನ್ನು ಕಡ್ಡಾಯಗೊಳಿಸುವ ಸಂಬಂಧ ಕಾಯ್ದೆ ರೂಪಿಸಲು ಸರ್ಕಾರ ತೀರ್ಮಾನಿಸಿದೆ.ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪೂರೈಸಿದ ನಂತರ ಒಂದು ವರ್ಷ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಿದ ನಂತರವೇ ಕರ್ನಾಟಕ ವೈದ್ಯಕೀಯ ಪರಿಷತ್‌ನಲ್ಲಿ ಕಾಯಂ ನೋಂದಣಿ ಮಾಡಿಸಲು ಅವಕಾಶ ನೀಡಲಾಗುತ್ತದೆ.-ಸರ್ಕಾರಿ ಕಾಲೇಜುಗಳಲ್ಲಿ ರಿಯಾಯಿತಿ ಮತ್ತು ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಸೀಟುಗಳನ್ನು ಪಡೆದಿರುವ ಎಂ.ಬಿ.ಬಿ.ಎಸ್ ಮತ್ತು ಸ್ನಾತಕೋ ತ್ತರ ವಿದ್ಯಾರ್ಥಿಗಳು ಕೋರ್ಸ್ ಪೂರ್ಣಗೊಳಿಸಿದ ನಂತರ ಸರ್ಕಾರಿ ಸೇವೆ ಸಲ್ಲಿಸಲು ವಿಫಲರಾದರೆ ವಿಧಿಸುವ ದಂಡದ ಪ್ರಮಾಣ ಹೆಚ್ಚಳ.-ಕಬ್ಬಿಣ ಮತ್ತು ಅಯೋಡಿನ್ ಕೊರತೆಯನ್ನು ಹೋಗಲಾಡಿಸುವ ದೃಷ್ಟಿಯಿಂದ ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ತಾಯಂದಿರಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಉಚಿತವಾಗಿ ದುಪ್ಪಟ್ಟು ಶಕ್ತಿವರ್ಧಕ ಉಪ್ಪು ಹಂಚಿಕೆ.-ಸದ್ಯ ಗುಲ್ಬರ್ಗ ಮತ್ತು ಬೆಳಗಾವಿ ವಿಭಾಗದಲ್ಲಿ ಜಾರಿಯಲ್ಲಿರುವ ವಾಜಪೇಯಿ ಆರೋಗ್ಯಶ್ರೀ ಯೋಜನೆ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಮೈಸೂರು, ಬೆಂಗಳೂರು ವಿಭಾಗಗಳಿಗೂ ವಿಸ್ತರಣೆ.-ವೈದ್ಯಕೀಯ ಸಲಹೆ ಅಥವಾ ಆರೋಗ್ಯಕ್ಕೆ ಸಂಬಂಧಪಟ್ಟ ಯಾವುದೇ ಮಾಹಿತಿ ಪಡೆಯಲು ಬಯಸುವ ವ್ಯಕ್ತಿಗಳಿಗೆ ಅನುಕೂಲ ಕಲ್ಪಿಸಲು ಉಚಿತ ಸಹಾಯವಾಣಿ ಸ್ಥಾಪನೆ.-ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ ಹಂತ ಹಂತವಾಗಿ ಆಯುಷ್ ಘಟಕಗಳ ಸ್ಥಾಪನೆ. ಈ ವರ್ಷ 15 ಘಟಕಗಳ ಪ್ರಾರಂಭ.-ಆಯುಷ್ ಔಷಧಿಗಳ ಉತ್ಪಾದನೆಗಾಗಿ ಹೊಸ ಘಟಕಗಳನ್ನು ಸ್ಥಾಪಿಸಲು ಒಂದು ಬಾರಿ ಬಂಡವಾಳ ಹೂಡಿಕೆಗೆ ಪ್ರೋತ್ಸಾಹ.-ಔಷಧಿ ವಿಷಯದ ಅಭಿವೃದ್ಧಿಗಾಗಿ ಪ್ರತ್ಯೇಕವಾದ ಸಮಗ್ರ ನೀತಿ ರೂಪಿಸುವುದು.-ರಾಜ್ಯದಲ್ಲಿ ಎಚ್‌ಐವಿ ಪೀಡಿತ ಸುಮಾರು 65,000 ಜನರು ಪ್ರತಿ ತಿಂಗಳು ಉಚಿತವಾಗಿ ಎ.ಆರ್.ಟಿ. ವೈದ್ಯಕೀಯ ಸೇವೆಯ ಪ್ರಯೋಜನ ಪಡೆಯುತ್ತಿದ್ದು, ಅವರ ಪ್ರಯಾಣ ವೆಚ್ಚವನ್ನು  ಇನ್ನು ಮುಂದೆ ಸರ್ಕಾರವೇ ಭರಿಸಲಿದೆ.-ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವಲಯಕ್ಕೆ ನೀಡುವ ಅನುದಾನ 3391ಕೋಟಿಗೆ ಏರಿಕೆ.-ಮೈಸೂರಿನಲ್ಲಿ ಸುಸಜ್ಜಿತವಾದ ಜಯದೇವ ಹೃದ್ರೋಗ ಸಂಸ್ಥೆಯ ಘಟಕ ಸ್ಥಾಪನೆಗೆ ಐದು ಕೋಟಿ ರೂಪಾಯಿ ನೆರವು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.