ಗುರುವಾರ , ನವೆಂಬರ್ 21, 2019
20 °C
ಗತ ವೈಭವದ ದಿನಗಳು

ಹೊಸ ಶಕೆ: ಹೊಸ ಮತದಾರ

Published:
Updated:

ನಾಲ್ಕನೆಯ ಮಹಾಚುನಾವಣೆಯೊಡನೆ ಹೊಸ ಮತದಾರನ ಉದಯ. ಇದು ಎಲ್ಲ ಉಮೇದುವಾರರ ಹಾಗೂ ಅದರ ಪ್ರಚಾರಕರ ಹೊಸ ಅನುಭವ. ಈ ಉದಯದ ಬೆಳಕಿಗೆ ತಕ್ಕಂತೆ ಅಭ್ಯರ್ಥಿಗಳು ಹಾಗೂ ಅವರ ಪ್ರಚಾರಕರು ನಡೆ ನುಡಿಯನ್ನು ಬದಲಾಯಿಸಬೇಕಾಗಿದೆ. ಬದಲಾಯಿಸಿಕೊಂಡು ಆತನನ್ನು ಕಾಣುವ ಕೆಲಸ ನಡೆಯುತ್ತಿದೆ. ಮತದಾರ ಪ್ರಜ್ಞಾವಂತನಲ್ಲವೆಂದಲ್ಲ. ಪ್ರಜ್ಞಾವಂತ ಮತದಾರರಿಲ್ಲವೆಂದಲ್ಲ. ಈ ಪ್ರಜ್ಞೆ ವಾದ ಬೆಳೆಸುತ್ತಿರುವುದು, ಬೆಳೆಸಿರುವುದು ನೂತನ ಬೆಳವಣಿಗೆ.ಕಳಚಿದ ಸಂಕೋಲೆ ಮತ ನೀಡುವ ಬಗ್ಗೆ ವಿವೇಚಿಸದಿರುವುದು, ವಿವೇಚಿಸಿದರೂ ಜಾತಿ, ಮತ ಹಣ ಇತರೆ ನಾನಾ ಅಕ್ರಮಗಳ ಬಂಧನಕ್ಕೆ ಅರಿವಿನಿಂದಲೋ ಅರಿವು ಇಲ್ಲದೆಯೋ ಒಳಗಾಗುತ್ತಿದ್ದವರೇ ಬಹುಮಂದಿ.ಈ ಪರಿಸ್ಥಿತಿ ಬದಲಾವಣೆಯಾಗಿಲ್ಲ. ಆದರೆ ಈ ಸಂಕೋಲೆಗಳನ್ನು ಕಿತ್ತೊಗೆಯುತ್ತಿರುವ ಮತದಾರರ ಸಂಖ್ಯೆ ಹೆಚ್ಚುತ್ತಿದೆ. ಮತದಾರರಲ್ಲಿ ಹೆದರಿಕೆ ಅಳಿದು ನಿರ್ಭಯ ಮೂಡಿರುವುದೇ ಈ ಬೆಳವಣಿಗೆಗೆ ಕಾರಣ. ಈ ರೀತಿ ಪರಿವರ್ತನೆಯಾಗುತ್ತಿರುವ ಮತದಾರರ ಸಂಖ್ಯೆ ಕಡಿಮೆಯೇ ಸರಿ.ಆದರೂ ಮತಕೇಳುವವರು ಅಲಕ್ಷ್ಯ ಮಾಡಲು ಸಾಧ್ಯವಾಗದಷ್ಟು ಸಂಖ್ಯೆಯಲ್ಲಿದ್ದಾರೆ. ತೀವ್ರ ಸ್ಪರ್ಧೆಯಿರುವ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗಿ, ಒಬ್ಬ ಮತದಾರನನ್ನೇ ಆಗಲಿ ಕಳೆದುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಉದ್ಭವವಾಗಿದೆ. ಕಾರಣ `ಮಾರ್ಜಿನ್' ಭಯ.

ಮನೆ - ಮಾಲಿಕ ಹೇಳಿದರೆ ಆಗಿಹೋಯ್ತು ಅನ್ನುವ ಕಾಲದ ಬದಲಾವಣೆಯ ಆರಂಭ. ನಾಲ್ಕನೆಯ ಚುನಾವಣೆಯಲ್ಲಿ ದರ್ಶನವಾಗುತ್ತಿರುವವನೇ ಈ ನಿರ್ಭಯಿ ಮತದಾರ. ಆದರವನಿನ್ನೂ ಅಲ್ಪಸಂಖ್ಯಾತ.

ಪ್ರತಿಕ್ರಿಯಿಸಿ (+)