ಸೋಮವಾರ, ಜನವರಿ 20, 2020
20 °C

ಹೊಸ ಸಿಇಟಿ ನೀತಿ: ಎಬಿವಿಪಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ವೃತ್ತಿ ಶಿಕ್ಷಣ (ಸಿಇಟಿ) ಪ್ರವೇಶ ಕಾಯ್ದೆ–2006ರ ಅನುಷ್ಠಾನ ವಿರೋಧಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನವರು ಬುಧ ವಾರ ಇಲ್ಲಿ ಪ್ರತಿಭಟನೆ ನಡೆಸಿದರು.ಸಿದ್ಧೇಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ನಡೆದ ಮೆರವಣಿಗೆಯಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.ಎಬಿವಿಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಶರತ್ ಬಿರಾದಾರ ಮಾತ ನಾಡಿ. ‘ಬಡ- ಪ್ರತಿಭಾವಂತ ವಿದ್ಯಾರ್ಥಿ ಗಳನ್ನು ವೃತ್ತಿ ಶಿಕ್ಷಣದಿಂದ ವಂಚಿಸುವ ಹುನ್ನಾರ ಇದಾಗಿದೆ. ದುರ್ಬಲ ವರ್ಗ ಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು ವಿಫಲವಾಗುವ ಮತ್ತು ಅವರ ಶೈಕ್ಷಣಿಕ ಹಕ್ಕನ್ನು ಮೊಟಕುಗೊಳಿಸುವ ಈ ಕಾಯ್ದೆ ಜಾರಿಗೆ ತರಬಾರದು’ ಎಂದು ಒತ್ತಾಯಿಸಿದರು.‘ಹೊಸ ನೀತಿ ಜಾರಿಯಾದರೆ ಯಾವುದೇ ಖಾಸಗಿ ಅನುದಾನರಹಿತ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಡಿ ಒಂದು ಸೀಟು ಸಹ ದೊರೆಯುವುದಿಲ್ಲ’ ಎಂದು ರಾಜೇಶ್‌ ಗುರಾಣಿ ಆತಂಕ ವ್ಯಕ್ತಪಡಿಸಿದರು.‘ಆಯಾ ಕಾಲೇಜುಗಳ ಮೂಲ ಸೌಕರ್ಯಗಳ ಆಧಾರದ ಮೇಲೆ ಶುಲ್ಕ ನಿಗದಿ ಪಡಿಸಿದರೆ ರಾಜ್ಯದಲ್ಲಿ ಏಕರೂಪ ಶುಲ್ಕ ವ್ಯವಸ್ಥೆ ಇಲ್ಲದಂತಾಗುತ್ತದೆ. ಇದರಿಂದ ಸಹಜವಾಗಿಯೇ ಶುಲ್ಕ ದುಬಾರಿಯಾಗಲಿದ್ದು, ಬಡವರಿಗೆ ಅದನ್ನು ಭರಿಸಲು ಸಾಧ್ಯವಾಗದು’ ಎಂದು ಸಂಕಲ್ಪಾ ಪಾಟೀಲ ಹೇಳಿದರು.ಕಾಯ್ದೆಯ ಮೂಲ ಉದ್ದೇಶದಲ್ಲಿ ಹೇಳಿದಂತೆ ಸಾಮಾನ್ಯ ಪ್ರವೇಶ ಪರೀಕ್ಷೆ ಮತ್ತು ಏಕಗವಾಕ್ಷಿ ಸಂದರ್ಶನ, ಏಕರೂಪ ಶುಲ್ಕಗಳ ನೀತಿಗೆ ವಿರುದ್ಧವಾಗಿ ಸರ್ಕಾರ ವರ್ತಿಸುತ್ತಿದೆ. ಅಲ್ಲದೆ ವಿದ್ಯಾರ್ಥಿಗಳು ಒಂದಕ್ಕಿಂತ ಹೆಚ್ಚು ಸಿಇಟಿ ಬರೆಯಬೇಕಾಗು ವುದರಿಂದ ಅವರು ಒತ್ತಡಕ್ಕೊಳಗಾಗು ತ್ತಾರೆ. ಪಾರದರ್ಶಕತೆ ಮತ್ತು ಪ್ರತಿಭೆ ರಕ್ಷಣೆಯ ಮೂಲ ಉದ್ದೇಶಗಳಿಗೆ ಕೊಡಲಿ ಪೆಟ್ಟನ್ನು ಹಾಕಿದಂತಾಗುತ್ತದೆ ಎಂದು ದೂರಿದರು.ಅನುಪಮಾ ಕುಲಕರ್ಣಿ ಮಾತ ನಾಡಿ, ಸುಮಾರು 5,000 ಸೀಟು ಗಳಿಗೆ ಮಾತ್ರ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರವೇಶ ಪರೀಕ್ಷೆ ನಡೆ ಸಲಿದೆ. ಉಳಿದ ಸುಮಾರು 75,000 ಸೀಟುಗಳಿಗೆ ಕಾಮೆಡ್–-ಕೆ ಪ್ರವೇಶ ಪರೀಕ್ಷೆ ನಡೆಸುವುದರಿಂದ ‘ಕಳ್ಳನ ಕೈಗೆ ಕೀಲಿ’ ಕೊಟ್ಟಂತೆ ಆಗುತ್ತದೆ ಎಂದು ದೂರಿದರು.ನಗರ ಘಟಕದ ಅಧ್ಯಕ್ಷ ಸೂರ್ಯ ಕಾಂತ ಬಿರಾದಾರ ಇತರರು ಮಾತನಾ ಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ  ಗಂಗೂಬಾಯಿ ಮಾನಕರ ಅವರಿಗೆ ಮನವಿ ಸಲ್ಲಿಸಿದರು.ಪ್ರಮುಖರಾದ ಸಂತೋಷ ಬಿರಾ ದಾರ, ಭಾಗ್ಯಾ ಮೂಲಿಮನಿ, ಆನಂದ ಚವ್ಹಾಣ, ತ್ರಿಲೊಕ ಇಂಡಿ, ಶ್ರೀನಿಧಿ ಕೋಗಿಲೆ,  ಅಕ್ಷಯ್‌ ವಾಘ್ಮೋರೆ, ಅಕ್ಷಯ್‌ ಹಿರೆಮಠ, ವೈಭವಿ ಲೋಣಿ  ಮತ್ತಿತರರು ಪ್ರತಿಭಟನೆಯಲ್ಲಿ  ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)