ಗುರುವಾರ , ಮೇ 19, 2022
20 °C

ಹೊಸ ಸ್ಮಾರ್ಟ್‌ಫೋನ್ ಬೆಲೆ ರೂ 1.39 ಲಕ್ಷ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ(ಪಿಟಿಐ): ಮೊಬೈಲ್ ಫೋನ್ ಹ್ಯಾಂಡ್‌ಸೆಟ್ ಬೆಲೆ ಹೆಚ್ಚೆಂದರೆ ಎಷ್ಟಿರಬಹುದು? ರೂ 30 ಸಾವಿರ, 40 ಸಾವಿರ, 50 ಸಾವಿರ..!ಊಹೂಂ... ಬುಧವಾರ ಮುಂಬೈನಲ್ಲಿ ಬಿಡುಗಡೆಯಾಗಿರುವ ಹೊಸ ಮೊಬೈಲ್ ಹ್ಯಾಂಡ್‌ಸೆಟ್ ಬೆಲೆ ಬರೋಬ್ಬರಿ ರೂ 1,39,000!ಸದ್ಯ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ಸ್ಮಾರ್ಟ್‌ಫೋನ್‌ಗಳು ರೂ40 ಸಾವಿರ ಮೊತ್ತದ ಆಸುಪಾಸಿನಲ್ಲಿವೆ. ಮೇ ಮಾಸಾಂತ್ಯದಲ್ಲಿ ಬಿಡುಗಡೆಯಾದ `ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್3~ ಹ್ಯಾಂಡ್‌ಸೆಟ್ ರೂ43180 ಇದೆ.ಆಪಲ್ ಕಂಪೆನಿ ಫೋನ್‌ಗಳೂ ಬಲು ದುಬಾರಿ ಇವೆ. ಆದರೆ, `ರಿಸರ್ಚ್ ಇನ್ ಮೋಷನ್~(ರಿಮ್) ಕಂಪೆನಿ ಬುಧವಾರ ಮುಂಬೈನಲ್ಲಿ ಹೊಸ ಹ್ಯಾಂಡ್‌ಸೆಟ್ `ಬ್ಲ್ಯಾಕ್‌ಬೆರ‌್ರಿ ಪೋಷೆ ಪಿ-9981 ಮಾದರಿ ಪರಿಚಯಿಸಿದೆ. ಇದರ ಬೆಲೆಯೇ ರೂ1.39 ಲಕ್ಷ.ಹಾಗೆಂದು ಈ ಮೊಬೈಲ್ ದೇಶದ ಉದ್ದುಗಲಕ್ಕೂ ಹರಡಿರುವ ಮೊಬೈಲ್ ಹ್ಯಾಂಡ್‌ಸೆಟ್ ಮಾರಾಟದ ಅಂಗಡಿಗಳಲ್ಲಿ ಲಭಿಸದು. ಏನಿದ್ದರೂ  ಕೆಲವೇ ಆಯ್ದ ಷೋರೂಂಗಳಲ್ಲಿ ಮಾತ್ರವೇ ಮಾರಾಟವಾಗಲಿದೆ. ಆನ್‌ಲೈನ್ ಕೋರಿಕೆ ಮೇರೆಗೂ ಲಭಿಸಲಿದೆ ಎಂದಿದ್ದಾರೆ `ರಿಮ್ ಇಂಡಿಯ~ನ ವ್ಯವಸ್ಥಾಪಕ ನಿರ್ದೇಶಕ ಸುನೀಲ್ ದತ್.1.2 ಗಿಗಾಹರ್ಟ್ಸ್ ಪ್ರೊಸೆಸರ್, ಲಿಕ್ವಿಡ್ ಗ್ರಾಫಿಕ್ಸ್ ತಂತ್ರಜ್ಞಾನ, ಎಚ್‌ಡಿ ವಿಡಿಯೊ ರೆಕಾರ್ಡಿಂಗ್, 24 ಬಿಟ್ ಹೈ ರೆಸಲ್ಯೂಷನ್ ಗ್ರಾಫಿಕ್ಸ್, ಅತ್ಯಾಧುನಿಕ ಸೆನ್ಸರ್, ಎನ್‌ಎಫ್‌ಸಿ (ನಿಯರ್ ಫೀಲ್ಡ್ ಕಮ್ಯುನಿಕೇಷನ್ಸ್)ಗೆ ಅಗತ್ಯವಿರುವ ತಂತ್ರಜ್ಞಾನ, 8 ಜಿಬಿ ಮೆಮೊರಿ(40 ಜಿಬಿವರೆಗೂ ವಿಸ್ತರಣೆ) ಮತ್ತಿತರ ಸವಲತ್ತುಗಳನ್ನು ಒಳಗೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.