ಹೊಸ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್-3

7

ಹೊಸ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್-3

Published:
Updated:

ಸದ್ಯದಲ್ಲೇನಾದರೂ ಸ್ಮಾರ್ಟ್ ಫೋನ್ ಖರೀದಿಸಬೇಕೆಂದಿದ್ದೀರಾ? ಹಾಗಾದರೆ ಇನ್ನೆರಡು ವಾರ ಕಾಯಿರಿ. ಜೂನ್ ಮೊದಲ ವಾರದಲ್ಲಿ ಸ್ಯಾಮ್ಸಂಗ್ `ಗ್ಯಾಲಕ್ಸಿ ಎಸ್-3~ ಭಾರತೀಯ ಮಾರುಕಟ್ಟೆಗೆ ಬರಲಿದೆ.ಆ್ಯಪಲ್ ಐಫೋನ್‌ಗೆ ತೀವ್ರ ಪೈಪೋಟಿ ನೀಡುವ ಉದ್ದೇಶದಿಂದ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್-3 ಅಭಿವೃದ್ಧಿಪಡಿಸಿದೆ. ಈಗಾಗಲೇ ಇದು ಯೂರೋಪ್ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿದ್ದು, ಸಂಚಲನ ಸೃಷ್ಟಿಸಿದೆ.`ಗ್ಯಾಲಕ್ಸಿ ಎಸ್-3~ ಆಂಡ್ರಾಯ್ಡ ಕಾರ್ಯನಿರ್ವಹಣಾ ತಂತ್ರಾಂಶದ ಹೊಸ ಆವೃತ್ತಿ 4.0 ಒಳಗೊಂಡಿದೆ. ಇದರ ಮೂಲಕ ಗ್ರಾಹಕ ಪಡೆಯುವ ಮೊಬೈಲ್ ಕಂಪ್ಯೂಟಿಂಗ್‌ನ ಅನುಭವವೇ ಬೇರೆ ಎನ್ನುತ್ತಾರೆ ಸಂಸ್ಥೆಯ ಮೊಬೈಲ್ ಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥ  ಜೆ.ಕೆ.ಶಿನ್.ಸ್ಯಾಮ್ಸಂಗ್ `ಗ್ಯಾಲಕ್ಸಿ ಎಸ್-2~ಗಿಂತಲೂ ದೊಡ್ಡದಾದ 4.8 ಇಂಚಿನ ದೃಶ್ಯ ಪರದೆಯನ್ನು `ಎಸ್-3~ ಹೊಂದಿದೆ. ಜತೆಗೆ ಹಲವು ತಾಂತ್ರಿಕ ವೈಶಿಷ್ಟ್ಯಗಳನ್ನೂ ಈ ಸ್ಮಾರ್ಟ್‌ಫೋನ್ ಒಳಗೊಂಡಿದೆ. ಬಳಕೆದಾರ, ಫೋನ್‌ನ ಪರದೆ ನೋಡುತ್ತಿದ್ದಂತೆಯೇ `ಸ್ಮಾರ್ಟ್ ಸ್ಟೇ~ ಸೌಲಭ್ಯ ತನ್ನಿಂದ ತಾನೇ ಕ್ರಿಯಾಶೀಲವಾಗಿ ಪರದೆ ಸರಿಯುವಂತೆ ಮಾಡುತ್ತದೆ.`ಮನುಷ್ಯನ ತಲೆಯಲ್ಲಿರುವ ಪ್ರತಿ ಆಲೋಚನೆಗಳನ್ನೂ, ಅಗತ್ಯಗಳನ್ನೂ ಮನಗಂಡು ಈ ಫೋನ್ ರೂಪಿಸಲಾಗಿದ್ದು, ಇದು ಅನನ್ಯ ಅನುಭವ ನೀಡಲಿದೆ ಎನ್ನುವುದು ಶಿನ್ ಅವರ ವಿವರಣೆ.ಇದರಲ್ಲಿರುವ `ಪಾಪ್ ಅಪ್ ಪ್ಲೇ~ ಎನ್ನುವ ಸೌಲಭ್ಯದ ಮೂಲಕ ಹೈ ಡೆಫಿನಿಷನ್(ಎಚ್‌ಡಿ) ಚಿತ್ರ ವೀಕ್ಷಿಸಬಹುದು. ಅಷ್ಟೇ ಅಲ್ಲ ಅನಿಯಮಿತವಾಗಿ ಇ-ಮೇಲ್ ಸಂದೇಶಗಳನ್ನು ಕಳುಹಿಸುತ್ತಲೇ ಇರಬಹುದು.  `ಜಿರೊ ಲಾಗ್ ಶಟರ್ ಸ್ಪೀಡ್~ ಹೊಂದಿರುವ, 8 ಮೆಗಾಫಿಕ್ಸಲ್ ಸಾಮರ್ಥ್ಯದ ಕ್ಯಾಮೆರಾ ಸಹ ಇದೆ.ಹಾಗಾಗಿ ಬಳಕೆದಾರ ಚಲಿಸುತ್ತಿರುವ ವಾಹನದಲ್ಲಿದ್ದಾಗಲೂ ಗರಿಷ್ಠ  ಗುಣಮಟ್ಟದ ಚಿತ್ರ/ವಿಡಿಯೊ ಸೆರೆಹಿಡಿಯಬಹುದು. 1.9 ಮೆಗಾಪಿಕ್ಸೆಲ್ ಸಾಮರ್ಥ್ಯದ ಫ್ರಂಟ್ ಫೇಸಿಂಗ್ ಕ್ಯಾಮೆರಾ ಮೂಲಕ ಎಚ್.ಡಿ ವಿಡಿಯೊರೆಕಾರ್ಡ್ ಮಾಡಿಕೊಳ್ಳಬಹುದು.

 

ಇದರಲ್ಲಿರುವ ಮತ್ತೊಂದು ವಿಶೇಷವೆಂದರೆ `ನಿಯರ್ ಫೀಲ್ಡ್ ಕಮ್ಯುನಿಕೇಷನ್ ಟೆಕ್ನಾಲಜಿ~ (ಎನ್‌ಎಫ್‌ಸಿ). ಬಳಕೆದಾರ ಸುಲಭವಾಗಿ ಆನ್‌ಲೈನ್‌ಗೇಮ್ ಮತ್ತು ಟಿವಿ ಚಲನಚಿತ್ರಗಳನ್ನು ನೋಡಲು ಸುಲಭವಾಗುವಂತೆ `ಗೇಮ್ ಹಬ್~ ಮತ್ತು `ವಿಡಿಯೊ ಹಬ್~ ಎಂಬ  ಸೌಲಭ್ಯ ಸೇರಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry