ಹೊಸ ಸ್ವಾದಗಳಲ್ಲಿ ಐಸ್ಕ್ರೀಂ
ಹೊಸ ರುಚಿ, ವಿಶಿಷ್ಟ ಸ್ವಾದವನ್ನು ಬಯಸುವ ಐಸ್ಕ್ರೀಂ ಪ್ರಿಯರಿಗೆ ಹಾಗೆನ್ ಡಾಜ್ ಎರಡು ವಿಭಿನ್ನ ಸ್ವಾದದ ಐಸ್ಕ್ರೀಂಗಳನ್ನು ಪರಿಚಯಿಸಿದೆ.
`ಸೀಕ್ರೆಟ್ ಸೆನ್ಸೇಶನ್~ ಎಂಬ ಹೆಸರಿನಲ್ಲಿ ಪರಿಚಿತವಾಗಿರುವ ಈ ಐಸ್ಕ್ರೀಂ ಶ್ರೇಣಿಯ ಹೆಸರು ಚಾಕೊಲೇಟ್ ಫಂಡಂಟ್ ಮತ್ತು ಕ್ರೀಮ್ ಬ್ರುಲೀ. ಚಾಕೊಲೇಟ್ ಕೇಕ್ನ ಮೇಲೊದಿಕೆಯೊಂದಿಗೆ ಚಾಕೊಲೇಟ್ ಫಂಡಂಟ್ ಬ್ರೌನಿಯ ತುಣುಕುಗಳನ್ನು ಪಡೆದುಕೊಂಡಿದ್ದು, ಚಾಕೊಲೇಟ್ ಮತ್ತು ಐಸ್ಕ್ರೀಂ ಎರಡೂ ಇಷ್ಟಪಡುವವರಿಗೆ ಇದು ಉತ್ತಮ ಆಯ್ಕೆ.
ಇನ್ನು ಕ್ರೀಂ ಬಯಸುವವರಿಗೆ ಶುಗರ್ಬೈಟ್ಗಳನ್ನು ಹೊಂದಿರುವ ಕ್ರೀಂ ಬ್ರುಲೀ ಅಚ್ಚುಮೆಚ್ಚಾಗುತ್ತದೆ. ಈ ಎರಡೂ ಐಸ್ಕ್ರೀಂಗಳಿಂದ ಐಸ್ಕ್ರೀಂ ತಿನ್ನುವುದೇ ಒಂದು ವಿಭಿನ್ನ ಅನುಭವವೆನಿಸುತ್ತದೆ ಎನ್ನುತ್ತದೆ ಕಂಪೆನಿ.
ಚಾಕೊಲೇಟ್ ಫಂಡಂಟ್ ಮತ್ತು ಕ್ರೀಮ್ ಬ್ರುಲೀ ಮಿನಿಕಪ್ಗಳಿಗೆ ತಲಾ 210 ರೂ. ಇವು ಮಲ್ಟಿ ಪ್ಯಾಕ್ಗಳಲ್ಲಿ (2 ಮಿನಿ ಕಪ್ಗಳು) ಲಭ್ಯವಿದ್ದು, 420 ರೂಗೆ ಇದು ಲಭ್ಯ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.