ಮಂಗಳವಾರ, ಮೇ 18, 2021
29 °C

ಹೋಂಡಾ ಸಿಬಿ ಟ್ರಿಗರ್ ಬೈಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೋಂಡಾ ಮೋಟರ್‌ಸೈಕಲ್  ಸ್ಕೂಟರ್ ಇಂಡಿಯಾ(ಎಚ್‌ಎಂಎಸ್‌ಐ), ರಾಜ್ಯದ ಮಾರುಕಟ್ಟೆಗೆ ಹೊಸ ಬೈಕ್ `ಸಿಬಿ ಟ್ರಿಗರ್' ಪರಿಚಯಿಸಿದೆ.`ಎಚ್‌ಎಂಎಸ್‌ಐ'ನ ದಕ್ಷಿಣ ವಲಯ ಮುಖ್ಯಸ್ಥ ಆಶಿಶ್ ಚೌದರಿ ನಗರದಲ್ಲಿ ಇತ್ತೀಚೆಗೆ ಸುದ್ದಿಗಾರರ ಜತೆ ಮಾತನಾಡಿ,  ಸಿಬಿ ಟ್ರಿಗರ್ ಜನವರಿಯಿಂದೀಚೆಗೆ ಬಿಡುಗಡೆಯಾದ ಹೋಂಡಾದ 4ನೇ ಉತ್ಪನ್ನ.  ದೇಶದ ದ್ವಿಚಕ್ರ ವಾಹನ ಮಾರುಕಟ್ಟೆಗೆ150 ಸಿ.ಸಿ.ಯಿಂದ 180 ಸಿ.ಸಿ.ವರೆಗಿನ ಮೋಟರ್ ಬೈಕ್ ಕೊಡುಗೆ ಶೇ 10ರಷ್ಟಿ ದೆ. 18ರಿಂದ 24 ವರ್ಷದವರು ಹೆಚ್ಚು ಇದೇ ಶ್ರೇಣಿ ಬೈಕ್ ಇಚ್ಛಿಸುತ್ತಾರೆ. ಇಂತಹವರಿಗೆಂದೇ ಟ್ರಿಗರ್ ಬೈಕ್ ವಿಶೇಷ ವಾಗಿ ವಿನ್ಯಾಸಗೊಳಿಸಲಾಗಿದೆ ಎಂದರು.ರಾಜ್ಯದ ದ್ವಿಚಕ್ರ ವಾಹನ ಮಾರುಕಟ್ಟೆ ಯಲ್ಲಿ ಬೆಂಗಳೂರಿನದು ಶೇ 37ರಷ್ಟು ದೊಡ್ಡ ಪಾಲಿದ್ದು, ಹೋಂಡಾ  ವಾಹನ ಮುಂಚೂಣಿಯಲ್ಲಿವೆ. ಟ್ರಿಗರ್ ಎಕ್ಸ್ ಷೋರೂಂ ಬೆಲೆ ಇಲ್ಲಿ ರೂ 70,733ರಿಂದ ರೂ 80,402ರವರೆಗೂ ಇದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.