ಮಂಗಳವಾರ, ಏಪ್ರಿಲ್ 20, 2021
25 °C

ಹೋಂಸ್ಟೇಗಳಿಂದ ಸಂಸ್ಕೃತಿಗೆ ಧಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೇಡಂ: `ಹೋಂ ಸ್ಟೇಗಳಂತಹ ಪಾಶ್ಚಾತ್ಯ ಸಂಪ್ರದಾಯಗಳು ದೇಶದ ಸಂಸ್ಕೃತಿಗೆ ಧಕ್ಕೆ ತರುತ್ತಿದೆ~ ಎಂದು ಗುಲ್ಬರ್ಗ ವಿಭಾಗ ಕಾರ್ಯನಿರ್ವಾಹಕ ಶಿವಲಿಂಗ ಕುಂಬಾರ ಕಳವಳ ವ್ಯಕ್ತಪಡಿಸಿದರು.  

 

ಈಚೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೇಡಂ ತಾಲ್ಲೂಕು ಘಟಕ ಪಟ್ಟಣದ ಶ್ರೀ ಕೊತ್ತಲ ಬಸವೇಶ್ವರ ದೇವಾಲಯ ಆವರಣದಲ್ಲಿ ಆಯೋಜಿಸಿದ್ದ ವಿಜಯದಶಮಿ ಉತ್ಸವ ಮತ್ತು ಭವ್ಯ ಪಥ ಸಂಚಲನ ಕಾರ್ಯಕ್ರಮದಲ್ಲಿ ಗಣವೇಶಧಾರಿಗಳನ್ನು ಉದ್ದೇಶಿಸಿ ಮಾತನಾಡಿದರು.`ಲವ್-ಜಿಹಾದ್, ಮತಾಂತರ, ಭಯೋತ್ಪಾದನೆಗಳು ದೇಶದ್ರೋಹ ಕೆಲಸ~ ಎಂದು ವಿಷಾದಿಸಿದ ಅವರು, ಅವುಗಳಿಂದ ದೇಶವನ್ನು ರಕ್ಷಿಸುವ ಕಾರ್ಯದಲ್ಲಿ ಆರ್‌ಎಸ್‌ಎಸ್ ಮುಂದಿರುವುದಾಗಿ ತಿಳಿಸಿದರು.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಹ ಪ್ರಾಧ್ಯಾಪಕ ಪ್ರೊ. ಬಿ. ಅಣ್ಣಾಸಾಗರ, ಪ್ರಸಕ್ತ ದೇಶವನ್ನು ಹಲವಾರು ಸಮಸ್ಯೆಗಳು ಕಾಡುತ್ತಿವೆ, ಇವುಗಳಿಂದ ಮುಕ್ತಿ ದೊರಕಿಸುವ ಶಕ್ತಿ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಶ್ರೀ ಕೊತ್ತಲ ಬಸವೇಶ್ವರ ದೇವಾಲಯ ಮತ್ತು ರುದ್ನೂರ ಮಠದ ಪೀಠಾಧಿಪತಿ ಪೂಜ್ಯ ಸದಾಶಿವ ಸ್ವಾಮಿಗಳು ಸಾನಿಧ್ಯ ವಹಿಸಿ , `ಸಂಘ ಸತ್ಯ, ಶಾಂತಿಗೆ ಪ್ರತೀಕವಾಗಿ, ಯಾವುದೇ ಜಾತಿ ಬೇಧಗಳಿಲ್ಲದೆ ಕೆಲಸ ಮಾಡುತ್ತಿದೆ~ ಎಂದು ಪ್ರಶಂಸಿದರು.ವಿನೋದ ನಿರೂಪಿಸಿದರು. ಶಿವಕುಮಾರ ಬೋಳಶೆಟ್ಟಿ ಪರಿಚಯಿಸಿದರು. ಶರಣು ಕೊಳ್ಳಿ  ಪ್ರಾರ್ಥಿಸಿದರು. ಅರುಣ ಪೂಜಾರಿ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ನಡೆದ ಪಥಸಂಚಲನದಲ್ಲಿ ನೂರಾರು ಸ್ವಯಂಸೇವಕರು ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.