ಹೋಗಿ ಬನ್ನಿ... ನಿಮಗೆ ವಿದಾಯ

7

ಹೋಗಿ ಬನ್ನಿ... ನಿಮಗೆ ವಿದಾಯ

Published:
Updated:
ಹೋಗಿ ಬನ್ನಿ... ನಿಮಗೆ ವಿದಾಯ

ಹೋಗಿ ಬನ್ನಿ

ನಿಮಗೆ ವಿದಾಯ

ಈ ರಾತ್ರಿ

ನಾನು ಸರಾಗವಾಗಿ

ನೋವಿನಾಳದ ಸಾಲುಗಳನ್ನು

ಬರೆಯುವ ಸಮಯ

ಭೂಮಿ ಗುಂಡಗಿದ್ದರೂ

ಮತ್ತೆ ಸಿಗುತ್ತೀರೋ ಇಲ್ಲವೋ ಎಂಬ

ಆತಂಕದಿಂದ

ಬರೆವ ಸಮಯ

ಪಕ್ಕದ ಕಾಲುವೆಯ ನೀರು

ತುಂಬಿ

ಹರಿವ ಸಮಯ

ನೀರಹೊಂಡದಲಿ ಮೀನೊಂದು ಚಿಮ್ಮಿ

ಹರಿವ ಹೊತ್ತಲ್ಲಿ

ನಿಮ್ಮ ನೆನಪು ಈ ಧಮನಿಯ ತುಂಬ

ಹರಿಯುತ್ತದೆ

ನಾಳೆಯಿಂದ ನೀವಿಲ್ಲ

ನಾನಿಲ್ಲ

ಬರೀ ಶೂನ್ಯದ್ದೆ ಸಮಯವೆಲ್ಲ

ಹಚ್ಚಿದ ಬಣ್ಣವ ಒರೆಸಿ

ಹೊಸದನ್ನು ಹಚ್ಚಿದರೂ

ಹಳೆಯದರ ವಾಸನೆ

ಗುರುತಿಗೆ

ಹೇಳಬಹುದೇ ವಿದಾಯ?

ನೀವು

ಓಡಾಡಿದ ಹಾದಿ ಹುಲ್ಲು ಬೆಳೆಯುತ್ತದೆ

ಮುಳ್ಳುಕಂಟಿ ಲಂಟಾನ ಕೂಡ.

ನಕ್ಕ ನಗೆ, ಬಿಟ್ಟ ನಿಟ್ಟುಸಿರು

ಗಾಳಿಯಲಿ ತೇಲಿ ಅಲೆಯುತ್ತದೆ

ಷೇಕ್ಸ್‌ಪಿಯರ್ ಓದುವಾಗ

ಧೋ ಎಂದು ಮಳೆ ಸುರಿವಾಗ

ಅಲಿಕಲ್ಲು ಬೀಳುವಾಗ

ಉಯ್ಯಾಲೆ ತೂಗುವಾಗ

ನಾನು

ನೆನಪಾದರೆ...

ಸರಿ,

ಹೋಗಿಬನ್ನಿ

ನಿಮಗೆ ವಿದಾಯ...

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry