ಹೋಟೆಲ್‌ನಲ್ಲಿ ಸೈಫ್ ರಾದ್ಧಾಂತ, ಪ್ರಕರಣ ದಾಖಲು

7

ಹೋಟೆಲ್‌ನಲ್ಲಿ ಸೈಫ್ ರಾದ್ಧಾಂತ, ಪ್ರಕರಣ ದಾಖಲು

Published:
Updated:
ಹೋಟೆಲ್‌ನಲ್ಲಿ ಸೈಫ್ ರಾದ್ಧಾಂತ, ಪ್ರಕರಣ ದಾಖಲು

ಮುಂಬೈ (ಪಿಟಿಐ/ಐಎಎನ್‌ಎಸ್): ಇಲ್ಲಿನ ತಾಜ್‌ಮಹಲ್ ಹೋಟೆಲ್‌ನಲ್ಲಿ ಮಂಗಳವಾರ ತಡರಾತ್ರಿ ಹೋಟೆಲ್‌ನ ಗಿರಾಕಿಯೊಬ್ಬನ ಮೇಲೆ ನಟ ಸೈಫ್ ಅಲಿ ಖಾನ್ ಅವರು ಹಲ್ಲೆ ನಡೆಸಿದ್ದು, ಈ ಸಂಬಂಧ ಪೊಲೀಸರು ಬುಧವಾರ ಸೈಫ್ ಮೇಲೆ ಹಲ್ಲೆ ಪ್ರಕರಣ ದಾಖಲಿಸಿದ್ದಾರೆ. ಇಲ್ಲಿನ ತಾಜ್ ಹೋಟೆಲ್‌ನ ವಾಸಿಬ್ ರೆಸ್ಟೋರೆಂಟ್‌ನಲ್ಲಿ ಸೈಫ್ ತಮ್ಮ ಗೆಳತಿ ನಟಿ ಕರಿನಾ ಕಪೂರ್ ಸೇರಿದಂತೆ ಗೆಳೆಯರೊಟ್ಟಿಗೆ ಸೇರಿದ್ದಾಗ ತುಂಬಾ ಜೋರು ದನಿಯಲ್ಲಿ ಮಾತನಾಡುತ್ತಿದ್ದರು.

 

ರೆಸ್ಟೋರೆಂಟ್‌ಗೆ ಬಂದಿದ್ದ ಇಕ್ಬಾಲ್ ಶರ್ಮಾ ಎಂಬಾತ ಸೈಫ್ ಅವರ ಬಳಿ ಮೆಲ್ಲಗೆ ಮಾತನಾಡುವಂತೆ ಮನವಿ ಮಾಡಿದ. ಇದರಿಂದ ಕುಪಿತಗೊಂಡ ಸೈಫ್ ಅಲಿ ಖಾನ್ ಇಕ್ಬಾಲ್ ಮುಖದ ಮೇಲೆ ತೀವ್ರವಾಗಿ ಗುದ್ದಿದರಲ್ಲದೆ ಅವರ ಮೂಗಿನ ಮೇಲೂ ಪ್ರಹಾರ ನಡೆಸಿದರು.ನಂತರ ಇಕ್ಬಾಲ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರು. ಸೈಫ್ ಮನೆಗೆ ಬುಧವಾರ ಬೆಳಿಗ್ಗೆ ಪೊಲೀಸ್ ಅಧಿಕಾರಿಗಳ ತಂಡವೊಂದು ಭೇಟಿ ನೀಡಿ ತನಿಖೆಯನ್ನು ಚುರುಕುಗೊಳಿಸಿದೆ.ಸೈಫ್ ಅವರನ್ನು ಈ ಸಂಬಂಧ ಬಂಧಿಸುವ ಸಾಧ್ಯತೆ ಇದೆ ಎಂದು ಅನಧಿಕೃತ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry