ಹೋಮಿಯೋಪತಿಗೆ ಕಾಯಿಲೆ ಶಾಶ್ವತ ನಿವಾರಣಾ ಶಕ್ತಿ

7

ಹೋಮಿಯೋಪತಿಗೆ ಕಾಯಿಲೆ ಶಾಶ್ವತ ನಿವಾರಣಾ ಶಕ್ತಿ

Published:
Updated:

ದಾವಣಗೆರೆ: ಹೊಮಿಯೋಪತಿ ಔಷಧಿಗಳು ದೀರ್ಘಕಾಲದ ಕಾಯಿಲೆಗಳನ್ನು ಶಾಶ್ವತವಾಗಿ ನಿವಾರಿಸುವ ಸಾಮರ್ಥ್ಯ ಹೊಂದಿವೆ ಎಂದು ಬಾಪೂಜಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಸಂಸ್ಥೆಯ ನಿರ್ದೇಶಕ ಪ್ರೊ.ವೈ. ವೃಷಭೇಂದ್ರಪ್ಪ ಹೇಳಿದರು.ನಗರದ ಬಿಐಇಟಿ ಕಾಲೇಜಿನಲ್ಲಿ ಭಾನುವಾರ ದಾವಣಗೆರೆ ಹೋಮಿಯೋಪತಿಕ್ ಮೆಡಿಕಲ್ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯಮಟ್ಟದ ಹೋಮಿಯೋಪತಿ ತಜ್ಞರ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.ಹೋಮಿಯೋಪತಿ ಔಷಧಿಗಳು ಸಮಸ್ಯೆಯ ಮೂಲಬೇರುಗಳನ್ನು ಹುಡುಕಿ ಬಗೆಹರಿಸುತ್ತವೆ. ಮಾನವ ದೇಹದಲ್ಲಿ ಅಡಗಿರುವ ಕಾಯಿಲೆಯ ವಿಷಕಾರಕ ಅಂಶಗಳನ್ನು ಸಂಪೂರ್ಣ ಹೊರಹಾಕಿ ದೇಹ ಶುದ್ಧೀಕರಣ ಮಾಡುತ್ತವೆ. ರೋಗಿಯ ಮುಖದಲ್ಲಿ ಸಂತಸ ಅರಳುವಂತೆ ಮಾಡುತ್ತವೆ. ಆದ್ದರಿಂದ ಎಲ್ಲ ಸಂದರ್ಭಗಳಲ್ಲಿಯೂ ಹೋಮಿಯೋಪತಿ ಔಷಧ ಪದ್ಧತಿ ಅನುಸರಿಸುವುದು ಸಾಧ್ಯ. ಅಲ್ಲದೇ ಅವು ಅತ್ಯಂತ ಅಗ್ಗ ಹಾಗೂ ಪರಿಣಾಮಕಾರಿ ಎಂದು ಅಭಿಪ್ರಾಯಪಟ್ಟರು.ತಾವು ಹಾಗೂ ತಮ್ಮ ಕುಟುಂಬದ ಸದಸ್ಯರು ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾಗ ಹೋಮಿಯೋಪತಿ ಔಷಧ ಬಳಸಿ ಗುಣಮುಖರಾದದ್ದನ್ನು ಸ್ಮರಿಸಿದರು.  ಗಾಳಿ ನೀರು, ಆಹಾರ ಎಲ್ಲವೂ ಮಲಿನಗೊಂಡಿರುವ ಈ ದಿನಗಳಲ್ಲಿ ಮನುಷ್ಯನ ಬದುಕಿಗೆ ಹೋಮಿಯೋಪತಿ ಔಷಧಿಗಳು ಖಂಡಿತವಾಗಿಯೂ ಕಾಳಜಿ ವಹಿಸುತ್ತವೆ. ಆದರೆ, ಎಲ್ಲ ಪದ್ಧತಿಗಳ ಸಮಗ್ರ  ಜ್ಞಾನ ಹೊಂದಿರಬೇಕು. ಎಲ್ಲ ಪದ್ಧತಿಗಳು ಮಾನವನ ಒಳಿತಿಗಾಗಿಯೇ ಇವೆ ಎಂದು ಹೇಳಿದರು.ಮಾತಾ ಯೋಗಾನಂದಮಯಿ ಮಾತನಾಡಿ, ಹೋಮಿಯೋಪತಿ ವೈದ್ಯ ಪದ್ಧತಿ ಆಧ್ಯಾತ್ಮಿಕ ಹಿನ್ನೆಲೆಯಿಂದಲೇ ಬಂದಿದೆ. ಇದು ಮನುಷ್ಯನ ದೇಹ ಮತ್ತು ಮನಸ್ಸು ಎರಡರಲ್ಲಿಯೂ ಕೆಲಸ ಮಾಡುತ್ತದೆ ಎಂದರು.ಬೆಂಗಳೂರಿನ ಭಗವಾನ್ ಮಹಾವೀರ ಜೈನ್ ಕಾಲೇಜಿನ ಡಾ.ತೇಜಸ್ವಿ, ಡಿಎಚ್‌ಎಂಎ ಅಧ್ಯಕ್ಷ ಡಾ.ಮಾವಿಶೆಟ್ಟರ್, ಡಾ.ಕೆ.ಪಿ. ಗಣೇಶ್‌ರಾವ್, ಡಾ.ಎನ್. ಮೇಘರಾಜನ್, ಡಾ.ಎ.ಎನ್. ಸುಂದರೇಶ್, ಜಿ.ಎಸ್. ಗಿರೀಶ್, ಡಾ.ಶರತ್‌ರಾಜ್ ಇತರರು ಇದ್ದರು. ಡಾ.ಲಕ್ಷ್ಮೀಕಾಂತ್ ತಂಗಾಡೆ ಅವರು ಹೋಮಿಯೋಪತಿಯ ವಿವಿಧ ಆಯಾಮಗಳ ಕುರಿತು ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry