ಹೋಮಿಯೋಪತಿ ಚಿಕಿತ್ಸಾ ಕೇಂದ್ರ ಶೀಘ್ರ ಆರಂಭ

ಮಂಗಳವಾರ, ಜೂಲೈ 16, 2019
25 °C

ಹೋಮಿಯೋಪತಿ ಚಿಕಿತ್ಸಾ ಕೇಂದ್ರ ಶೀಘ್ರ ಆರಂಭ

Published:
Updated:

ಬೆಂಗಳೂರು: `ಸೊಸೈಟಿ ಫಾರ್ ಸರ್ವಿಸ್ ಟು ವಾಲೆಂಟರಿ ಏಜೆನ್ಸಿ ಆಫ್ ಕರ್ನಾಟಕ (ಸೋಸ್ವಾ) ಸ್ವಯಂ ಸೇವಾ ಸಂಸ್ಥೆಯು ನೂತನವಾಗಿ ಆಯುಷ್ ಹೋಮಿಯೋಪತಿ ಚಿಕಿತ್ಸಾ ಕೇಂದ್ರ ಆರಂಭಿಸಲಿದೆ~ ಎಂದು ಸಂಸ್ಥೆಯ ನೂತನ ಅಧ್ಯಕ್ಷ ಎಚ್.ಎಸ್.ರೇಣುಕಾ ಪ್ರಸಾದ್ ತಿಳಿಸಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು `ಸಂಸ್ಥೆಯು ಹಲವು ವರ್ಷಗಳಿಂದ ಸಾಮಾಜಿಕ, ಜಾಗೃತಿ ಅಭಿಯಾನ ಕಾರ್ಯಕ್ರಮ ನಡೆಸಿಕೊಂಡು ಬಂದಿದೆ. ಕಾರಣಾಂತರಗಳಿಂದ 2 ವರ್ಷಗಳಿಂದ ಸಂಸ್ಥೆಯ ಚಟುವಟಿಕೆ ಸ್ಥಗಿತವಾ ಗಿತ್ತು. ಈಗ ಮತ್ತೆ ಸೇವಾ ಕಾರ್ಯ ಕೈಗೊಳ್ಳಲಿದೆ~ ಎಂದು ಹೇಳಿದರು.`ಭಾರತೀಯ ಪರಂಪರೆಯ ಆಯುರ್ವೇದ, ಯೋಗ, ಯುನಾನಿ ಪದ್ದತಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ನೂತನ ಆಯುಷ್ ಹೋಮಿಯೋಪತಿ ಚಿಕಿತ್ಸಾ ಕೇಂದ್ರ ಪ್ರಾರಂಭಿಸಲಿದ್ದೇವೆ. ನಾಗರಿಕರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಪ್ರತಿ ತಿಂಗಳು ಉಚಿತ ಆರೋಗ್ಯ ಶಿಬಿರಗಳನ್ನು ನಡೆಸಲು ಯೋಜನೆ ಹಮ್ಮಿಕೊಂಡಿದೆ~ ಎಂದರು.ಸಂಸ್ಥೆಯ ಯೋಜನಾ ನಿರ್ದೇಶಕಿ ಎಸ್.ಜಿ.ಸುಶೀಲಮ್ಮ ಮಾತನಾಡಿದರು. ಕಾರ್ಯದರ್ಶಿ ಎಂ.ಮಠದ್, ಜಂಟಿ ಕಾರ್ಯದರ್ಶಿ ಡಾ.ಕುಮಾರ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry