ಹೋರಾಟಕ್ಕೆ ಪಕ್ಷಾತೀತ ಬೆಂಬಲ

ಗುರುವಾರ , ಜೂಲೈ 18, 2019
26 °C

ಹೋರಾಟಕ್ಕೆ ಪಕ್ಷಾತೀತ ಬೆಂಬಲ

Published:
Updated:

ಚಿಂಚೋಳಿ: ವಿದೇಶದ ಬ್ಯಾಂಕುಗಳಲ್ಲಿ ಅಕ್ರಮವಾಗಿ ಇರಿಸಿದ ಲಕ್ಷಾಂತರ ಕೋಟಿ ಕಪ್ಪುಹಣ ಭಾರತಕ್ಕೆ ವಾಪಸ್ ತರಬೇಕು ಹಾಗೂ ದೇಶದಲ್ಲಿ ವ್ಯಾಪಕವಾಗಿ ಹರಡಿದ ಭ್ರಷ್ಟಾಚಾರದ ಅನಿಷ್ಟ ಪದ್ದತಿ ಹೋಗಲಾಡಿಸಬೇಕೆಂದು ಒತ್ತಾಯಿಸಿ ಯೋಗಗುರು ಬಾಬಾ ರಾಮ್‌ದೇವ್ ನಡೆಸುತ್ತಿರುವ ಹೋರಾಟಕ್ಕೆ ತಾಲ್ಲೂಕಿನಲ್ಲಿ ವಕೀಲರು ಪಕ್ಷಬೇಧ ಮರೆತು ಬೆಂಬಲಿಸಿದ್ದಾರೆ.ಇಲ್ಲಿನ ಮಿನಿ ವಿಧಾನ ಸೌಧದ ಆವರಣದಲ್ಲಿ ಸೋಮವಾರ ಮಧ್ಯಾಹ್ನ 12ರಿಂದ ಸಂಜೆ  5ರವರೆಗೆ ಸಾಂಕೇತಿಕ ಧರಣಿ ನಡೆಸಿ ತಹಸೀಲ್ದಾರ ಬಿ.ಕೃಷ್ಣಪ್ಪ ಅವರ ಮೂಲಕ ರಾಷ್ಟ್ರಪತಿ ಪ್ರತಿಭಾ ದೇವಿಸಿಂಗ್ ಪಾಟೀಲ ಅವರಿಗೆ ಸಲ್ಲಿಸಿದರು.ಸರ್ಕಾರ ಬಾಬಾ ರಾಮ್‌ದೇವ್‌ಅವರ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ನಿರ್ಣಯ ಕೈಗೊಳ್ಳಬೇಕೆಂದು ಒತ್ತಾಯಿಸಿದ ವಕೀಲರು, ಭ್ರಷ್ಟಾಚಾರ ಹಾಗೂ ಕಪ್ಪುಹಣ ಭಾರತಕ್ಕೆ ಕಳಂಕ ಎಂದು ಅಭಿಪ್ರಾಯ ಪಟ್ಟಿದ್ದಾರೆ.ಧರಣಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ರೇವಣಸಿದ್ದಪ್ಪ ಕೊಂಡಾ, ಸಂಘ ಪರಿವಾರದ ಮುಖಂಡ ಭಿಮಶೆಟ್ಟಿ ಮುಕ್ಕಾ, ವಕೀಲರ ಸಂಘದ ಅಧ್ಯಕ್ಷ ಮಸ್ತಾನ ಪಟೇಲ್ ತಾಂಡೂರು ಹಾಗೂ ಹಿರಿಯ ವಕೀಲ ಚಂದಾರಾವ್ ದೇಶಮುಖ್ ಹೋರಾಟಗಾರ ಸುಭಾಷ್ ಗೌನಳ್ಳಿ ವಕೀಲರು ಹಾಗೂ ಜೆಡಿಎಸ್ ತಾಲ್ಲೂಕು ಅಧ್ಯಕ್ಷರಾದ ಶಿವಶರಣಪ್ಪ ಜಾಪಟ್ಟಿ, ಮಾಣಿಕರಾವ್ ಗುಲಗುಂಜಿ, ಕಾಂಗ್ರೆಸ್ ಮುಖಂಡರಾದ ವಕೀಲ ಶ್ರೀಮಂತ ಕಟ್ಟೀಮನಿ, ವಿಶ್ವನಾಥ ಬೆನಕಿನ್, ಮಲ್ಲಪ್ಪ ಕೋಟಪಳ್ಳಿ ಹಾಗೂ ಶಂಕರ ರಾಠೋಡ್, ರಾಜಜೇಂದ್ರ ವರ್ಮಾ, ಜಗನ್ನಾಥ ಅಗ್ನಿಹೋತ್ರಿ, ರಾಜೇಂದ್ರ ದೇವನೋರ್, ಸಂಗಮೇಶ ಭೋಜಿ, ರೇವಣಸಿದ್ದಪ್ಪ ಕುಡಳ್ಳಿ, ಶ್ರೀಧರ ಘಾಲಿ ಮುಂತಾದವರು ಇದ್ದರು.ಮನವಿ ಸ್ವೀಕರಿಸಿದ ತಹಸೀಲ್ದಾರ ಬಿ.ಕೃಷ್ಣಪ್ಪ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಕಳುಹಿಸುವ ಭರವಸೆ ನೀಡಿದರು.     

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry