ಹೋರಾಟದ ಕುಲುಮೆಯಲ್ಲಿ ಪ್ರಜ್ವಲಿಸುತ್ತಿರುವ ಊರು

ಬೆಂಗಳೂರೆಂದರೆ ಅನೇಕರು ಇಷ್ಟ ಪಡಲು ಕಾರಣ, ಇಲ್ಲಿಯ ಹವಾನಿಯಂತ್ರಿತ ವಾತಾವರಣ. ಸುಂದರ ಉದ್ಯಾನಗಳು, ಎಲ್ಲರಿಗೂ ಹೊಟ್ಟೆ ತುಂಬಿಸಲು ದಾರಿ ತೋರಿಸುವ ನಗರಿ ಎಂಬುದು.
ಆದರೆ, ನನಗೆ ಬೆಂಗಳೂರು ಇಷ್ಟವಾಗುವುದು, ಇಲ್ಲಿನ ಜನರಿಂದಾಗಿ. ಒಂದು ಕಾಲಕ್ಕೆ ಇಲ್ಲಿನ ಜನರು ಕೊರೆವ ಚಳಿಗಿಂತಲೂ ತಣ್ಣಗಿದ್ದರು. ಎಲ್ಲದಕ್ಕೂ ‘ಅಡ್ಜಸ್ಟ್ ಮಾಡಿಕೊಳ್ಳಿ’ ಎನ್ನುತ್ತಿದ್ದ ಜನ ಈಗ ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಬೀದಿಗಿಳಿದಿದ್ದಾರೆ.
ಎರಡು ಹೊತ್ತಿನ ಊಟಕ್ಕಾಗಿ ದಿನವಿಡೀ ಗಾಣದೆತ್ತಿನಂತೆ ದುಡಿಯುವ, ಉಸಿರೇ ಉಡುಗಿ ಹೋದಂತಿರುವ ಗಾರ್ಮೆಂಟ್ಸ್ ಕೆಲಸಗಾರರು, ಅದರಲ್ಲೂ ಮಹಿಳೆಯರು ಇಪಿಎಫ್ಗಾಗಿ ಬೀದಿಗಿಳಿದು ಹೋರಾಟ ಮಾಡಿದ್ದು, ಅಣ್ಣಾ ಹಜಾರೆ ಹೋರಾಟ, ‘ನಿರ್ಭಯಾ’ ಪ್ರಕರಣಕ್ಕೂ ಅಭೂತಪೂರ್ವವಾಗಿ ಸ್ಪಂದಿಸಿದ್ದಾರೆ.
ಮಕ್ಕಳ ಮೇಲಿನ ಅತ್ಯಾಚಾರ ಪ್ರತಿಭಟಿಸಿ ಮಹಿಳೆಯರು-ವಿದ್ಯಾರ್ಥಿಗಳು ಆಂದೋಲನ ನಡೆಸುತ್ತಿರುವುದು ನನಗಂತೂ ಚೇತೋಹಾರಿಯಾದ ಘಟನೆ. ಇಂಥ ಊರು ನನ್ನ ನಲ್ಮೆಯ ಬೆಂಗಳೂರು, ನನ್ನ ಹೆಮ್ಮೆಯ ಬೆಂಗಳೂರು.
–ಡಾ.ಸುಧಾ ಕೆ. ಮಲ್ಲೇಶ್ವರಂ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.