ಶುಕ್ರವಾರ, ಮಾರ್ಚ್ 5, 2021
24 °C

ಹೋಳಿಹುಣ್ಣಿಮೆ ಶಾಂತಿಯುತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೋಳಿಹುಣ್ಣಿಮೆ ಶಾಂತಿಯುತ

ಅಕ್ಕಿಆಲೂರ: ಬುಧವಾರ ಇಲ್ಲಿ ನಡೆದ ಹೋಳಿ ಹುಣ್ಣಿಮೆ ರಂಗಿನಾಟದಲ್ಲಿ ಸೌಹಾರ್ದತೆ ಮತ್ತು ಭಾವೈಕ್ಯತೆ ಮೇಳೈಸಿತು. ಮುಸ್ಲಿಮರು ಹಿಂದೂಗಳಿಗೆ ಹೋಳಿ ಹಬ್ಬದ ಶುಭಾಶಯ ಹೇಳಿದರು. ಹಿಂದೂ–ಮುಸ್ಲಿಮರು  ಪರಸ್ಪರ ರಂಗಿನಾಟದಲ್ಲಿ ತೊಡಗುವ ಮೂಲಕ ಹೋಳಿಯ ಕಳೆ ಹೆಚ್ಚಿಸಿದ್ದರು.ಈ ಮೊದಲು ಕುಂಬಾರ ಓಣಿಯಲ್ಲಿ ಹೋಳಿ ಹುಣ್ಣಿಮೆ ಮೆರವಣಿಗೆಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿತ್ತು. ನಾಗರಿಕರ ಹೋರಾಟಕ್ಕೆ ಮಣಿದು ಜಿಲ್ಲಾಡಳಿತ ಮೆರವಣಿಗೆ ನಡೆಸಲು 15 ನಿಮಿಷಗಳ ಕಾಲಾವಧಿ ಸೇರಿದಂತೆ ಕೆಲವು ಷರತ್ತುಗಳನ್ನು ವಿಧಿಸಿತ್ತು. ಷರತ್ತುಗಳು ಉಲ್ಲಂಘನೆಯಾದರೆ ಕಠಿಣ ಕಾನೂನು ಕ್ರಮದ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಇಲ್ಲಿಯ ಹೋಳಿ ಹುಣ್ಣಿಮೆ ಜಿಲ್ಲೆಯಲ್ಲಿಯೇ ಭಾರಿ ಕುತೂಹಲಕ್ಕೆ ಕಾರಣವಾಗಿತ್ತು. ಯಾವುದೇ ಹಂತದಲ್ಲಿಯೂ ಷರತ್ತು ಗಳು ಉಲ್ಲಂಘನೆಯಾಗದ ರೀತಿಯಲ್ಲಿ ಶಾಂತಿಯುತ ಹೋಳಿ ಆಚರಿಸಿದರು.ಆರಂಭದಲ್ಲಿ ಇಲ್ಲಿನ ವಿ.ಎಂ. ರಸ್ತೆಯಲ್ಲಿ ಚನ್ನವೀರೇಶ್ವರ ವಿರಕ್ತಮಠದ ಶಿವಬಸವ ಸ್ವಾಮೀಜಿ ಮತ್ತು ಮುತ್ತಿನ ಕಂತಿಮಠ ಗುರುಪೀಠದ ಚಂದ್ರಶೇಖರ ದೇವರ ಸಾನ್ನಿಧ್ಯದಲ್ಲಿ ಹಿಂದೂ–ಮುಸ್ಲಿಮರು   ಪರಸ್ಪರ ಹೋಳಿ ಶುಭಾಶಯ ವಿನಿಮಯ ಮಾಡಿಕೊಂಡು ರಂಗಿನಾಟ ದಲ್ಲಿ ತೊಡಗಿ, ಸಂಭ್ರಮಿಸಿದರು.ಬಳಿಕ ವೀರಭದ್ರೇಶ್ವರ ದೇವಸ್ಥಾನ ದಿಂದ ಮೆರವಣಿಗೆಗೆ ಚಾಲನೆ ನೀಡಲಾ ಯಿತು. ಜೋಳದ ಪೇಟೆ ಮೂಲಕ ಕುಂಬಾರ ಓಣಿ ಕ್ರಾಸ್‌ ಪ್ರವೇಶಿಸಿದ ಮೆರವಣಿಗೆ ನಿಗದಿತ ಕಾಲಾವಧಿ 15 ನಿಮಿಷಗಳ ಒಳಗೆ ಕುಂಬಾರ ಓಣಿಯಲ್ಲಿ ಮೆರವಣಿಗೆ ಮುಕ್ತಾಯಗೊಳಿಸಿತು.

ಸ್ವಾಮೀಜಿಗಳು ಸೇರಿದಂತೆ ಜನಪ್ರತಿನಿಧಿಗಳು, ಮುಖಂಡರು ಸ್ಥಳದಲ್ಲಿ ಹಾಜರಿದ್ದು ಮೆರವಣಿಗೆ ಯಶಸ್ವಿಗೊಳಿಸಿದರು.   200 ಕ್ಕೂ ಅಧಿಕ ಪೊಲೀಸ್‌ ಸಿಬ್ಬಂದಿಯನ್ನು ಮುನ್ನೆ ಚ್ಚರಿಕೆ ಕ್ರಮವಾಗಿ ಬಂದೋಬಸ್ತ್‌ಗೆ ನಿಯೋಜನೆ ಮಾಡಲಾಗಿತ್ತು.ಸಂಜೆ 4 ಗಂಟೆಗೆ ವಿವಿಧ ಸ್ಥಳಗಳಲ್ಲಿ ಕಾಮದಹನ ನೆರವೇರಿಸಿ ಓಕುಳಿ ಆಡಲಾಯಿತು. ನಂತರ ಅಲ್ಲಲ್ಲಿ ಕಳುವು ಮಾಡಿ ತಂದ ಕುಳ್ಳು, ಕಟ್ಟಿಗೆಯಿಂದ ಕಾಮಣ್ಣನನ್ನು ದಹಿಸಿ, ಹೋಳಿ  ಸಂಭ್ರಮಕ್ಕೆ  ತೆರೆಎಳೆಯಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.