ಶುಕ್ರವಾರ, ಮಾರ್ಚ್ 5, 2021
30 °C
ಬಣ್ಣ ಎರಚಿ ಸಂಭ್ರಮಿಸಿದ ಚಿಣ್ಣರು, ಮಹಿಳೆಯರು

ಹೋಳಿ ರಂಗಿನಲ್ಲಿ ಮಿಂದೆದ್ದ ಕೋಟೆ ನಗರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೋಳಿ ರಂಗಿನಲ್ಲಿ ಮಿಂದೆದ್ದ ಕೋಟೆ ನಗರಿ

ಚಿತ್ರದುರ್ಗ: ಒಂದೆಡೆ ಮಹಿಳೆಯರ ಮಕ್ಕಳ ಗುಂಪು ನೃತ್ಯ ಮಾಡುತ್ತಿದ್ದರೆ, ದೂರದಲ್ಲಿದ್ದ ಯುವಕರ ಗುಂಪು ಮಡಕೆ ಒಡೆಯಲು ಸಿದ್ಧತೆ ನಡೆಸುತಿತ್ತು. ಮತ್ತೊಂದೆಡೆ ಹಿರಿಯರ ಗುಂಪು ಓಕುಳಿಯಾಟದಲ್ಲಿ ತಲ್ಲೀನವಾಗಿತ್ತು.  ರಜಾದಿನವಾದ ಭಾನುವಾರ ನಗರದ ದಾರುಕಾ ಬಡಾವಣೆ ಸಂಭ್ರಮ ಮನೆ ಮಾಡಿತ್ತು...!ಹಬ್ಬ ಹರಿದಿನಗಳೆಂದರೆ ಈ ಬಡಾವಣೆ ಜನ ಒಗ್ಗಟ್ಟಾಗುತ್ತಾರೆ. ಶಿವರಾತ್ರಿಯಾಗಲಿ, ಗಣಪತಿ ಹಬ್ಬವಾಗಲಿ, ದಸರೆ, ದೀಪಾವಳಿಗಳಾಗಲಿ. ಒಟ್ಟಾಗಿ ಸಂಭ್ರಮಿಸುತ್ತಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಹೋಳಿ ಹಬ್ಬ ರಂಗಿನಾಟಕ್ಕೆ ಮೆರಗು ನೀಡಿದರು. ಬಣ್ಣದಾಟದಲ್ಲಿ ಮಹಿಳೆಯರು, ಪುರುಷರು, ಪುಟಾಣಿಗಳೂ ಪಾಲ್ಗೊಂಡಿದ್ದರು.ಎಲ್ಲಾ ಹಬ್ಬಗಳಿಗಿಂತ ಹೋಳಿಯನ್ನು ಇಲ್ಲಿನ ಅತ್ಯಂತ ವಿಶೇಷವಾಗಿ ಆಚರಿಸುತ್ತಾರೆ. ಲಿಂಗಭೇದವಿಲ್ಲದೇ, ವಯೋಮಾನದ ಅಂತರವಿಲ್ಲದೇ ಹೋಳಿಯಲ್ಲಿ ಭಾಗವಹಿಸಿದ ಮಂದಿ, ಹಿನ್ನೆಲೆ ಸಂಗೀತಕ್ಕೆ ಕುಣಿದು ಕುಪ್ಪಳಿಸಿದರು. ಪರಸ್ಪರ ಬಣ್ಣ ಎರಚಾಡಿದರು. ಬಣ್ಣದ ಜೊತೆಗೆ, ನಡು ನಡುವೆ ತೇಲಿಬರುತ್ತಿದ್ದ ಸಂಗೀತಕ್ಕೆ ಎಲ್ಲರೂ ಸೇರಿ ಹೆಜ್ಜೆ ಹಾಕಿದರು.ಹೋಳಿ ಹಬ್ಬದ ಅಂಗವಾಗಿ ಇಲ್ಲಿನ ಉದ್ಯಾನದಲ್ಲಿ ಉಪಹಾರದ ವ್ಯವಸ್ಥೆಯೂ ಇತ್ತು. ಮದ್ಯಾಹ್ನ ೧೨ ಗಂಟೆಯ ವೇಳೆಗೆ ಬಣ್ಣಗಳಿಂದ ತುಂಬಿ, ಪಿರಮಿಡ್ ಕಟ್ಟಿ,ಒಬ್ಬರ ಮೇಲೆ ಒಬ್ಬರು ನಿಂತು ಮಡಕೆ ಒಡೆಯುವ ಸ್ಪರ್ಧೆ ಎಲ್ಲರ ಗಮನ ಸೆಳೆಯಿತು. ಬಳಿಕ ನೀರಿನಾಟದೊಂದಿಗೆ ರಂಗಿನಾಟಕ್ಕೆ ತೆರೆಬಿತ್ತು !ದಾರುಕಾಬಡಾವಣೆ ಕ್ಷೇಮಾಭಿವೃದ್ದಿ ಸಂಘದ ಮುಖ್ಯಸ್ಥ ಶಿವಕುಮಾರ್, ಆರ್.ಮಂಜುನಾಥ್, ಅಶೋಕ್, ರಾಮಸ್ವಾಮಿ, ಉಪನ್ಯಾಸಕರಾದ ಚಂದ್ರಶೇಖರ್, ರಾಜೀವಲೋಚನ, ಕೇದರನಾಥ್, ಎಂಜಿನಿಯರ್ ಶ್ರೀಧರ್, ಮಹಿಳಾ ತಂಡದ ಶೀಲಾ ಮಂಜುನಾಥ್, ರೇಖಾ ಶಿವಕುಮಾರ್, ಶಶಿಕಲಾ ಚಂದ್ರಶೇಖರ್, ಜ್ಯೋತಿ ಅಶೋಕ್, ವೀಣಾ ಶ್ರೀಧರ್ ಇನ್ನಿತರರು ಪಾಲ್ಗೊಂಡಿದ್ದರು

ಭಾವೈಕ್ಯತೆಗೆ ಸಹಕಾರಿ; ಹಬ್ಬಗಳ ಆಚರಣೆಗಳಿಂದ ಭಾವೈಕ್ಯತೆ ಮೂಡುವುದಲ್ಲದೆ ಸಂಬಂಧಗಳೂ ಗಟ್ಟಿಗೊಳ್ಳಲು ಸಹಕಾರಿಯಾಗಲಿವೆ. ಅದರಲ್ಲೂ ಹೋಳಿ ಹಬ್ಬ ಭಾವೈಕ್ಯತೆಯ ಸಂಕೇತ ಎಂದು ಜ್ಯೋತಿ ಅಶೋಕ್ ಅಭಿಪ್ರಾಯಪಟ್ಟರು.ಗೆಳೆಯರ ಬಳಗ ಸಂಭ್ರಮ

ಧರ್ಮಪುರ: ಇ
ಲ್ಲಿನ ಗೆಳೆಯರ ಬಳಗದಿಂದ ಭಾನುವಾರ ಹೋಳಿ ಆಚರಣೆ ನಡೆಯಿತು. ಭಾನುವಾರ ಬೆಳಿಗ್ಗೆ ಬಣ್ಣದ ಓಕುಳಿ ಮತ್ತು ನೀರೆರಚಾಟದಲ್ಲಿ ಸಂಭ್ರಮಿಸಿದರು. ನಂತರ ಸಾಯಂಕಾಲ ಮಡಿಕೆ ಹೊಡೆಯುವ ಕಾರ್ಯಕ್ರಮ ನಡೆಸಿಕೊಟ್ಟರು.ಮಹೇಶ್‌, ಸಿದ್ದೇಶ್‌, ವೀರಣ್ಣ, ರುದ್ರಮುನಿ, ಬುಡೇನ್‌, ಶಿವಮೂರ್ತಿ, ಮಹಮ್ಮದ್‌ಗೌಸ್‌, ಮಂಜುನಾಥ್‌, ಧನಂಜಯ, ನರಸಿಂಹಮೂರ್ತಿ, ಪಠಾಣ್‌, ಶಾಂತಮ್ಮ, ಗಂಗಮ್ಮ, ಜಯಮ್ಮ, ಸುಜಾತ, ಪುಷ್ಪ ಮತ್ತಿತರರು ಹೋಳಿ ಆಚರಣೆಯಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.