ಬುಧವಾರ, ಜುಲೈ 15, 2020
27 °C

ಹೋಳಿ ರಂಗು; ಬಣ್ಣದ ಗುಂಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೋಳಿ ರಂಗು; ಬಣ್ಣದ ಗುಂಗು

ಪೆನ್ನಿಗೆ ಬಣ್ಣದ ಮಸಿ

ಬಣ್ಣಗಳ ಹಬ್ಬ ಹೋಳಿಗೆಂದೇ ಪೆನ್ನುಗಳ ಮಳಿಗೆ ವಿಲಿಯಮ್ ಪೆನ್ 46 ವಿಶಿಷ್ಟ ಬಣ್ಣಗಳ ಇಂಕ್‌ಗಳನ್ನು ಪ್ರಸ್ತುತಪಡಿಸುತ್ತಿದೆ. ಪ್ರೈವೇಟ್ ರಿಸರ್ವ್, ಸಿಡಿಎ, ಸೇಲರ್ ಮತ್ತು ಲ್ಯಾಮಿಗಳಲ್ಲಿ ಈ ವರ್ಣವೈವಿಧ್ಯ ದೊರೆಯಲಿದೆ.ಋತುಮಾನದ ಮಜ ಇಲ್ಲಿಗೇ ಮುಗಿಯುವುದಿಲ್ಲ. ಮಳಿಗೆಯು ಗ್ರಾಹಕರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿಟ್ಟ ಸ್ಯಾಂಪಲ್ ಕಿಟ್‌ನಿಂದ ಮಸಿ ಪ್ರಾತ್ಯಕ್ಷಿಕೆಗೆ ಅನುವು ಮಾಡಿಕೊಡುತ್ತಿದೆ. ಅಲ್ಲದೆ ಹೋಳಿ ಸಂದರ್ಭದಲ್ಲಿ ಫೌಂಟನ್ ಪೆನ್ನು ಖರೀದಿಸಿದರೆ ಪ್ರೈವೇಟ್ ರಿಸರ್ವ್ ಇಂಕ್ ಕಾರ್ಟ್ರಿಡ್ಜ್ ಉಚಿತವಾಗಿ ನೀಡಲಿದೆ.ಹೈಪರ್‌ಸಿಟಿ ಕಲರ್

ಕಾಂತಿಯುತ ಬಣ್ಣಗಳು, ಚಿಲ್ಲನೆ ಚಿಮ್ಮುವ ನೀರು, ನೀರು ತುಂಬಿದ ಬಲೂನುಗಳು, ಸಿಹಿ.. ಎಲ್ಲವೂ ಹೋಳಿ ಸಂಭ್ರಮದ ಕಳೆ. ಹಬ್ಬಕ್ಕೆ ಜೀವ ಮತ್ತು ಚೈತನ್ಯ ನೀಡುವುದೇ ಈ ಬಣ್ಣಗಳು.ಕೆಂಪು, ಹಸಿರು, ನೀಲಿ, ಕಿತ್ತಲೆ ಮತ್ತು ಇತರ ಬಣ್ಣಗಳ ವಿಶಾಲ ಶ್ರೇಣಿಯ ಪರಿಸರ ಸ್ನೇಹಿ ಬಣ್ಣಗಳು ವೈಟ್‌ಫೀಲ್ಡ್ ರಸ್ತೆಯ ‘ಹೈಪರ್‌ಸಿಟಿ’ಯಲ್ಲಿ ಕಾದಿವೆ. ಜಂಬೋ ಮತ್ತು ಜೂನಿಯರ್ ಪ್ಯಾಕುಗಳಲ್ಲಿ ಲಭ್ಯ. ವಾಟರ್ ಗನ್‌ಗಳೂ ಸಿಗುತ್ತವೆ.  ಮಾಮಾಮಿಯಾ ಥಂಡೈ

ಹೋಳಿ ಹಬ್ಬಕ್ಕೂ ಥಂಡೈಗೂ ಬಿಡಲಾರದ ನಂಟಿದೆ. ಈ ಹೋಳಿ ವಾರಾಂತ್ಯಕ್ಕೆಂದೇ ಮಾಮಾ ಮಿಯಾ ಮಳಿಗೆ, ವಿಶೇಷ ಥಂಡೈ ಐಸ್‌ಕ್ರೀಮ್ ನೀಡುತ್ತಿದೆ. ಥಂಡೈ ಸಿರಪ್, ಬಾದಾಮಿಗಳು, ಕೇಸರಿ, ಪಿಸ್ತಾಗಳಿರುವ ‘ಥಂಡೈ ಗೆಲಾಟೊ’ ಏ.9ರ ವರೆಗೂ ಸ್ಕೂಪ್‌ಗೆ ರೂ 55 ದರದಲ್ಲಿ ಇಂದಿರಾನಗರ ಮಳಿಗೆಯಲ್ಲಿ ಲಭ್ಯ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.