ಸೋಮವಾರ, ಜೂನ್ 14, 2021
26 °C

ಹೋಳಿ ಹುಣ್ಣಿಮೆಗೆ ಸಂಭ್ರಮದ ಬಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಹೋಳಿ ಹುಣ್ಣಿಮೆಯ ಬಣ್ಣದ ಸಂಭ್ರಮ ಗುರುವಾರ ಜಿಲ್ಲೆಯಾದ್ಯಂತ ಮನೆ ಮಾಡಿತ್ತು. ಚಿಣ್ಣರು, ಹಿರಿಯರು ಸೇರಿದಂತೆ ಎಲ್ಲ ವರ್ಗದ ಜನರು ಪರಸ್ಪರ ಬಣ್ಣ ಹಚ್ಚಿ, ಹಬ್ಬದ ಶುಭಾಶಯಗಳ ವಿನಿಮಯ ಮಾಡಿಕೊಂಡರು. ವಿವಿಧ ಬಣ್ಣಗಳನ್ನು ಹಚ್ಚಿ, ಜೀವನದ ಕನಸುಗಳಿಗೂ ಬಣ್ಣ ತುಂಬಲಿ ಎಂದು ಹಾರೈಸಿದರು.ನಗರದಾದ್ಯಂತ ಗುರುವಾರ ಬಣ್ಣದ ಓಕುಳಿಯಾಟ ಸಂಭ್ರಮದಿಂದ ನಡೆಯಿತು. ನಗರದ ಸ್ಟೇಶನ್ ಬಜಾರ್, ಗಾಂಧಿ ವೃತ್ತ, ಮೈಲಾಪುರ ಅಗಸಿ, ನಗರ ಪೊಲೀಸ್ ಠಾಣೆ, ಅಂಬೇಡ್ಕರ್ ವೃತ್ತ ಸೇರಿದಂತೆ ವಿವಿಧೆಡೆ ಹೋಳಿ ಹಬ್ಬದ ರಂಗು ಮುಗಿಲು ಮುಟ್ಟಿತ್ತು.ಬೈಕ್‌ಗಳಲ್ಲಿ ಕೇಕೆ ಹಾಕುತ್ತ, ಕೈಯಲ್ಲಿ ಬಣ್ಣದ ಬಾಟಲ್‌ಗಳನ್ನು ಹಿಡಿದು ಹೊರಟಿದ್ದ ಯುವಕರ ಗುಂಪು, ಹೋಳಿ ಹಬ್ಬದ ಸಂಭ್ರಮಕ್ಕೆ ಸಾಕ್ಷಿ ಎನ್ನುವಂತಿತ್ತು. ಪ್ರಮುಖವಾಗಿ ಇಲ್ಲಿಯ ನಗರ ಪೊಲೀಸ್ ಠಾಣೆಯಲ್ಲಿ ನಡೆಯುವ ಹೋಳಿ ಹುಣ್ಣಿಮೆ ಕಾರ್ಯಕ್ರಮ ವಿಶಿಷ್ಟವಾಗಿದೆ.ಪ್ರತಿ ವರ್ಷ ಎಲ್ಲ ಸಮುದಾಯದವರು, ನಗರ ಠಾಣೆಯಲ್ಲಿ ಸೇರಿ ಸೌಹಾರ್ದ ಹೋಳಿ ಹುಣ್ಣಿಮೆ ಆಚರಿಸುತ್ತಾರೆ. ಪರಸ್ಪರ ಬಣ್ಣ ಹಚ್ಚಿ, ಹಾಲು ಕುಡಿದು ಸಂಭ್ರಮಿಸುವುದು ಇಲ್ಲಿನ ಸಂಪ್ರದಾಯ. ಈ ಬಾರಿಯೂ ನಗರ ಠಾಣೆಯಲ್ಲಿ ಸೌಹಾರ್ದ `ಹೋಳಿ~ಯನ್ನು ಸಂಭ್ರಮದಿಂದ ಆಚರಿಸಲಾಯಿತು.ನಂತರ ನಗರದಾದ್ಯಂತ ಜನರು ಬಣ್ಣದ ಆಟದಲ್ಲಿ ನಿರತರಾಗಿದ್ದರು. ಚಿಣ್ಣರು ಬಾಟಲ್‌ಗಳಲ್ಲಿ ಬಣ್ಣ ತುಂಬಿಕೊಂಡು, ಹಾದು ಹೋಗುವವರ ಮೇಲೆ ಬಣ್ಣ ಹಾಕಿ ಸಂತಸ ವ್ಯಕ್ತಪಡಿಸುತ್ತಿದ್ದರು. ತಮ್ಮ ಸಹಪಾಠಿಗಳು, ಅಕ್ಕಪಕ್ಕದ ಹುಡುಗರ ಜೊತೆಗೂಡಿ, ಬಡಾವಣೆಯಲ್ಲಿ ತಿರುಗಾಡಿ ಬಣ್ಣದಾಟ ಆಡಿದರು.ಬೆಳಿಗ್ಗೆಯಿಂದ ವಿವಿಧ ಬಡಾವಣೆಗಳಲ್ಲಿ ಬಣ್ಣದಾಟ ಆರಂಭವಾಗಿತ್ತು. ಬಿಸಿಲು ನೆತ್ತಿಗೇರುತ್ತಿರುವಂತೆ ಬಣ್ಣದಾಟದ ಸಂಭ್ರಮವೂ ಮುಗಿಲು ಮುಟ್ಟಿತ್ತು. ಮಧ್ಯಾಹ್ನ 12ರ ನಂತರ ಬಣ್ಣದ ಬಂಡಿಗಳ ಮೆರವಣಿಗೆ ಆರಂಭವಾಯಿತು.

ಗುಲ್ಬರ್ಗ ವರದಿ: ಗುಲ್ಬರ್ಗ ನಗರದ ವಿವಿಧೆಡೆ ಜನರು ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.