ಹೌರಾ-ಮೈಸೂರು ಹೊಸ ರೈಲು ಸಂಚಾರ ಇಂದಿನಿಂದ

7

ಹೌರಾ-ಮೈಸೂರು ಹೊಸ ರೈಲು ಸಂಚಾರ ಇಂದಿನಿಂದ

Published:
Updated:

ಹುಬ್ಬಳ್ಳಿ: ಈಶಾನ್ಯ ರೈಲ್ವೆ ವಿಭಾಗವು ಹೌರಾ-ಮೈಸೂರು ಮಧ್ಯೆ ವಾರಕ್ಕೊಮ್ಮೆ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ಈ ತಿಂಗಳ 24ರಿಂದ ಆರಂಭಿಸುತ್ತಿದೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.

ರೈಲು ಸಂಖ್ಯೆ 22817 ಹೌರಾ- ಮೈಸೂರು  ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಪ್ರತಿ ಶುಕ್ರವಾರ ಸಂಜೆ 4.10ಕ್ಕೆ ಹೌರಾದಿಂದ ಹೊರಟು ಖರಗ್‌ಪುರ್, ಭಾದ್ರಕ್, ಕಟಕ್, ಭುವನೇಶ್ವರ, ಬ್ರಹ್ಮಪುರ, ವಿಶಾಖಪಟ್ಟಣ, ರಾಜಮಂಡ್ರಿ, ವಿಜಯವಾಡ, ರೇಣಿಗುಂಟಾ, ಕಾಟ್ಪಾಡಿ, ಬೆಂಗಳೂರು ಮಾರ್ಗವಾಗಿ ಭಾನುವಾರ ಬೆಳಿಗ್ಗೆ 5ಕ್ಕೆ ಮೈಸೂರು ತಲುಪುತ್ತದೆ.

ರೈಲು ಸಂಖ್ಯೆ 22818 ಮೈಸೂರು- ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಭಾನುವಾರ ಮಧ್ಯರಾತ್ರಿ 12.30ಕ್ಕೆ ಮೈಸೂರಿನಿಂದ ಹೊರಟು ಇದೇ ಮಾರ್ಗವಾಗಿ  ಮಂಗಳವಾರ ಮಧ್ಯಾಹ್ನ 2.50ಕ್ಕೆ ಹೌರಾ ತಲುಪಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry