ಹ್ಯಾಂಡ್‌ಬಾಲ್: ಚಿತ್ರದುರ್ಗಕ್ಕೆ ಪ್ರಶಸ್ತಿ

6

ಹ್ಯಾಂಡ್‌ಬಾಲ್: ಚಿತ್ರದುರ್ಗಕ್ಕೆ ಪ್ರಶಸ್ತಿ

Published:
Updated:

ಚಿತ್ರದುರ್ಗ: ಚಿತ್ರದುರ್ಗ ತಂಡವು ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ಬುಧವಾರ ಕೊನೆಗೊಂಡ ಬೆಂಗಳೂರು ವಿಭಾಗ ಮಟ್ಟದ ಪ್ರೌಢಶಾಲೆಗಳ 17 ವರ್ಷ ವಯಸ್ಸಿನೊಳಗಿನವರ ಬಾಲಕರ ವಿಭಾಗದ ಹ್ಯಾಂಡ್‌ಬಾಲ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದೆ.ಚಿತ್ರದುರ್ಗ ತಂಡ 27-15 ಗೋಲುಗಳಿಂದ ಬೆಂಗಳೂರು ಉತ್ತರ ತಂಡದ ವಿರುದ್ಧ ಗೆದ್ದು ಈ ಸಾಧನೆ ಮಾಡಿದೆ. ವಿಜಯಿ ತಂಡದ ಮಹಮ್ಮದ್ ಶಹೀದ್ 13, ದೀಪಕ್ 4, ಮದಿನಿ 4, ಮುತ್ತಾ 3 ಹಾಗೂ ಭರತ್ 3 ಗೋಲು ಗಳಿಸಿದರು.17 ವರ್ಷ ವಯಸ್ಸಿನೊಳಗಿನವರ ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ಉತ್ತರ ತಂಡವು ದಾವಣಗೆರೆ ತಂಡದ ವಿರುದ್ಧ 4-3 ಗೋಲುಗಳಿಂದ ಜಯ ಗಳಿಸಿದೆ.ಹಿರಿಯ ಪ್ರಾಥಮಿಕ ಶಾಲಾ ಮಟ್ಟದ 14 ವರ್ಷದ ವಯಸ್ಸಿನೊಳಗಿನವರ ಬಾಲಕರ ವಿಭಾಗದಲ್ಲಿ          ಚಿತ್ರದುರ್ಗ ತಂಡವು ದಾವಣಗೆರೆ ವಿರುದ್ಧ 10-3 ಗೋಲುಗಳಿಂದ ಗೆಲುವು ಸಾಧಿಸಿದೆ.14 ವರ್ಷ ವಯಸ್ಸಿನೊಳಗಿನವರ ಬಾಲಕಿಯರ ವಿಭಾಗದಲ್ಲಿ ದಾವಣಗೆರೆ ತಂಡವು ಮಧುಗಿರಿ ವಿರುದ್ಧ 3-2 ಗೋಲುಗಳಿಂದ ಜಯ ಗಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry