ಹ್ಯಾಟ್ರಿಕ್‌ ನಿರೀಕ್ಷೆಯಲ್ಲಿ ಮರ್ಕೆಲ್‌!

7

ಹ್ಯಾಟ್ರಿಕ್‌ ನಿರೀಕ್ಷೆಯಲ್ಲಿ ಮರ್ಕೆಲ್‌!

Published:
Updated:

ಬರ್ಲಿನ್‌ (ಎಎಫ್‌ಪಿ):ಕುತೂಹಲ ಮೂಡಿ­ಸಿರುವ ಜರ್ಮನಿಯ ಚುನಾ­ವಣೆಗೆ ಭಾನುವಾರ ಮತದಾನ ಭಾರಿ ಚುರುಕಿನಿಂದ ಆರಂಭವಾಗಿದೆ. ಭಾರಿ ಪ್ರಭಾವ ಹೊಂದಿರುವ ಚಾನ್ಸೆಲರ್‌ ಎಂಜಿಲಾ ಮರ್ಕೆಲ್‌ ಮೂರನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.ಒಟ್ಟು 6.20 ಕೋಟಿ ಜನರು ಮತ ಚಲಾಯಿಸಲಿದ್ದಾರೆ. ಮರ್ಕೆಲ್‌ ತಮ್ಮ ತವರು ಜಿಲ್ಲೆ ಕೇಂದ್ರ ಬರ್ಲಿನ್‌ನಲ್ಲಿ ಮತ ಚಲಾಯಿಸಲಿದ್ದಾರೆ.

ವಿಶ್ವದ ಅತ್ಯಂತ ಪ್ರಭಾವಿ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮರ್ಕೆಲ್‌ ಹ್ಯಾಟ್ರಿಕ್‌ ಸಾಧಿಸುವುದು ಬಹುತೇಕ ಖಚಿತವಾಗಿದೆ.

ಜರ್ಮನಿಯಲ್ಲಿ ‘ಮುಟ್ಟಿ’(ಅಮ್ಮ) ಎಂದು  ಖ್ಯಾತರಾಗಿರುವ, 59 ವರ್ಷದ ಮರ್ಕೆಲ್‌ ಜನಪ್ರಿಯತೆಯ ತುತ್ತ ತುದಿಯಲ್ಲಿದ್ದು, ಅವರು ಮರು ಆಯ್ಕೆ ಬಹುತೇಕ ಖಚಿತ ಎಂದು ರಾಜಕೀಯ ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ.ಆದರೆ, ತಮ್ಮ ರಾಜಕೀಯ ವಿರೋಧಿಗಳ ಜೊತೆ ಸೇರಿ ಆಡಳಿತ ನಡೆಸಬೇಕಾದ ಅನಿವಾರ್ಯತೆಯನ್ನು ಅವರು ಎದುರಿಸುತ್ತಿದ್ದಾರೆ.

ತೀವ್ರ ಆರ್ಥಿಕ ಮುಗ್ಗಟ್ಟಿನಿಂದ ತತ್ತಸಿರುವ ಐರೋಪ್ಯ ಒಕ್ಕೂಟದ ಬಲಾಢ್ಯ ರಾಷ್ಟ್ರ  ಜಮರ್ನಿಯನ್ನು  ಸಂಕಷ್ಟದಿಂದ ಪಾರು ಮಾಡುತ್ತಾರೆ ಎಂದು ಮತದಾರರು ಅಭಿಪ್ರಾಯ­ಪಟ್ಟಿದ್ದಾರೆ.ಅವರು ತಮ್ಮ ಹಳೆಯ ಮೈತ್ರಿಕೂಟ­ದೊಂದಿಗೆ ಮುಂದು­ವರೆಯುತ್ತಾ­ರೆಯೋ ಅಥವಾ ಕಡು ವಿರೋಧಿಗಳಾದ ಎಡ ಪಂಥೀಯರೊಂದಿಗೆ  ಕೈಜೋಡಿ ಸುತ್ತಾರೋ ಎಂಬ ಜಿಜ್ಞಾಸೆ ಆರಂಭ ವಾಗಿದೆ. 1990ರ ದಶಕದ ಐತಿಹಾಸಿಕ ಜರ್ಮನ್‌ ಏಕೀಕರಣದ ನಂತರ ಬಲಪಂಥೀಯರೊಂದಿಗೆ ಸೇರಿ  ಅಧಿಕಾರ ಹಿಡಿದ ಮರ್ಕೆಲ್‌ ನೇತೃತ್ವದ ಮೈತ್ರಿ ಕೂಟ ಸರ್ಕಾರ ಜನಪ್ರಿಯತೆ ಗಳಿಸಿತ್ತು.ಈ ಬಾರಿ ಈ ಮೈತ್ರಿಯ ಮೇಲೆ ಅನಿಶ್ಚಿತತೆಯ ಮೋಡ ಆವರಿ­ಸಿದ್ದು, ಬಹುತೇಕ  ಮುರಿದುಬೀಳುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry