ಹ್ಯಾಬಿಟೇಟ್‌ಗೆ ಭಾಗೀರತಿ

7

ಹ್ಯಾಬಿಟೇಟ್‌ಗೆ ಭಾಗೀರತಿ

Published:
Updated:
ಹ್ಯಾಬಿಟೇಟ್‌ಗೆ ಭಾಗೀರತಿ

ದೆಹಲಿಯಲ್ಲಿ ಪ್ರತಿ ವರ್ಷ ನಡೆಯುವ ಪ್ರತಿಷ್ಠಿತ `ಹ್ಯಾಬಿಟೇಟ್ ಅಂತರರಾಷ್ಟ್ರೀಯ ಚಿತ್ರೋತ್ಸವ~ಕ್ಕೆ ಡಾ. ಬರಗೂರು ರಾಮಚಂದ್ರಪ್ಪ ಅವರ ನಿರ್ದೇಶನದ `ಭಾಗೀರತಿ~ ಕನ್ನಡ ಚಿತ್ರ ಆಯ್ಕೆಯಾಗಿದೆ.ಭಾರತೀಯ ಭಾಷೆಯಲ್ಲಿನ ಪ್ರಶಸ್ತಿ ವಿಜೇತ ಚಿತ್ರಗಳು ಹಾಗೂ ಸಹೃದಯರ ಗಮನಸೆಳೆದ ಸಿನಿಮಾಗಳನ್ನು ಉತ್ತೇಜಿಸುವ ಉದ್ದೇಶ ಹೊಂದಿರುವ ಈ ಚಿತ್ರೋತ್ಸವ ಕಳೆದ ಆರು ವರ್ಷಗಳಿಂದ ನಡೆಯುತ್ತಿದೆ. ಪ್ರಸಕ್ತ ಸಾಲಿನ, ಏಳನೇ `ಹ್ಯಾಬಿಟೇಟ್ ಚಿತ್ರೋತ್ಸವ~ ಜುಲೈ 21ರಿಂದ 29ರವರೆಗೆ ದೆಹಲಿಯಲ್ಲಿ ನಡೆಯಲಿದೆ.ಕನ್ನಡದ ಪ್ರಸಿದ್ಧ ಜಾನಪದ ಕಥನ ಕಾವ್ಯವಾದ `ಕೆರೆಗೆ ಹಾರ~ವನ್ನು ಆಧರಿಸಿದ `ಭಾಗೀರತಿ~ ಚಿತ್ರ ಇತ್ತೀಚೆಗೆ ತೆರೆಕಂಡಿದ್ದು ಸಹೃದಯರ ಗಮನಸೆಳೆದಿದೆ. ಅನೇಕ ವ್ಯಾಖ್ಯಾನಗಳನ್ನು ಕಂಡಿರುವ `ಕೆರೆಗೆ ಹಾರ~ವನ್ನು ನಿರ್ದೇಶಕ ಬರಗೂರು ರಾಮಚಂದ್ರಪ್ಪನವರು ಆಧುನಿಕ ಸಂದರ್ಭದಲ್ಲಿ ದೃಶ್ಯ ಮಾಧ್ಯಮದ ಮೂಲಕ ಪುನರ್ ವ್ಯಾಖ್ಯಾನಕ್ಕೆ ಒಳಪಡಿಸಿದ್ದಾರೆ.ಬಿ.ಕೆ. ಶ್ರೀನಿವಾಸ್ ನಿರ್ಮಾಣದ ಈ ಚಿತ್ರದ ತಾರಾಗಣದಲ್ಲಿ ಕಿಶೋರ್, ಭಾವನಾ, ತಾರಾ, ರವಿಶಂಕರ್, ಹೇಮಾ ಚೌದರಿ, ವತ್ಸಲಾ ಮೋಹನ್ ಮುಂತಾದವರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry