ಗುರುವಾರ , ಏಪ್ರಿಲ್ 15, 2021
20 °C

ಹ್ಯಾಮರ್ ಥ್ರೋ: ಲೈಸೆಂಕೊಗೆ ಚಿನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್: ರಷ್ಯಾದ ತತಿಯಾನಾ ಲೈಸೆಂಕೊ ಅವರು ಲಂಡನ್ ಒಲಿಂಪಿಕ್ಸ್‌ನ ಮಹಿಳೆಯರ ಹ್ಯಾಮರ್ ಥ್ರೋ ಸ್ಪರ್ಧೆಯಲ್ಲಿ ಕೂಟ ದಾಖಲೆಯೊಂದಿಗೆ ಬಂಗಾರದ ಪದಕ ಗೆದ್ದುಕೊಂಡರು.ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ಲೈಸೆಂಕೊ 78.18 ಮೀ. ದೂರದ ಸಾಧನೆಯೊಂದಿಗೆ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡರು. ಮಾತ್ರವಲ್ಲ ಬೆಲಾರಸ್‌ನ ಅಕ್ಸಾನಾ ಮಿಯಕೋವಾ ಬೀಜಿಂಗ್‌ನಲ್ಲಿ ಸ್ಥಾಪಿಸಿದ್ದ ಕೂಟ ದಾಖಲೆಯನ್ನು ಮುರಿದರು.ಪೋಲೆಂಡ್‌ನ ಅನಿತಾ ವೊಡರ್ಸಿಕ್ (77.60 ಮೀ) ಮತ್ತು ಜರ್ಮನಿಯ ಬೆಟ್ಟಿ ಹೆಡ್ಲೆರ್ (77.12 ಮೀ.) ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ತಮ್ಮದಾಗಿಸಿಕೊಂಡರು.ಆರು ಅವಕಾಶಗಳಲ್ಲಿ ಲೈಸೆಂಕೊ ಅತ್ಯುತ್ತಮ ಸಾಧನೆ ಐದನೇ ಪ್ರಯತ್ನದಲ್ಲಿ ಮೂಡಿಬಂತು. ಮೊದಲ ಪ್ರಯತ್ನದಲ್ಲಿ ಅವರು 77.56 ಮೀ. ದೂರ ಎಸೆದಿದ್ದರು. ಬಳಿಕದ ಮೂರು ಪ್ರಯತ್ನಗಳಲ್ಲಿ ಉತ್ತಮ ಪ್ರದರ್ಶನ ಮೂಡಿಬರಲಿಲ್ಲ. ಆದರೆ ಐದನೇ ಪ್ರಯತ್ನದಲ್ಲಿ 78 ಮೀ.ಗೂ ಅಧಿಕ ದೂರ ಕಂಡುಕೊಂಡು ಚಿನ್ನದ ಪದಕ ಖಚಿತಪಡಿಸಿಕೊಂಡರು.ಕೊನೆಯ ಪ್ರಯತ್ನದಲ್ಲಿ 77.60 ಮೀ. ದೂರ ಎಸೆಯುವ ಮೂಲಕ ಪೋಲೆಂಡ್‌ನ ವೊಡರ್ಸಿಕ್ ಎರಡನೇ ಸ್ಥಾನ ಪಡೆದರು.ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.