ಹ್ಯಾರಿ ನಗ್ನ ಚಿತ್ರ ನಿಜವಾದದ್ದು

ಶುಕ್ರವಾರ, ಮೇ 24, 2019
25 °C

ಹ್ಯಾರಿ ನಗ್ನ ಚಿತ್ರ ನಿಜವಾದದ್ದು

Published:
Updated:

ಲಂಡನ್ (ಎಎಫ್‌ಪಿ): ಲಾಸ್ ವೇಗಾಸ್‌ನಲ್ಲಿ ರಾಜಕುಮಾರ ಹ್ಯಾರಿ ಅವರು ನಗ್ನರಾಗಿ ಗೆಳೆಯರೊಂದಿಗೆ ಇದ್ದ ಚಿತ್ರಗಳು ನಿಜವಾದುದು ಎಂದು ಬ್ರಿಟನ್ನಿನ  ರಾಜ ಕುಟುಂಬ ಬುಧವಾರ ಹೇಳಿದೆ.ಅಮೆರಿಕದ ಸೆಲೆಬ್ರಿಟಿ ಸುದ್ದಿ ವೆಬ್‌ಸೈಟ್ ಟಿಎಂಜಡ್. ಕಾಮ್‌ನಲ್ಲಿ ರಾಜಕುಮಾರ ಗೆಳೆಯರೊಂದಿಗೆ ನಗ್ನವಾಗಿ ನಿಂತಿರುವ ಚಿತ್ರಗಳು ಪ್ರಕಟಗೊಂಡಿದ್ದವು.ಪ್ರಕಟಗೊಂಡಿದ್ದ ಎರಡು ಛಾಯಾಚಿತ್ರಗಳಲ್ಲಿ ಒಂದು ಚಿತ್ರದಲ್ಲಿ 27 ವರ್ಷದ ರಾಜಕುಮಾರ ಕೇವಲ ಕೈ ಗಡಿಯಾರ ಮತ್ತು ನೆಕ್ಲೆಸ್‌ನ್ನು ಧರಿಸಿದ್ದರು ಮತ್ತು ತಮ್ಮ ಜನನಾಂಗವನ್ನು ಕೈಗಳಿಂದ ಮುಚ್ಚಿದ್ದರು. ಅವರ ಹಿಂಭಾಗದಲ್ಲಿ ಮತ್ತೊಬ್ಬ ನಗ್ನ ವ್ಯಕ್ತಿ ನಿಂತಿದ್ದ ದೃಶ್ಯವಿತ್ತು.ಮತ್ತೊಂದು ಚಿತ್ರದಲ್ಲಿ ಹ್ಯಾರಿ ಅವರು ಇನ್ನೊಬ್ಬ ನಗ್ನ ವ್ಯಕ್ತಿಯನ್ನು ತಬ್ಬಿಕೊಂಡಿದ್ದ ದೃಶ್ಯವಿತ್ತು. ಆದರೆ ಆ ವ್ಯಕ್ತಿ ಮಹಿಳೆಯೇ ಅಥವಾ ಪುರುಷನೇ ಎಂಬುದು ದೃಢಪಟ್ಟಿಲ್ಲ.ಈ ಚಿತ್ರಗಳಲ್ಲಿರುವುದು ರಾಜಕುಮಾರನೇ ಎಂಬುದನ್ನು ರಾಜಮನೆತನ ಸ್ಪಷ್ಟಪಡಿಸಿದೆ. ಆದರೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry