ಮಂಗಳವಾರ, ನವೆಂಬರ್ 12, 2019
27 °C

`್ಙ 41.78 ಕೋಟಿ ಬೆಳೆ ವಿಮೆ ಹಣ ಬಿಡುಗಡೆ'

Published:
Updated:

ವಿಜಾಪುರ: `2011ರ ಹಿಂಗಾರಿ ಹಂಗಾಮಿನ ಬೆಳೆ ವಿಮೆ ಹಣ ್ಙ 41.78 ಕೋಟಿ ಡಿಸಿಸಿ ಬ್ಯಾಂಕ್‌ಗೆ ಜಮೆ ಆಗಿದ್ದು, ತಕ್ಷಣವೇ ಎಲ್ಲ ಸಹಕಾರ ಸಂಘಗಳಿಗೆ ಬಿಡುಗಡೆ ಮಾಡಲಾಗುವುದು' ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ ಹೇಳಿದರು.`ಸಹಕಾರ ಸಂಘಗಳ ಮೂಲಕ ತಮ್ಮ ಖಾತೆಗೆ ಜಮೆ ಆಗುವ ಈ ಹಣವನ್ನು ರೈತರು ಮುಂಗಾರು ಬಿತ್ತನೆ ಸಂದರ್ಭದಲ್ಲಿ ಬಳಸಿಕೊಳ್ಳಬೇಕು' ಎಂದು ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.`ರಾಜ್ಯಕ್ಕೆ ಒಟ್ಟಾರೆ ್ಙ 98 ಕೋಟಿ ವಿಮೆ ಹಣ ಬಂದಿದ್ದು, ಅದರಲ್ಲಿ ವಿಜಾಪುರ ಜಿಲ್ಲೆಗೆ ಸಿಂಹಪಾಲು ್ಙ 41.78 ಕೋಟಿ ದೊರೆತಿದೆ. ಜಿಲ್ಲೆಯ ರೈತರಿಗೆ ಇಷ್ಟೊಂದು ಪರಿಹಾರ ಹಣ ದೊರಕಿಸಿಕೊಟ್ಟ ಶ್ರೇಯಸ್ಸು ಡಿಸಿಸಿ ಬ್ಯಾಂಕ್‌ಗೆ ಸಲ್ಲುತ್ತದೆ. 2003-04 ಹಾಗೂ 2011ರ ಸಾಲಿನಲ್ಲಿ ಬರಗಾಲದ ಮುನ್ಸೂಚನೆ ಅರಿತು ವಿಶೇಷ ಒತ್ತು ನೀಡಿ ರೈತರ ಮನವೊಲಿಸಿ ವಿಮೆ ಮಾಡಿಸಿದ್ದೆವು. ಬೆಳೆ ವಿಮೆ ಹಾಗೂ ಸಾಲ ಮನ್ನಾ ಸೇರಿ 2011 ಮತ್ತು 2012ನೇ ಸಾಲಿನಲ್ಲಿ ಒಟ್ಟಾರೆ ್ಙ 400 ಕೋಟಿಯನ್ನು ಜಿಲ್ಲೆಯ ರೈತರಿಗೆ ದೊರಕಿಸಿಕೊಟ್ಟಿದ್ದೇವೆ' ಎಂದರು.`ಜಿಲ್ಲೆಯಲ್ಲಿ 3.54 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆಹಾನಿಯಾಗಿದೆ ಎಂದು ಡಿಸಿಸಿ ಬ್ಯಾಂಕ್‌ನಿಂದ ವರದಿ ಸಲ್ಲಿಸಿದ್ದೇವು. ಅಂದಿನ ಜಿಲ್ಲಾಧಿಕಾರಿಗಳು 2.33 ಲಕ್ಷ ಹೆಕ್ಟೇರ್ ಬೆಳೆ ನಷ್ಟವಾಗಿದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿದರು. ಆಗಿನ ಜಿಲ್ಲಾಧಿಕಾರಿಗಳು ಹಾಗೂ ಕೃಷಿ ಇಲಾಖೆಯವರ ತಪ್ಪಿನಿಂದಾಗಿ ಜಿಲ್ಲೆಯ ರೈತರಿಗೆ ಬರಬೇಕಿದ್ದ ಅಂದಾಜು ್ಙ 20 ಕೋಟಿ ವಿಮಾ ಮೊತ್ತ ಕೈತಪ್ಪಿದಂತಾಗಿದೆ' ಎಂದು ಹಳಹಳಿಸಿದರು.`ಒಟ್ಟಾರೆ ್ಙ 3.13 ಕೋಟಿ ವಿಮಾ ಮೊತ್ತಕ್ಕೆ ಪರಿಹಾರ ಮಾಡಿಸಿ ್ಙ 5.97 ಕೋಟಿ ಪ್ರಿಮಿಯಮ್ ಪಾವತಿಸಲಾಗಿತ್ತು. ಜಿಲ್ಲೆಯ 2.45 ಲಕ್ಷ ರೈತರಿಗೆ ್ಙ 41.78 ಕೋಟಿ ಪರಿಹಾರ ಬಿಡುಗಡೆಯಾಗಿದೆ. ವಿಜಾಪುರ ಜಿಲ್ಲೆಗೆ ಅತಿ ಹೆಚ್ಚು 86,576 ಜನ ರೈತರಿಗೆ ್ಙ 15.53 ಕೋಟಿ, ಬಸವನ ಬಾಗೇವಾಡಿ ತಾಲ್ಲೂಕಿನ 78,315 ಜನ ರೈತರಿಗೆ ್ಙ 12.84 ಕೋಟಿ ವಿಮಾ ಪರಿಹಾರ ಬಂದಿದೆ' ಎಂದು ಮಾಹಿತಿ ನೀಡಿದರು.್ಙ 5.17ಕೋಟಿ ಲಾಭ: ಡಿಸಿಸಿ ಬ್ಯಾಂಕ್ 2012-13ನೇ ಸಾಲಿನಲ್ಲಿ ಒಟ್ಟಾರೆ ್ಙ 5.17 ಕೋಟಿ ಲಾಭ ಗಳಿಸಿದೆ. ರೂ.1030 ಕೋಟಿ ಸಾಲ ವಿತರಿಸಿದ್ದು, ಇದರಲ್ಲಿ ಕೃಷಿಗೆ ್ಙ 628 ಕೋಟಿ, ಕೃಷಿಯೇತರ ಉದ್ದೇಶಕ್ಕೆ ್ಙ 402 ಕೋಟಿ ಸಾಲ ನೀಡಲಾಗಿದೆ. ಕಳೆದ ವರ್ಷಕ್ಕಿಂತ ಈ ಅವಧಿಯಲ್ಲಿ ್ಙ 205 ಕೋಟಿ ಹೆಚ್ಚಿನ ಸಾಲ ವಿತರಿಸಲಾಗಿದೆ. ಸಾಲ ವಸೂಲಾತಿ ಪ್ರಮಾಣ ಶೇ.95ಕ್ಕಿಂತ ಹೆಚ್ಚಾಗಿದ್ದು, ಅನುತ್ಪಾದಕ ಆಸ್ತಿಯ ಪ್ರಮಾಣ ಶೇ.1.60 ರಷ್ಟಿದೆ ಎಂದು ಬ್ಯಾಂಕ್‌ನ ಉಪ ಪ್ರಧಾನ ವ್ಯವಸ್ಥಾಪಕ ಆರ್.ಎಂ. ಬಣಗಾರ ಹೇಳಿದರು.2012ರ ಬೆಳೆ ಸಾಲ ಮನ್ನಾ ಮತ್ತು ಬಡ್ಡಿ ಸಹಾಧನ ಯೋಜನೆಯಲ್ಲಿ ಜಿಲ್ಲೆಯ 13.43 ಲಕ್ಷ ರೈತರಿಗೆ ್ಙ 325. 55 ಕೋಟಿ ಅಸಲು ಹಾಗೂ ರೂ.24.35 ಕೋಟಿ ಬಡ್ಡಿ ಸೇರಿ ಒಟ್ಟಾರೆ ್ಙ 349.90 ಕೋಟಿ ಪ್ರಯೋಜನ ದೊರೆತಿದೆ. ಇದುವರೆಗೆ ್ಙ 192 ಕೋಟಿ ಬಿಡುಗಡೆಯಾಗಿದೆ ಎಂದರು.ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಕೆ. ಸುರೇಂದ್ರನಾಥ, ಪ್ರಧಾನ ವ್ಯವಸ್ಥಾಪಕ ಎ.ಎಂ. ಮಿರ್ಜಾ, ಹಿರಿಯ ವ್ಯವಸ್ಥಾಪಕರಾದ ಜಿ.ಎಂ. ಪಾಟೀಲ, ಕೆ.ಎಂ. ಪಾಟೀಲ, ಸುರೇಶ ಪಾಟೀಲ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.

ಪ್ರತಿಕ್ರಿಯಿಸಿ (+)