​ಅಹಮದಾಬಾದ್ ಪಂದ್ಯ ಡಿ. 28ಕ್ಕೆ ಮುಂದೂಡಿಕೆ

7
ಇಂಡೋ- ಪಾಕ್ ಟಿ-20 ಪಂದ್ಯ

​ಅಹಮದಾಬಾದ್ ಪಂದ್ಯ ಡಿ. 28ಕ್ಕೆ ಮುಂದೂಡಿಕೆ

Published:
Updated:

ನವದೆಹಲಿ (ಪಿಟಿಐ): ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಡಿ. 27ರಂದು ಅಹಮದಾಬಾದ್‌ನಲ್ಲಿ ನಡೆಯಬೇಕಿದ್ದ ಎರಡನೇ ಟ್ವೆಂಟಿ- ಟ್ವೆಂಟಿ ಕ್ರಿಕೆಟ್ ಪಂದ್ಯವನ್ನು ಮುಂದೂಡುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮನವಿಗೆ ಒಪ್ಪಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಡಿ. 28ರಂದು ಪಂದ್ಯ ನಡೆಸಲು ಶನಿವಾರ ಇಲ್ಲಿ ನಿರ್ಧರಿಸಿತು.


ಡಿ. 27ರಂದು ಪಾಕಿಸ್ತಾನದ ಮಾಜಿ ಪ್ರಧಾನಿ ದಿ. ಬೆನೆಜಿರ್ ಭುಟ್ಟೋ ಅವರ ಐದನೇ ಪುಣ್ಯ ಸ್ಮರಣೆ ಕಾರ್ಯಕ್ರಮ ಇರುವುದರಿಂದ ಅಂದಿನ ದಿನದ ಪಂದ್ಯವನ್ನು ಮುಂದೂಡುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬಿಸಿಸಿಐಗೆ ಮನವಿ ಮಾಡಿತ್ತು.ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಎರಡು ಟ್ವೆಂಟಿ-ಟ್ವೆಂಟಿ ಪಂದ್ಯ ಮತ್ತು ಮೂರು ಏಕದಿನ ಪಂದ್ಯಗಳನ್ನು ಆಯೋಜಿಸಲಾಗಿದ್ದು, ಡಿಸೆಂಬರ್ 25ರಂದು ಮೊದಲ ಟ್ವೆಂಟಿ- ಟ್ವೆಂಟಿ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ.

ಬೆಂಗಳೂರು ಪಂದ್ಯಕ್ಕೆ ಅಡ್ಡಿ : ಮುತಾಲಿಕ್ ಬೆದರಿಕೆ
ಬೆಳಗಾವಿ (ಪಿಟಿಐ)

: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡಿಸೆಂಬರ್ 25ರಂದು ನಡೆಯಲಿರುವ ಪ್ರಥಮ ಟ್ವೆಂಟಿ ಟ್ವೆಂಟಿ ಪಂದ್ಯಕ್ಕೆ ಅಡ್ಡಿಪಡಿಸುವುದಾಗಿ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಬೆದರಿಕೆ ಹಾಕಿದ್ದು, ಪಂದ್ಯ ನಡೆಸಲು ಅನುಮತಿ ನೀಡದಂತೆ ರಾಜ್ಯ ಸರ್ಕಾರವನ್ನು ಶನಿವಾರ ಇಲ್ಲಿ ಒತ್ತಾಯಿಸಿದರು.`ನೆರೆಯ ದೇಶಗಳ ಜತೆ ಉತ್ತಮ ಬಾಂಧವ್ಯ ಹೊಂದಲು ಭಾರತ ಪ್ರಯತ್ನಿಸುತ್ತಿದೆಯಾದರೂ ಪಾಕಿಸ್ತಾನದಿಂದ ಅದಕ್ಕೆ ಸಕಾರಾತ್ಮಕ ಸ್ಪಂದನೆ ಸಿಗುತ್ತಿಲ್ಲ.  ಭಯೋತ್ಪಾದನೆಯನ್ನು ಪೋಷಿಸುತ್ತಿರುವ ದೇಶವನ್ನು ಬೆಂಬಲಿಸುವ ಅಗತ್ಯವಾದರೂ ಏನು' ಎಂದು ಮುತಾಲಿಕ್ ಪ್ರಶ್ನಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry