ಮಂಗಳವಾರ, ಜನವರಿ 28, 2020
17 °C

‘ಅಂಗವಿಕಲರಿಗೆ ಅವಕಾಶ ಕಲ್ಪಿಸಿ; ಸಾಧನೆಗೆ ಪ್ರೇರೇಪಿಸಿ ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ‘ಅಂಗವಿಕಲರಿಗೆ ಅನು ಕಂಪದ ಜೊತೆಗೆ ಅವಕಾಶವನ್ನೂ ಕಲ್ಪಿಸಿ ಕೊಡಬೇಕು. ರಾಜ್ಯವನ್ನಾಳುವ ಪ್ರತಿಭೆ ಅವರಲ್ಲಿದೆ. ದೃಢ ಮನಸ್ಸಿನ ಅವರು ಯಾವ ಕ್ಷೇತ್ರದಲ್ಲಾದರೂ ಉತ್ತಮ ಸೇವೆ ಮಾಡಬಲ್ಲರು’ ಎಂದು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಹೇಳಿದರು.ಕರ್ನಾಟಕ ಅಂಗವಿಕಲರ ರಾಜ್ಯ ಒಕ್ಕೂಟದ ಜಿಲ್ಲಾ ಘಟಕದ ಸಹಯೋಗ ದಲ್ಲಿ ಮಂಗಳವಾರ ಇಲ್ಲಿಯ ಲಯನ್ಸ್‌ ಬ್ಲಡ್‌ ಬ್ಯಾಂಕ್‌ ಸಭಾಂಗಣದಲ್ಲಿ ನಡೆದ ವಿಶ್ವ ಅಂಗವಿಕಲರ ದಿನಾಚರಣೆ ಹಾಗೂ ರಕ್ತದಾನ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಾನ್ನಿಧ್ಯ ವಹಿಸಿದ್ದ ಶಾಂತಮಲ್ಲಿ ಕಾರ್ಜುನ ಸ್ವಾಮೀಜಿ, ‘ಕಣ್ಣುಗಳು ಭದ್ರವಾಗಿರಲಿ, ನಮ್ಮ ಕಿವಿಗಳು ಜ್ಞಾನ ವನ್ನು ಕೇಳುವಂತಾಗಲಿ. ಈ ದೇಹವನ್ನು ನಾವು ಚೆನ್ನಾಗಿ ಬಳಸಿಕೊಂಡು ಜೀವನ ದಲ್ಲಿ ಸಾಧನೆ ಮಾಡುತ್ತಿರಬೇಕು’ ಎಂದರು.ಮನಸ್ಸಿನ ಶಕ್ತಿ, ಬುದ್ದಿಶಕ್ತಿ, ಜ್ಞಾನ ಶಕ್ತಿ... ಹೀಗೆ ಅಗಾಧವಾದ ಶಕ್ತಿ ನಮ್ಮ ಲ್ಲಿದೆ. ಮನುಷ್ಯನ ಒಳ್ಳೆಯ ಗುಣ, ಒಳ್ಳೆಯ  ಸಂಸ್ಕೃತಿ ಉಪಯೋಗಕ್ಕೆ ಬರು ತ್ತದೆ. ಅಂಗವಿಕಲರು ಯಾವುದೇ ಸಮಯದಲ್ಲಿ ಎದೆಗುಂದದೇ ತಮ್ಮಲ್ಲಿ ರುವ ಶಕ್ತಿಯನ್ನು ಸದುಪಯೋಗಪಡಿಸಿ ಕೊಂಡು ಆದರ್ಶವಾಗಿ ಬದುಕಬೇಕು ಎಂದು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿದ ಲಯನ್ಸ್‌ ಬ್ಲಡ್‌ ಬ್ಯಾಂಕ್‌ ನಿರ್ದೇಶಕ ಡಾ.ಪ್ರೇಮಾನಂದ ಅಂಬಲಿ, ಅಂಗವಿಕಲರು ರಕ್ತದಾನ ಮಾಡುತ್ತಿರು ವುದು ರಾಜ್ಯದಲ್ಲಿ ಇದೇ ಮೊದಲು. ಸಮಾಜದ ಎಲ್ಲರೂ ರಕ್ತದಾನ ಮಾಡಿದರೆ ಹಲವಾರು ಜೀವಗಳನ್ನು ಉಳಿಸಬಹುದು ಎಂದರು.ಕರ್ನಾಟಕ ಅಂಗವಿಕಲರ ರಾಜ್ಯ ಒಕ್ಕೂಟ ಜಿಲ್ಲಾ  ಘಟಕದ ಅಧ್ಯಕ್ಷ ಪರಶುರಾಮ ಗುನ್ನಾಪುರ, ಪ್ರಧಾನ ಕಾರ್ಯದರ್ಶಿ ಸುರೇಶ ಚವ್ಹಾಣ, ಅಶೋಕ ವಾಲಿಕಾರ, ವೀರೇಶ ವಾಂಗಿ, ವಿಠ್ಠಲ ಹಂಚನಾಳ, ಕಲೀಲ್‌ ಅಹ್ಮದ ಮುಲ್ಲಾ, ಕಂಟೆಪ್ಪಗೌಡ ಪಾಟೀಲ, ಚನ್ನಯ್ಯ ಸಾರಂಗಮಠ, ಶಂಕರ ಪವಾರ, ಸಂತೋಷ ಬಮ್ಮನಹಳ್ಳಿ, ಮಹೇಶ ಮುಧೋಳ, ಪರಶುರಾಮ ಕುಂಚಕೋರಮ್ ಇತರ ಅಂಗವಿಕಲರು ರಕ್ತದಾನ ಮಾಡಿದರು.ನಗರಸಭೆ ಸದಸ್ಯರಾದ ಗೋಪಾಲ ಘಟಕಾಂಬಳೆ, ಪ್ರೇಮಾನಂದ ಬಿರಾ ದಾರ, ಪ್ರಕಾಶ ಮಿರ್ಜಿ, ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸಬಲೀ ಕರಣ ಅಧಿಕಾರಿ ವಿ.ಜಿ. ಉಪಾಧ್ಯೆ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಹಾದೇವಿ ಗೋಕಾಕ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಮುತ್ತುರಾಜ ಕೊಂಡಗೂಳಿ, ಸುರೇಶ ವಿಜಾಪುರ ಇತರರು ವೇದಿಕೆಯಲ್ಲಿದ್ದರು.ರಮೀಜಾ ಮಕಾನದಾರ ಸ್ವಾಗತಿಸಿ ದರು. ಭಾರತಿ ಹೂಗಾರ ಕಾರ್ಯಕ್ರಮ ನಿರೂಪಿಸಿದರು. ಪರಶುರಾಮ ಗುನ್ನಾಪುರ ವಂದಿಸಿದರು.

ದೊರೆಯದ ಸೌಲಭ್ಯ: ಅಸಮಾಧಾನ

ವಿಜಾಪುರ:
ಮಹಿಳಾ ವಿವಿಯ ಪ್ರವೇಶದಲ್ಲಿ ಅಂಗವಿಕಲರಿಗೆ ಮೀಸಲಾತಿ ಇಲ್ಲ. ಶುಲ್ಕ ವಿನಾಯಿತಿಯೂ ಇಲ್ಲ ಎಂದು ಅಂಗವಿಕಲರ ಸಂಘಟನೆಗಳ ಮುಖಂಡರು ದೂರಿದ್ದಾರೆ.

‘ಗ್ರಂಥಾಲಯ ಇರುವುದು ಮಹಡಿಯ ಮೇಲೆ. ವಾರಕ್ಕೊಂದು ಬಾರಿ ಮಹಡಿ ಹತ್ತಿ ಇಳಿಯಬೇಕು. ಅಂಗವಿಕಲೆಯರು ಪಡೆಯುವ ಪುಸ್ತಕಗಳ ನವೀಕರಣ ಅವಧಿಯನ್ನು ಒಂದು ವರ್ಷಕ್ಕೆ ವಿಸ್ತರಿಸಲು ಸಾಧ್ಯವಿಲ್ಲವೇ’ ಎಂದು ಅವರು ಪ್ರಶ್ನಿಸಿದ್ದಾರೆ.ಮಹಿಳಾ ವಿವಿಯೂ ಸೇರಿದಂತೆ ಎಲ್ಲ ಕಾಲೇಜು ಗ್ರಂಥಾಲಯಗಳಲ್ಲಿ ಪುಸ್ತಕಗಳನ್ನು ವಾರಕ್ಕೊಮ್ಮೆ ಜಮೆ ಮಾಡಿ, ಹೊಸ ಪುಸ್ತಕ ತರಬೇಕು. ಮಹಿಳಾ ವಿವಿಯ ನಗರ ಆವರಣ ದಲ್ಲಿ  ಗ್ರಂಥಾಲಯ ಇರುವುದ ಮಹ ಡಿಯ ಮೇಲೆ. ಹತ್ತಲು ರ್‍ಯಾಂಪ್‌ ಸಹ ಇಲ್ಲ. ಕನಿಷ್ಠ ಒಂದು ವರ್ಷದ ಅವಧಿಗೆ ಪುಸ್ತಕ ಕೊಟ್ಟು  ಸಂಕಷ್ಟ ಪರಿಹರಿ ಸಬೇಕು ಎಂದು ವಿನಂತಿಸಿದ್ದಾರೆ. ಕರ್ನಾಟಕ ರಾಜ್ಯ ಮುಕ್ತ ವಿವಿ ಪರೀಕ್ಷೆಗಳನ್ನು ವಿಜಾಪುರದ ಎಸ್‌ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಕಾಲೇಜಿನ ಎರಡನೇ ಮಹಡಿಯಲ್ಲಿ ನಡೆಸುತ್ತಾರೆ. ಇದೂ ಸಹ ಅಂಗವಿಕಲರಿಗೆ ತೊಂದರೆಯಾಗುತ್ತದೆ ಎಂದು ಅವರು ಆಪಾದಿಸಿದ್ದಾರೆ.

ಪ್ರತಿಕ್ರಿಯಿಸಿ (+)