‘ಅಂಗವಿಕಲರು ಕೀಳರಿಮೆ ತೊರೆಯಲಿ’

7

‘ಅಂಗವಿಕಲರು ಕೀಳರಿಮೆ ತೊರೆಯಲಿ’

Published:
Updated:

ಹಂಪಿ: ‘ಅಂಗವಿಕಲರು ಕೀಳರಿಮೆ ತೊಡೆದು ಎಲ್ಲರಂತೆ ಬಾಳಬೇಕು ಎಂಬ ಉದ್ದೇಶದಿಂದ ಪ್ರಸಕ್ತ ಸಾಲಿನ ಹಂಪಿ ಉತ್ಸವದಲ್ಲಿ ಅಂಗವಿಕಲರಿಗಾಗಿ ಪ್ರತ್ಯೇಕ ಕ್ರೀಡಾಕೂಟ ಏರ್ಪಡಿಸಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಹೇಳಿದರು.ಹಂಪಿ ಉತ್ಸವದ ಅಂಗವಾಗಿ ಕಮಲಾಪುರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಅಂಗವಿಕಲರ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.‘ಅಂಗವಿಕಲರಿಗೆ ಸಹಾನುಭೂತಿಗಿಂತ ಪ್ರೋತ್ಸಾಹ ಮತ್ತು ಸಹಾಯದ ಅಗತ್ಯವಿದೆ. ಅಂಗವಿಕಲರೂ ಸಮಾಜದ ಮುಖ್ಯವಾಹಿನಿಗೆ ಬರುವಂತಾಗಲು ಇಂತಹ ಪ್ರೋತ್ಸಾಹದಾಯಕ ಚಟುವಟಿಕೆಗಳು ಅಗತ್ಯ’ ಎಂದು ಹೇಳಿದರು.‘ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಅಂದಾಜು 750 ಅಂಗವಿಕಲರು ಭಾಗವಹಿಸಿದ್ದು ಅಭಿನಂದನೀಯ. ಉತ್ಸವದ ಯಶಸ್ಸಿನಲ್ಲಿ ಅಂಗವಿಕಲರ ಪಾತ್ರವೂ ಮುಖ್ಯವಾಗಿದೆ ಎಂದು ಹೇಳಿದರು.ಬಳ್ಳಾರಿ ನಗರ ಕ್ಷೇತ್ರದ ಶಾಸಕ ಅನಿಲ್‌ ಲಾಡ್, ಜಿಲ್ಲಾಧಿಕಾರಿ ಅಮ್ಲಾನ್‌ ಆದಿತ್ಯ ಬಿಸ್ವಾಸ್, ಜಿ.ಪಂ. ಸಿಇಒ ಮಂಜುನಾಥ ನಾಯ್ಕ, ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ವೆಂಕಟೇಶ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ.ಎಸ್‌. ಕಲಾದಗಿ ಮತ್ತಿತರರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry