ಶುಕ್ರವಾರ, ಜೂನ್ 25, 2021
21 °C

‘ಅಂಗವಿಕಲರ ಮಿನಿ ವಿಶ್ವಕಪ್‌ ಕ್ರಿಕೆಟ್‌ ಆಯೋಜನೆ ಚಿಂತನೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ:ಅಂಗವಿಕಲರ ಕ್ರಿಕೆಟ್‌ಗೆ ಇನ್ನಷ್ಟು ಜೀವ ತುಂಬುವುದಕ್ಕಾಗಿ ಮಿನಿ ವಿಶ್ವಕಪ್‌ ಆಯೋಜಿಸಲು ಅಂಗವಿಕಲರ ಅಖಿಲ ಭಾರತ ಕ್ರಿಕೆಟ್‌ ಸಂಸ್ಥೆ ಚಿಂತನೆ ನಡೆಸಿದೆ ಎಂದು ಸಂಸ್ಥೆಯ ಚೇರ್‌ಮನ್‌ ಹಾಗೂ ಮಾಜಿ ಟೆಸ್ಟ್‌ ಆಟಗಾರ ಉಮೇಶ್‌ ನಾರಾಯಣ ಕುಲಕರ್ಣಿ ತಿಳಿಸಿದರು.ಬುಧವಾರ ಇಲ್ಲಿ ನಡೆಯಲಿರುವ ಅಂಗವಿಕಲರ ರಾಷ್ಟ್ರೀಯ ಕ್ರಿಕೆಟ್‌ ಟೂರ್ನಿಯ ಸಿದ್ಧತೆಗಳನ್ನು ಪರಿಶೀಲಿಸಿದ ನಂತರ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ಭಾರತದ ನೆರೆ ರಾಷ್ಟ್ರಗಳನ್ನು ಒಳಗೊಂಡ ಮಿನಿ ವಿಶ್ವಕಪ್‌ ಮೂಲಕ ಅಂಗವಿಕಲರ ಕ್ರಿಕೆಟ್‌ಗೆ ಮರುಜೀವ ತುಂಬುವುದು ಸಂಸ್ಥೆಯ ಉದ್ದೇಶ. ಇದು ಸಂಸ್ಥೆಯ ಅಧ್ಯಕ್ಷ ಅಜಿತ್‌ ವಾಡೇಕರ್‌ ಅವರ ಕನಸು ಕೂಡ ಆಗಿದೆ ಎಂದು ಹೇಳಿದರು.ರಣಜಿ ಕ್ರಿಕೆಟ್‌ನಲ್ಲಿ ಈ ಬಾರಿ ಮುಂಬೈ ಉತ್ತಮ ಸಾಧನೆ ಮಾಡದೇ ಇರುವುದರ ಕುರಿತು ಬೇಸರ ವ್ಯಕ್ತಪಡಿ ಸಿದ ಮುಂಬೈ ತಂಡದ ಮಾಜಿ ಆಟಗಾರ ರೂ ಆದ ಉಮೇಶ್‌, ‘ಕ್ರಿಕೆಟ್‌ನಲ್ಲಿ ಮುಂಬೈ ತನ್ನ ಪಾರಮ್ಯವನ್ನು ಕಳೆದುಕೊ ಳ್ಳುತ್ತಿದೆ. ಭಾರತ ತಂಡದಲ್ಲೂ ಮುಂಬೈ ಆಟಗಾರರ ಸಂಖ್ಯೆ ಕಡಿಮೆ ಆಗುತ್ತಿದೆ. ಇದು ಬೇಸರದ ವಿಷಯ. ಆದರೆ, ಇದು ಇತರ ರಾಜ್ಯಗಳಲ್ಲಿ ಕ್ರಿಕೆಟ್‌ ಬೆಳೆಯುತ್ತಿರುವುದರ ಸಂಕೇತ. ಅದಕ್ಕೆ ಸಂತಸಪಟ್ಟುಕೊಳ್ಳಬೇಕು’ ಎಂದರು.‘ಭಾರತದ ವೇಗದ ಬೌಲರ್‌ಗಳು ಇತ್ತೀಚೆಗೆ ನಿರೀಕ್ಷಿತ ಪ್ರದರ್ಶನ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ವೇಗಿಗಳನ್ನು ತಯಾರು ಮಾಡಲು ವಿಶೇಷ ಯೋಜನೆ ಹಾಕಿಕೊಳ್ಳಬೇಕಾಗಿದೆ’ ಎಂದು ಹೇಳಿದ ಮಾಜಿ ಎಡಗೈ ವೇಗಿಯೂ ಆದ ಉಮೇಶ್‌, ಯುವ ವೇಗಿ ಮಹಮ್ಮದ್‌ ಶಮಿ ಬಗ್ಗೆ ಮೆಚ್ಚುಗೆ ಮಾತನ್ನಾಡಿ ‘ಶಮಿ ಖಂಡಿತವಾಗಿಯೂ ದೇಶಕ್ಕೆ ಉತ್ತಮ ಕೊಡುಗೆ ನೀಡಬಲ್ಲರು’ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.