‘ಅಂಜದ ಗಂಡು’ ಶೀಘ್ರ ಬಿಡುಗಡೆ

5

‘ಅಂಜದ ಗಂಡು’ ಶೀಘ್ರ ಬಿಡುಗಡೆ

Published:
Updated:

ಪ್ರದೀಪ್ ರಾಜ್, ಶರತ್ ಕುಮಾರ್ ನಿರ್ಮಿಸಿರುವ, ‘ಅಂಜದ ಗಂಡು’ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಪ್ರದೀಪ್ ರಾಜ್ ನಿರ್ದೇಶಿಸಿದ್ದಾರೆ. ರಮೇಶ್ ಛಾಯಾಗ್ರಹಣ, ಡಿ. ಇಮಾಂ ಸಂಗೀತ, -ನಂಜುಂಡಸ್ವಾಮಿ ಕಲಾ ನಿರ್ದೇಶನ ಚಿತ್ರಕ್ಕಿದೆ. ನೀನಾಸಂ ಸತೀಶ್, ಸುಭಿಕ್ಷಾ, ನಾಗಾಭರಣ, ಸುಮನ್, ಚಿಕ್ಕಣ್ಣ, ರಾಜು ತಾಳಿಕೋಟೆ, ಹೊನ್ನವಳ್ಳಿ ಕೃಷ್ಣ ಇತರರು ಅಭಿನಯಿಸಿದ್ದಾರೆ.‘ಜಗ್ಗಿ’ ಹಾಡು–ಪಾಡು

ಎಸ್.ಎನ್.ಎಸ್. ಶ್ರೀನಿವಾಸ ನಿರ್ಮಿಸುತ್ತಿರುವ ‘ಜಗ್ಗಿ’ ಚಿತ್ರದ ‘ಹುಚ್ಚು ಹೆಚ್ಚಾಯ್ತು ನಿನ್ನ ಮೇಲೆ ಕಿಚ್ಚು ಹೆಚ್ಚಾಯ್ತು ನಿನ್ನಿಂದಲೆ’ ಹಾಡಿನ ಚಿತ್ರೀಕರಣ ಮೇಲುಕೋಟೆ ಹಾಗೂ ಜಿ.ಆರ್.ಎಸ್ ಫ್ಯಾಂಟಸಿ ಪಾರ್ಕ್‌ನಲ್ಲಿ ನಡೆಯಿತು.  ಸುಲ್ತಾನ್‌ ರಾಜ್ ನಿರ್ದೇಶಿಸು ತ್ತಿರುವ ಚಿತ್ರಕ್ಕೆ ಸುನಿಲ್‌ ರಾಜ್ ಕಥೆ ಬರೆದಿದ್ದಾರೆ. ಎಲ್ವಿನ್ ಜೋಶ್ವಾ ಸಂಗೀತ, ಈಶ್ವರ್ ಸಂಕಲನವಿದೆ. ರಮೇಶ್‌ ಭಟ್, ಶರತ್‌ ಲೋಹಿತಾಶ್ವ, ಮುನಿ, ಬುಲೆಟ್‌ ಪ್ರಕಾಶ್, ಪೆಟ್ರೋಲ್ ಪ್ರಸನ್ನ ಇತರರು ನಟಿಸಿದ್ದಾರೆ.‘ಮಸ್ತ್ ಮೊಹಬ್ಬತ್’  ಮೊದಲ ಹಂತ ಪೂರ್ಣ

ವಿ. ಶೇಖರ್ ನಿರ್ಮಿಸುತ್ತಿರುವ ‘ಮಸ್ತ್ ಮೊಹಬ್ಬತ್’ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಪ್ರೇಮ್ ನಾಯಕರಾಗಿರುವ ಈ ಚಿತ್ರದ ತಾರಾಬಳಗದಲ್ಲಿ ಪೂನಂ, ನವೀನ್‌ ಕೃಷ್ಣ, ರಾಜು ತಾಳಿಕೋಟೆ, ಸಾಧು ಕೋಕಿಲ, ಸ್ವಯಂವರ ಚಂದ್ರು, ಅಶ್ವಿನ್ ಇತರರಿದ್ದಾರೆ. ಮೋಹನ್ ಮಾಳಗಿ ನಿರ್ದೆಶನದ ಚಿತ್ರಕ್ಕೆ ಮನೋಮೂರ್ತಿ ಸಂಗೀತವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry