ಶನಿವಾರ, ಜನವರಿ 25, 2020
28 °C

‘ಅಂಧತ್ವ ನಿವಾರಣೆಗೆ ಅರೋಗ್ಯ ಇಲಾಖೆ ಬದ್ಧ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಜೇಂದ್ರಗಡ: ‘ಅಂಧತ್ವ ನಿಯಂತ್ರಣಕ್ಕಾಗಿ ಗುಣವಾಗಬಲ್ಲ ಕಾಯಿಲೆಗಳಿಗೆ ಚಿಕಿತ್ಸೆ ಒದಗಿಸಲು ಮತ್ತು ಸಾರ್ವಜನಿಕರಲ್ಲಿ ರೋಗ ತಡೆಗಟ್ಟುವ ವಿಧಾನಗಳ ಕುರಿತು ಪ್ರಸಾರ ಮಾಡುವ ಮೂಲಕ ಕಣ್ಣು ಸಂಬಂಧಿತ ರೋಗಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಆರೋಗ್ಯ ಇಲಾಖೆ ಬದ್ಧವಾಗಿದೆ’ ಎಂದು ಜಿಲ್ಲಾ ಆಯುಷ್‌ ನೂಡಲ್‌ ಅಧಿಕಾರಿ ಡಾ.ಆರ್‌.ವಿ.ಹಿರೇಮಠ ಅಭಿಪ್ರಾಯಪಟ್ಟರು.ಜಿಲ್ಲಾ ಆಯುಷ್‌ ಇಲಾಖೆ ಗದಗ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಗದಗ, ಡಾ.ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಹುಬ್ಬಳ್ಳಿ ಹಾಗೂ ಗ್ರಾಮ ಪಂಚಾಯ್ತಿ ಕಾರ್ಯಾಲಯ ರಾಜೂರ ಮತ್ತು ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ರಾಜೂರ ಆಶ್ರಯದಲ್ಲಿ ರಾಜೂರ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದಲ್ಲಿ ನಡೆದ ‘ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.‘ಭಾರತದಲ್ಲಿ ಅಂಧತ್ವಕ್ಕೆ ಕಣ್ಣಿನ ಪೊರೆಯೇ ಪ್ರಮುಖ ಕಾರಣವಾಗಿದೆ. ಕಣ್ಣಿನ ಪಾರದರ್ಶಕ ಮಸೂರದ ಅಪಾರದರ್ಶಕತೆಯೇ ಕಣ್ಣಿನ ಪೊರೆ. ಒಂದು ವೇಳೆ ಅದು ಮಸಕಾದರೆ ಚಿತ್ರ ರಚನೆಗಾಗಿ ಮಸೂರದ ಮೂಲಕ ಹಾಯ್ದು ರೆಟಿನಾ ತಲುಪುವ ಬೆಳಕಿಗೆ ಅಡಚಣೆ ಉಂಟಾಗುತ್ತದೆ’ ಎಂದರು.‘ಕಣ್ಣಿನ ಪೊರೆ ಉಂಟಾಗಲು ಹೆಚ್ಚುತ್ತಿರುವ ವಯಸ್ಸು, ಕಣ್ಣಿನ ಗಾಯ, ಉರಿಯೂತ, ಮಧುಮೇಹ ಮತ್ತು ಸ್ಟೀರಾಯ್ಡ್‌ಗಳ ದೀರ್ಘಕಾಲಿಕ ಬಳಕೆ, ಮಕ್ಕಳಿಗೆ ಹುಟ್ಟಿದಾಗಿನಿಂದಲೂ ಕಣ್ಣಿನ ಪೊರೆ ಬರಲು ಸಾಧ್ಯವಿದೆ. ಇದಕ್ಕೆ ಗರ್ಭಿಣಿಯಾಗಿರುವ ಸಮಯದಲ್ಲಿ ತಾಯಿಯಿಂದ ಬಂದಿರಬಹುದಾದ ಸೋಂಕು ಸೇರಿದಂತೆ ‘ಹುಟ್ಟಿನಿಂದಲೇ ಕುರುಡುತನವಿದ್ದವರ ಸ್ಥಿತಿ ಒಂದು ವಿಧವಾದರೆ, ಹತ್ತಾರು ವರ್ಷಗಳು ಯಾವುದೇ ತೊಂದರೆ ಇಲ್ಲದೇ ಸಾಮಾನ್ಯವಾಗಿ ಎಲ್ಲವನ್ನೂ ನೋಡಿ, ಇದ್ದಕ್ಕಿದ್ದಂತೆ ನಮ್ಮ ಕಣ್ಣು ಕತ್ತಲಾದರೆ ಅದು ದೈಹಿಕ ಹಾಗೂ ಮಾನಸಿಕ ಸ್ಥಿತಿಯನ್ನು ಕುಗ್ಗಿಸುತ್ತದೆ.

ಇಂತಹ ಸಮಸ್ಯೆಗಳಿಗೆ ಪ್ರಮುಖವಾಗಿ ಮೂರು ರೀತಿಯ ಕಾರಣಗಳಿವೆ. ವಯೋ ಸಹಜ ಸಮಸ್ಯೆ, ವಂಶವಾಹಿಯಿಂದ ಬರುವ ತೊಂದರೆ, ಜೀವನಶೈಲಿಯ ಪರಿಣಾಮ’ ಎಂದರು. ‘ಕಣ್ಣಿನ ದೃಷ್ಟಿ ಕಳೆದುಕೊಂಡವರಿಗೆ ಜೈವಿಕ ತಂತ್ರಜ್ಞಾನದಿಂದ ನಿರ್ಮಿಸಿದ ‘ಜೈವಿಕ ಕಣ್ಣು’  ಅಳವಡಿಸುವ ಒಂದು ವಿನೂತನ ಪ್ರಯೋಗ ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಇದರಿಂದ ದೃಷ್ಟಿ ಹೀನತೆಗೆ ಒಳಗಾದವರು ಸಂಪೂರ್ಣವಲ್ಲದಿದ್ದರೂ ಭಾಗಶಃ ದೃಷ್ಟಿ ಪಡೆದುಕೊಳ್ಳಬಹುದು ಎಂದು ಈ ಸಂಶೋಧನೆ ನಡೆಸಿದ ವಿಜ್ಞಾನಿಗಳು ಅಭಿಪ್ರಾಯ­ಪಟ್ಟಿದ್ದಾರೆ’ ಎಂದರು.

ರಾಜೂರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕಳಕಪ್ಪ ಕಂಬಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನೇತ್ರ ತತ್ಞ ಎಂ.ಎಂ.ಜೋಶಿ, ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಎಲ್‌.ಎಲ್‌.ಮಾನೆ, ನೇತ್ರ ಪರೀಕ್ಷಕ ಲಿಂಗರಾಜ ಲೆಕ್ಕದ, ಡಾ.ಎಂ.ಎ.ಹಾದಿಮನಿ, ಡಾ.ಎಂ.ಎಸ್‌.ದೊಡ್ಡಮನಿ, ಹಿರಿಯ ಆರೋಗ್ಯ ಸಹಾಯಕ ವಿ.ಡಿ.ಬೆನ್ನೂರ, ಸಂತೋಷ ಹಳ್ಳದ,  ಉಪಸ್ಥಿತರಿದ್ದರು.ತಪಾಸಣೆ: ಡಾ.ಡಿ.ಕೆ.ಕುಲಕರ್ಣಿ ಹಾಗೂ ಡಾ.ರಜನಿ ಅವರು 157 ಜನರ ನೇತ್ರ ತಪಾಸಣೆ ನಡೆಸಿದರು. ಇದರಲ್ಲಿ 29 ಜನರನ್ನು ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. 40 ಜನರ ಆಪ್ತ ಸಮಾಲೋಚನೆ ಹಾಗೂ ರಕ್ತ ತಪಾಸಣೆ ನಡೆಸಲಾಯಿತು.ನೀರು ಪೂರೈಕೆ ಇಂದು

ಗದಗ:
ಹುಯಿಲಗೋಳ ರಸ್ತೆ, ರೇವಿಂಗಟನ್ ರೋಡ್, ಕಿಲ್ಲಾ, ವಕ್ಕಲಗೇರಿಯಿಂದ ಟೆಂಗಿನಕಾಯಿ ಬಜಾರ ವರಗೆ, ಜವುಳಹಳ್ಳದ ಉಳಿದ ಭಾಗಗಳು, ಅಂಬಾ ಭವಾನಿ ಸರ್ಕಲ್, ಕಲ್ಮಠ ಓಣಿ, ತುಳಜಾಭವಾನಿ ಗುಡಿ, ಬಣ್ಣದ ನಗರ, ಎಸ್ ಎಂ ಕೆ ನಗರದ ಆಟೋ ಸ್ಟ್ಯಾಂಡ್, ಕ್ರಿಶ್ಚಯನ್ ಕಾಲೋನಿ, ಆಧಿ ಶಕ್ತಿ ಗುಡಿ ಹತ್ತಿರ, ಹುಬ್ಳಿಮಠ ಭಾವಿ ಹತ್ತಿರ , ಚಾಮುಂಡೇಶ್ವರಿ ಗುಡಿ ಹತ್ತಿರ, 12 ನೇ ನಂ, ಶಾಲೆ ಹತ್ತಿರ, 18ಮೀಟರ್ ರೋಡ್ ಭಾಗಗಳಲ್ಲಿ ನೀರು ಪೂರೈಕೆ ಮಾಡಲಾಗುವುದು ಎಂದು ನಗರಸಭೆ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರತಿಕ್ರಿಯಿಸಿ (+)