‘ಅಂಬರೀಶ’ನ ಕುಣಿತ

7

‘ಅಂಬರೀಶ’ನ ಕುಣಿತ

Published:
Updated:

ಕೆ. ಮಹೇಶ್ ಸುಖಧರೆ ನಿರ್ಮಿಸಿ ನಿರ್ದೇಶಿಸುತ್ತಿರುವ ‘ಅಂಬರೀಶ’ ಚಿತ್ರದ ‘ಕೋಡುಗಲ್ಲ ನೆತ್ತಿ ಮೇಲೆ ಬಿಚ್ಚುಗತ್ತಿ ಯೋಧಾ ನಿಂತಾ’ ಎನ್ನುವ ಹಾಡಿಗೆ ಹಿರಿಯ ನಟ ಅಂಬರೀಶ್ ಹೆಜ್ಜೆ ಹಾಕಿದರು. ಚಿನ್ನಿ ಪ್ರಕಾಶ್ ನೃತ್ಯ ಸಂಯೋಜಿಸಿದ್ದರು. ಈ ಚಿತ್ರದಲ್ಲಿ ಅಂಬರೀಶ್ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟ ಸುಮನ್ ಮತ್ತು ೫೦೦ ಮಂದಿ ಸಹ ಕಲಾವಿದರು ಹಾಡಿನಲ್ಲಿ ಪಾಲ್ಗೊಂಡಿದ್ದರು. ಮೂರನೇ ಹಂತದ ಚಿತ್ರೀಕರಣವು ಈಗ ನಗರದ ಸುತ್ತಮುತ್ತ ನಡೆಯುತ್ತಿದೆ.



ದರ್ಶನ್ ಈ ಚಿತ್ರದ ನಾಯಕ. ಪ್ರಿಯಾಮಣಿ, ರಚಿತಾ ರಾಮ್, ತುಳಸಿ, ಶರತ್ ಲೋಹಿತಾಶ್ವ, ರವಿಕಾಳೆ, ಬುಲೆಟ್ ಪ್ರಕಾಶ್, ಸಾಧುಕೋಕಿಲ, ತಿಮ್ಮೇಗೌಡ, ನೆ.ಲ. ನರೇಂದ್ರಬಾಬು ಇತರರು ತಾರಾಗಣದಲ್ಲಿದ್ದಾರೆ.



ಸತ್ಯ ನಾರಾಯಣ್ ಛಾಯಾಗ್ರಹಣ, ಚಿಂತನ್ ಸಂಭಾಷಣೆ, ಕೆ.ಎಂ. ಪ್ರಕಾಶ್ ಸಂಕಲನ ಚಿತ್ರಕ್ಕಿದೆ. ವಿ. ಹರಿಕೃಷ್ಣ  ಸಂಗೀತ ನಿರ್ದೇಶಕ, ನಾಗೇಂದ್ರ ಪ್ರಸಾದ್ ಸಾಹಿತ್ಯ ಚಿತ್ರಕ್ಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry