ಭಾನುವಾರ, ಜೂನ್ 13, 2021
25 °C

‘ಅಂಬೇಡ್ಕರ್‌ ಕುರಿತು ಸಂಶೋಧನೆ ಅವಶ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆನೇಕಲ್‌: ‘ಅಂಬೇಡ್ಕರ್‌ ಅವರ ಜೀವನ ಸಾಧನೆಗಳ ಬಗ್ಗೆ ಹೆಚ್ಚಿನ ಸಂಶೋಧ­ನೆಗಳು ನಡೆಯಬೇಕಾದ ಅವ­ಶ್ಯಕತೆ­ಯಿದೆ’ ಎಂದು ಸಾಹಿತಿ ಕೆ.ಎಸ್.ಭಗ­ವಾನ್‌ ಹೇಳಿದರು.ಅವರು ತಾಲ್ಲೂಕಿನ ಜಿಗಣಿ ಲಿಂಕ್‌ ರಸ್ತೆಯ ಕಾವೇರಪ್ಪ ಸಭಾಂಗಣದಲ್ಲಿ ಪ್ರಜ್ವಲ ಪ್ರಕಾಶನದ ವತಿಯಿಂದ ಆಯೋ­ಜಿಸಿದ್ದ ಚಳವಳಿಗಳ ಶಕ್ತಿ ಮತ್ತು ಮಹತ್ವ ಎಂಬ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.ಒಬ್ಬ ಮಹಾನ್ ವ್ಯಕ್ತಿಯ ಬಗ್ಗೆ ಸಮಗ್ರ ಅಧ್ಯಯನ ಮಾಡುವುದರಿಂದ ಅವರ ಬಗ್ಗೆ ಅಭಿಮಾನ ಬೆಳೆಯುತ್ತದೆ. ಜೀವನಕ್ಕೊಂದು ಗುರಿ ದೊರೆಯುತ್ತದೆ ಹಾಗಾಗಿ ಯುವಕರು ಹೋರಾಟ­ಗಾ­ರರು ಅಂಬೇಡ್ಕರ್‌ ಅವರ ಕೃತಿಗಳನ್ನು ಅಧ್ಯಯನ ಮಾಡಬೇಕು ಎಂದು ಅವರು ಹೇಳಿದರು.ಗಾಯಕ ಡಾ.ಬಾನಂದೂರು ಕೆಂಪಯ್ಯ ಅವರು ಮಾತನಾಡಿ, ‘ಸಂಘ­ಟನೆ­ಗಳು ಪ್ರಾಮಾಣಿಕತೆ ಹಾಗೂ ಬದ್ಧ­ತೆಯ ಕೊರತೆಯಿಂದ ದಿಕ್ಕು ತಪ್ಪಿವೆ. ದಲಿತ ಚಳವಳಿಗಳು ಗುರಿಯನ್ನು ತಲು­ಪುವಲ್ಲಿ ಯಶಸ್ವಿಯಾಗದೆ ವಿಫಲವಾ­ಗುತ್ತಿವೆ’ ಎಂದು ವಿಷಾದಿಸಿದರು.‘ಸಂಕುಚಿತ ಮನೋಭಾವನೆಗಳಿಂದ ಪಂಗಡ–ಒಳಪಂಗಡಗಳ ಬೇಲಿ ನಿರ್ಮಿ­ಸಿಕೊಂಡು ಸಂಘಟನೆಗಳು ನರಳುತ್ತಿವೆ. ಅಂಬೇಡ್ಕರ್‌ ಅವರ ಆಶಯಗಳನ್ನು ಈಡೇರಿಸುವಲ್ಲಿ ವಿಫಲವಾಗಿ ವಿಶಾಲ ಮನೋ­ಭಾವನೆಯಿಂದ ದೂರ­ವಾ­ಗಿದೆ. ಸಮುದಾಯದ ಯುವ ಶಕ್ತಿ­ಯನ್ನು ಎಚ್ಚರಿಸಿ ಜೀವ ತುಂಬುವ ಕಾರ್ಯ­ವಾಗಬೇಕು’ ಎಂದು ಅವರು ತಿಳಿಸಿದರು.ಕಾರ್ಯಕ್ರಮದಲ್ಲಿ ಉಪನ್ಯಾಸಕ ದೇವರಾಜು ರಚಿಸಿರುವ ‘ಮುಂಬೈ ಮಹಾಯಾತ್ರೆ’ ಎಂಬ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಪ್ರೊ.ಮಾಯಿ­ಗೌಡ, ‘ಮಹಾನ್ ವ್ಯಕ್ತಿಗಳ ಜನ್ಮಸ್ಥಳ ಹಾಗೂ ಸಮಾಧಿ ಸ್ಥಳಗಳು ಶಕ್ತಿಯ ಕೇಂದ್ರಗಳಾಗುತ್ತವೆ. ಈ ನಿಟ್ಟಿನಲ್ಲಿ ಅಂಬೇಡ್ಕರ್‌ ಅವರ ಕಾರ್ಯ­ಕ್ಷೇತ್ರ­ವಾಗಿದ್ದ ಮುಂಬೈನ ದಾದರ್‌0ಗೆ ಪ್ರವಾಸ ಕೈಗೊಳ್ಳುವುದರಿಂದ ಅವರ ಹೋರಾಟ ಕೆಚ್ಚುಸ್ವಾಭಿಮಾನ ನಮ್ಮಲ್ಲಿ ಬೆಳೆಯುತ್ತದೆ. ಇದರ ಅನು­ಭವ­ವನ್ನು ಬಿಚ್ಚಿಡುವ ಮುಂಬೈ ಮಹಾಯಾತ್ರೆ ಕೃತಿ ಶ್ಲಾಘನೀಯ’ ಎಂದು ಅವರು ಹೇಳಿದರು.ಈ ಸಂದರ್ಭದಲ್ಲಿ ಪ್ರಗತಿಪರ ಚಿಂತಕ ಜಿಗಣಿ ಶಂಕರ್‌, ಮುಖಂಡ­ರಾದ ಗೋಪಾಲಕೃಷ್ಣ, ಅಳ್ಳಳ್ಳಪ್ಪ ಎಳ್ಳಕುಂಟೆ, ನಾರಾಯಣಸ್ವಾಮಿ, ಜೇನು­ಗೂಡು ವೇದಿಕೆಯ ಮಹೇಶ್‌ ಊಗಿನಹಳ್ಳಿ ಸೇರಿದಂತೆ ಮತ್ತಿತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.