ಬುಧವಾರ, ಫೆಬ್ರವರಿ 24, 2021
23 °C

‘ಅಂಬೇಡ್ಕರ್‌ ಜೀವನಗಾಥೆಯೇ ಮಾರ್ಗದರ್ಶನ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಅಂಬೇಡ್ಕರ್‌ ಜೀವನಗಾಥೆಯೇ ಮಾರ್ಗದರ್ಶನ’

ಹುಕ್ಕೇರಿ: ‘ಡಾ.ಬಾಬಾಸಾಹೇಬ್‌ ಅಂಬೇಡ್ಕರ್ ಅವರ ಜೀವನಗಾಥೆಯೇ ತುಳಿತಕ್ಕೆ ಒಳಗಾದ ಜನರಿಗೆ ಮಾರ್ಗ ದರ್ಶನ’ ಎಂದು ತಹಶೀಲ್ದಾರ್ ಎಸ್.ಎಸ್.ಬಳ್ಳಾರಿ ಹೇಳಿದರು.ಪಟ್ಟಣದಲ್ಲಿ ಇತ್ತೀಚಿಗೆ ಅಂಬೇಡ್ಕರ್ ನಗರದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 123ನೇ ಜಯಂತಿ ಉದ್ಘಾಟಿಸಿ ಮಾತನಾಡಿದರು.ಡಾ.ಅಂಬೇಡ್ಕರ್ ಅವರು ರಾಷ್ಟ್ರ ನಾಯಕರಾಗಿರುವುದರಿಂದ ಅವರನ್ನು ಒಂದೇ ಜಾತಿಗೆ ಸಿಮಿತಗೊಳಿಸದೆ ಅವರ ತತ್ವ ಮತ್ತು ಜೀವನದ ಹೋರಾಟ ವನ್ನು ಎಲ್ಲರೂ ಅನುಸರಿಸಬೇಕು ಎಂದು ತಿಳಿಸಿದರು.ಡಾ.ಅಂಬೇಡ್ಕರ್ ಅವರಿಗೆ ಗೌರವ ಸನ್ಮಾನ ಸಲ್ಲಬೇಕಾದರೆ ಪರಿಶಿಷ್ಟರು ಸಮಾಜದ ಮುಖ್ಯ ವಾಹಿನಿಗೆ ಬಂದಾಗ ಮಾತ್ರ ಸಾಧ್ಯವಾಗುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಉದಯ ಹುಕ್ಕೇರಿ ಮಾತನಾಡಿ, ಹಿಂದುಳಿದ ಮತ್ತು ಪರಿಶಿಷ್ಟರು ಮೊದಲು ಶಿಕ್ಷಣ ಪಡೆಯಬೇಕು. ಅದರ ಮೂಲಕ ಸಮಾ ಜದಲ್ಲಿನ ಉನ್ನತ ಹುದ್ದೆ ಅಲಂಕರಿಸಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಯರನಾಳದ ಬ್ರಹ್ಮಾನಂದ ಸ್ವಾಮೀಜಿ ಮಾತನಾಡಿ ನಮಗೆ ಜ್ಞಾನ, ಅನ್ನ ಮತ್ತು ನೆರವು ನೀಡಿದ ಜನರನ್ನು ಮರೆಯಬಾರದು. ಶಿಷ್ಟರಾಗಿ ಸಮಾಜದ ಉದ್ದಾರಕ್ಕೆ ಶ್ರಮಿಸಬೇಕು ಎಂದರು.ಎಸ್.ಎಸ್.ಎನ್. ಕಾಲೇಜಿನ ಹಿರಿಯ ಪ್ರಾಧ್ಯಾಪಕ ಪಿ.ಜಿ.ಕೊಣ್ಣೂರ ಮತ್ತು ಕಸಾಪ ಮಾಜಿ ಅಧ್ಯಕ್ಷ,ನಿವೃತ್ತ ಉಪನ್ಯಾಸಕ ಡಿ.ವಿ.ಛಲವಾದಿ ಉಪನ್ಯಾಸ ನೀಡಿದರು. ಪಿಎಸ್ಐ. ಎಚ್.ಡಿ.ಮುಲ್ಲಾ, ಪ.ಪಂ.ಸದಸ್ಯ ಮಹಾವೀರ ನಿಲಜಗಿ, ಮುಖ್ಯ ಶಿಕ್ಷಕಿ ಎಸ್.ಎಸ್.ಹೊಳೆಪ್ಪಗೋಳ, ಸುನೀಲ ಭೈರಣ್ಣವರು ಭಾಗವಹಿಸಿದ್ದರು.ಸತ್ಕಾರ: ಇದೆ ಸಂದರ್ಭದಲ್ಲಿ ನಿಸ್ವಾರ್ಥ ಸೇವೆಯಿಂದ ಸಮಾಜಕ್ಕೆ ಸೇವೆ ಸಲ್ಲಿಸಿದ ಕರೆಪ್ಪ ಕಲ್ಲನ್ನವರ ಅವರನ್ನು ಸ್ವಾಮೀಜಿ ಸತ್ಕರಿಸಿದರು.ಅಮರ ಮಾಳಗೆ ಸ್ವಾಗತಿಸಿದರು. ಅಕ್ಕಪ್ಪ ರಾಣವಗೋಳ ನಿರೂಪಿಸಿದರು. ಶಿಕ್ಷಕ ಸಾಗರ ಮಾಳಗೆ ವಂದಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.