‘ಅಕ್ರಮ ಗಣಿಗಾರಿಕೆಯಲ್ಲಿ ನಾನು ಭಾಗಿಯಾಗಿಲ್ಲ’

7

‘ಅಕ್ರಮ ಗಣಿಗಾರಿಕೆಯಲ್ಲಿ ನಾನು ಭಾಗಿಯಾಗಿಲ್ಲ’

Published:
Updated:

ಬಳ್ಳಾರಿ: ‘ಅಕ್ರಮ ಗಣಿಗಾರಿಕೆಯಲ್ಲಿ ನಾನು ಭಾಗಿಯಾಗಿಲ್ಲ. ನನ್ನನ್ನು ಕಳಂಕಿತ ಎನ್ನುವವರು ಆ ಕುರಿತ ದಾಖಲೆಗಳನ್ನು ಬಹಿರಂಗಪಡಿಸಲಿ’ ಎಂದು ಶಾಸಕ ಅನಿಲ್‌ ಲಾಡ್‌ ಮಂಗಳವಾರ ಇಲ್ಲಿ ಸವಾಲು ಹಾಕಿದರು. ‘ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಹಾಗೂ ಸಮಾಜ ಪರಿವರ್ತನ ಸಮುದಾಯದ ಎಸ್‌.ಆರ್‌. ಹಿರೇಮಠ ಅವರು ನನ್ನನ್ನು ಕಳಂಕಿತ ಎಂದು ಬಿಂಬಿಸಿದ್ದಾರೆ. ಅವರು ಅಕ್ರಮಗಳ ಕುರಿತ ದಾಖಲೆಗಳನ್ನು ಹಾಜರುಪಡಿಸಲಿ. ಈ ಕುರಿತು ಬಹಿರಂಗ ಚರ್ಚೆಗೂ ನಾನು ಸಿದ್ಧ’ ಎಂದರು.



‘ನನ್ನ ವಿರುದ್ಧ ಅಕ್ರಮ ಗಣಿಗಾರಿಕೆ ಆರೋಪ ಇಲ್ಲ. ಬೇಲೆಕೇರಿ ಬಂದರಿನಿಂದ ಅದಿರು ಸಾಗಿಸಿರುವ ಕುರಿತ ದಾಖಲೆಗಳನ್ನು್ನ ಈಗಾಗಲೇ ಸಿಬಿಐಗೆ ಸಲ್ಲಿಸಿದ್ದೇನೆ’ ಎಂದು ಅವರು ವಿವರಿಸಿದರು. ‘ಸಂತೋಷ್ ಲಾಡ್‌ ವಿರುದ್ಧವೂ ಅಕ್ರಮ ಗಣಿಗಾರಿಕೆಯ ಆರೋಪವಿದೆ. ಆದರೂ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ನಾನೂ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ಅದಕ್ಕಾಗಿ ಇನ್ನೂ ಆರೂ ತಿಂಗಳು ಕಾಯುವೆ’ ಎಂದರು.



ಬಳ್್ಳಾರಿ ನಗರವೂ ಒಳಗೊಂಡಂತೆ ಜಿಲ್ಲೆಯ ಅಭಿವೃದ್ಧಿಗೆ ಪಕ್ಷದ ಕೆಲವು ಹಿರಿಯ ಮುಖಂಡರು ಅಡ್ಡಿಯಾ­ಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ‘ಕೆಲವರು ನನ್ನ ವಿರುದ್ಧ ಹೈಕಮಾಂಡ್‌ಗೆ ಪತ್ರ ಬರೆದಿದ್ದಾರೆ. ಕಳೆದ 20 ವರ್ಷಗಳಿಂದ ಅಧಿಕಾರ ಅನುಭವಿಸಿದ ಅವರು ಈಗ ಮಾರ್ಗದರ್ಶನ ನೀಡಬೇಕು.

ಅದನ್ನು ಬಿಟ್ಟು ಅವರೇ ಆಡಳಿತ ನಡೆಸುವವರಂತೆ ವರ್ಗಾವಣೆ ಹಾಗೂ ಅಭಿವೃದ್ದಿ ವಿಷಯದಲ್ಲಿ ಅಡ್ಡಿಯಾಗುತ್ತಿದ್ದಾರೆ' ಎಂದು ಅವರು ಹರಿಹಾಯ್ದರು. ‘ಬಳ್ಳಾರಿಯ ಜನತೆ ಬದಲಾವಣೆ ಬಯಸಿ ನನಗೆ ಮತ ನೀಡಿದ್ದಾರೆ. ಅವರ ಸೇವೆಗೆ ನಾನು ಸದಾ ಸಿದ್ಧನಿದ್ದೇನೆ. ನನ್ನನ್ನು ಹೊರಗಿನವನು ಎಂದು ಬಿಂಬಿಸಬಾರದು’  ಎಂದು ಕೋರಿದರು.

‘ನನ್ನ ವಿರುದ್ಧ ಯಾವುದೇ ಆರೋಪಗಳಿಲ್ಲ’

ಧಾರವಾಡ:
‘ನನ್ನ ಅಣ್ಣ ಅನಿಲ್‌ ಲಾಡ್ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿ­ರುವಂತೆ ನನ್ನ ಮೇಲೆ ಯಾವುದೇ ರೀತಿಯ ಆರೋಪಗಳಿಲ್ಲ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.



ನಗರದಲ್ಲಿ ಈ ಸ್ಪಷ್ಟನೆ ನೀಡಿದ ಅವರು, ‘ಅನಿಲ್‌ ಬಳ್ಳಾರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ– ಅಕ್ರಮ ಗಣಿ ಕುರಿತು ಇಬ್ಬರ ವಿರುದ್ಧವೂ ಆರೋಪಗಳಿವೆ. ಆದರೆ, ಸಂತೋಷ್ ಲಾಡ್ ಅವರಿಗೆ ಸಚಿವ ಸ್ಥಾನ ನೀಡಿ ನನ್ನನ್ನು ಕೈ ಬಿಡಲಾಗಿದೆ. ಪಕ್ಷದ ಮುಖಂಡರಿಗೆ ನನ್ನ ಮೇಲೆ ವೈಯಕ್ತಿಕ ದ್ವೇಷ ಇರಬಹುದು ಎಂದು ಹೇಳಿದ್ದಾರೆ. ಇದು ಸತ್ಯಕ್ಕೆ ದೂರವಾಗಿದೆ. ಈ ಕುರಿತು ಪಕ್ಷದ ವೇದಿಕೆಯಲ್ಲಿ ಅವರು ಚರ್ಚಿಸಬಹುದಿತ್ತು. ಅದರ ಬದಲು ಮಾಧ್ಯಮದ ಎದುರು ಪ್ರಸ್ತಾಪಿಸಿದ್ದು ತಪ್ಪು' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry