ಶನಿವಾರ, ಜೂನ್ 19, 2021
26 °C

‘ಅಖಂಡ ಸೇವಾಭಾಗ್ಯ ನಿಧಿ’ ಕಾರ್ಯಕ್ರಮ ಮುಂದೂಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಚುನಾವಣೆ ಕಾರಣ­ದಿಂದ ಬೇರೆ ಬೇರೆ ಇಲಾಖೆಗಳಲ್ಲಿ ಅನುಮತಿ ಪಡೆದುಕೊಳ್ಳಬೇಕಾಗಿ­ರುವು­­­ದರಿಂದ  ಮಾ.20 ರಂದು ನಡೆಯ­ಬೇಕಿದ್ದ ‘ಅಖಂಡ ಸೇವಾ­ಭಾಗ್ಯ ನಿಧಿ’ ಕಾರ್ಯಕ್ರಮ­ವನ್ನು ಮುಂದೂ­­ಡ­ಲಾಗಿದೆ’ ಎಂದು ಅಮೃತವರ್ಷಿಣಿ ಸಂಘ­ಟ­ನೆಯ ಸದಸ್ಯ ಸಂಗೀತ ನಿರ್ದೇಶಕ ಕೆ.ಎಸ್.ಎಲ್.ಸ್ವಾಮಿ ಹೇಳಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತ­ನಾಡಿದ ಅವರು, ‘ಮೂತ್ರ­ಪಿಂಡ ವೈಫಲ್ಯಕ್ಕೆ ತುತ್ತಾಗಿ ಡಯಾಲಿ­ಸಿಸ್ ಚಿಕಿತ್ಸೆಗೆ ಒಳಗಾಗುತ್ತಿ

ರವವರ ಸಹಾ­ಯಾ­ರ್ಥ­ವಾಗಿ ನಿಧಿ ಸಂಗ್ರಹ­ಣೆಯ ಉದ್ದೇಶ­ದಿಂದ ಕಾರ್ಯಕ್ರಮ­ವನ್ನು ಹಮ್ಮಿ­ಕೊಳ್ಳ­ಲಾಗಿತ್ತು. ಚುನಾ­ವಣಾ ಆಯೋ­ಗದ ಅನುಮತಿ ಸಿಕ್ಕ ನಂತರ ಮುಂದಿನ ದಿನಾಂಕವನ್ನು ತಿಳಿಸುತ್ತೇವೆ’ ಎಂದರು.‘ಕಾರ್ಯಕ್ರಮದಲ್ಲಿ ಚಿತ್ರನಟ–ನಟಿಯರು ಮತ್ತು ಗಾಯಕರು ಭಾಗವಹಿಸಲಿದ್ದು, ಸಾರ್ವಜನಿಕರು ತಮ್ಮ ನೆಚ್ಚಿನ ನಟರಿಗೆ ನೇರವಾಗ ದೇಣಿಗೆ ನೀಡಬಹುದು. ಸಂಗ್ರಹ­ವಾದ ಎಲ್ಲಾ ಹಣವನ್ನು ಬೆಂಗ­ಳೂರು ಕಿಡ್ನಿ ಪ್ರತಿಷ್ಠಾನಕ್ಕೆ ನೀಡಲಾಗುತ್ತದೆ’ ಎಂದು ಅವರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.